ಕೊರೊನಾ ಸೋಂಕಿತರಿಂದ ವೈದ್ಯರು ಇನ್ನಿತರೆ ಸಿಬ್ಬಂದಿ ರಕ್ಷಣೆಗೆ ‘ಟೆಲಿ ಐಸಿಯು ಕಾರ್ಟ್’
ಮೈಸೂರು

ಕೊರೊನಾ ಸೋಂಕಿತರಿಂದ ವೈದ್ಯರು ಇನ್ನಿತರೆ ಸಿಬ್ಬಂದಿ ರಕ್ಷಣೆಗೆ ‘ಟೆಲಿ ಐಸಿಯು ಕಾರ್ಟ್’

July 3, 2020

ಸೋಂಕಿತರಿಗೆ ದೂರದಿಂದಲೇ ಸುರಕ್ಷಿತ ಚಿಕಿತ್ಸಾ ವಿಧಾನ

ಬೆಂಗಳೂರು, ಜು.2(ಕೆಎಂಶಿ)-ಕೋವಿಡ್ ಸೋಂಕಿತರಿಂದ ವೈದ್ಯರು ಮತ್ತು ವೈದ್ಯಕೀಯ ತಂಡವನ್ನು ರಕ್ಷಿಸುವಂತಹ ಟೆಲಿ ಐಸಿಯು ಕಾರ್ಟ್ ಎಂಬ ಆಧುನಿಕ ತಂತ್ರಜ್ಞಾನಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಟೆಲಿ ಐಸಿಯು ಕಾರ್ಟ್ ಸಮರ್ಪಣೆ ಮಾಡಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಕೋವಿಡ್ ರೋಗಿಗಳನ್ನು ವಾರ್ಡ್‍ಗೆ ಹೋಗದೇ ಕುಳಿತಲ್ಲೇ ಪರೀಕ್ಷೆ ಮಾಡುವ ಯಂತ್ರ ಇದಾಗಿದೆ.

ಐಸಿಯು ವಾರ್ಡ್‍ಗೆ ಡಾಕ್ಟರ್‍ಗಳು ಹೋಗದೇ ಚಿಕಿತ್ಸೆ ನೀಡುವ ಹೊಸ ತಂತ್ರಗಾರಿಕೆ ಇದಾಗಿದೆ ಎಂದರು. ವಿಕ್ಟೋರಿಯಾ ಆಸ್ಪತ್ರೆ ರೋಗಿ ಜೊತೆ ಇದೇ ಸಂದರ್ಭದಲ್ಲಿ ಮಾತನಾಡಿ, ತಂತ್ರಗಾರಿಕೆಯ ಪ್ರಯೋಜನವನ್ನು ಮಾಧ್ಯಮದ ಮುಂದಿಟ್ಟರು. ವೈದ್ಯರು ರೋಗಿಗೆ ಈ ತಂತ್ರಜ್ಞಾನದ ಮೂಲಕ ಚಿಕಿತ್ಸೆ ನೀಡಬಹುದು. ಎಲ್ಲಾ ಆಸ್ಪತ್ರೆಗಳಲ್ಲಿ ಕೂಡ ಇದನ್ನು ಬಳಕೆ ಮಾಡಬಹುದು ಎಂದರು. ವೈದ್ಯ ಸಮೂಹ ಉಳಿಸಬೇಕು ಅಂದರೆ, ಈ ತಂತ್ರಜ್ಞಾನದ ಅವಶ್ಯಕತೆ ಇದೆ. ಇಡೀ ವೈದ್ಯಕೀಯ ತಂಡವನ್ನು ರಕ್ಷಿಸಲು ಸಹಾಯ ಮಾಡುವ ಒಂದು ವೇದಿಕೆಯಾಗಿದೆ ಹಾಗೂ ಸೋಂಕಿತರಿಗೆ, ಮಾನಸಿಕ ಸಲಹೆಗಾರರಿಂದ ಭಾವನಾತ್ಮಕ ಬೆಂಬಲ ಪಡೆಯುವುದನ್ನು ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡಲು ಸಿಸ್ಕೋ ವೇದಿಕೆ ಸಹಾಯ ಮಾಡುತ್ತದೆ. ಸಿಸ್ಕೋ ಪರಿಹಾರವು ಕೇವಲ ಐಟಿ ಅಪ್ಲಿಕೇಶನ್ ಆಗಿರದೆ, ಇದು ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರಿಗೆ ಸ್ಕ್ರೀನಿಂಗ್, ಹೋಮ್ ಕ್ವಾರಂಟೈನ್, ಇನ್ಸ್ಟಿಟ್ಯೂಷನ್ ಕ್ವಾರಂಟೈನ್, ಐಸೋಲೇಷನ್, ಐಸಿಯು ಕಾರ್ಟ್ ಮತ್ತು ಎಲ್ಲಾ ಐಸಿಯು ಸಲಕರಣೆಗಳಿಗೆ ದೈಹಿಕ ಸಂಪರ್ಕ, ಇದು ರೋಗಿಗಳಿಂದ ತ್ವರಿತ ವೈದ್ಯಕೀಯ ಸೂಚ್ಯಂಕಗಳು (ಐive ಗಿiಣಚಿಟs) (ಇಅಉ, ಖಿemಠಿಚಿಡಿeಣuಡಿe, Puಟse, ಇತ್ಯಾದಿ) ತೆಗೆದುಕೊಳ್ಳುತ್ತದೆ ಮತ್ತು ಲೈವ್ ವಿಡಿಯೋ ಮೂಲಕ, ರೋಗಿಯ ಪ್ರತಿಯೊಂದು ಅಂಗಗಳ ವಿಶ್ಲೇಷ ನಿಗ್ರಹಣೆ ತ್ವರಿತ, ನಿಖರ ಮತ್ತು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ವೈದ್ಯರಿಗೆ ಸಹಾಯ ಮಾಡುತ್ತದೆ ಲೈವ್ ವಿಡಿಯೋ ಸೇರಿದಂತೆ ಎಲ್ಲಾ ಹಂತಗಳಲ್ಲಿ ಸಮಾಲೋಚನೆ ಮತ್ತು ಅಗತ್ಯ ಸಲಕರಣೆಗಳೊಂದಿಗೆ ಆನ್‍ಲೈನ್ ಚಿಕಿತ್ಸೆಯನ್ನು ಸಿಸ್ಕೋ ಮಾಡುತ್ತದೆ ಎಂದರು. ಸೋಂಕಿತರಿಗೆ, ಮಾನಸಿಕ ಸಲಹೆಗಾರರಿಂದ ಭಾವನಾತ್ಮಕ ಬೆಂಬಲ ಪಡೆಯುವು ದನ್ನು ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡಲು ಸಿಸ್ಕೋ ವೇದಿಕೆ ಸಹಾಯ ಮಾಡುತ್ತದೆ.

Translate »