ಸರ್ಕಾರಿ ಶಾಲೆಗೆ ೬೦ ಲಕ್ಷಕ್ಕೂ ಅಧಿಕ ಮೌಲ್ಯದ ಎರಡೂವರೆ ಎಕರೆ ಭೂಮಿ ದಾನ
ಮೈಸೂರು

ಸರ್ಕಾರಿ ಶಾಲೆಗೆ ೬೦ ಲಕ್ಷಕ್ಕೂ ಅಧಿಕ ಮೌಲ್ಯದ ಎರಡೂವರೆ ಎಕರೆ ಭೂಮಿ ದಾನ

February 17, 2022

ಎಸ್.ಬಿ.ದೇವರಾಜ
ಮೈಸೂರು, ಫೆ.೧೬- ಶಾಲಾ-ಕಾಲೇಜಿನಲ್ಲಿ ಧರ್ಮ ಸಂಕೇತ ವಸ್ತç ಧರಿಸುವ ವಿಚಾರವಾಗಿ ವಿವಾದ ಮುಂದುವರೆದಿರುವ ಸಂದರ್ಭದಲ್ಲಿ ಮುಸ್ಲಿಂ ಕುಟುಂಬವೊAದು ಸರ್ಕಾರಿ ಶಾಲೆಗೆ ಎರಡೂವರೆ ಎಕರೆ ಭೂಮಿಯನ್ನು ದಾನ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ.

ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕು ಹಂಪಾ ಪುರ ಹೋಬಳಿ ಬಾಚೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಲೇಟ್ ಮಹಮ್ಮದ್ ಜಾಫರ್ ಕುಟುಂಬದವರು ಶಾಲೆ ಸಮೀಪದ ಭೂಮಿಯನ್ನು ದಾನ ನೀಡಿದ್ದಾರೆ. ಗ್ರಾಮದ ಸರ್ವೆ ನಂಬರ್ ೩೪ರಲ್ಲಿರುವ ಒಟ್ಟು ನಾಲ್ಕು ಎಕರೆ ಜಮೀನಿನ ಪೈಕಿ ೨ ಎಕರೆ ೨೦ ಗುಂಟೆ ಖುಷ್ಕಿ ಜಮೀನನ್ನು ರಾಜ್ಯಪಾಲರ ಪರವಾಗಿ ಶಾಲೆಯ ಮುಖ್ಯಶಿಕ್ಷಕ ಮರಿಕಾಳಯ್ಯ ಮೂಲಕ ಶಾಲೆ ಹೆಸರಿಗೆ ನಿನ್ನೆ (ಫೆ.೧೫) ನೋಂದಣ ಮಾಡಿಸಿ, ದಾನಪತ್ರವನ್ನು ಶಿಕ್ಷಕರಿಗೆ ಹಸ್ತಾಂತರಿಸಿದ್ದಾರೆ. ಈ ಜಮೀನಿನ ಮಾರು ಕಟ್ಟೆ ಬೆಲೆ ೬೦ ಲಕ್ಷ ರೂ.ಗೂ ಹೆಚ್ಚಿರಬಹುದು.

ಪಿತ್ರಾರ್ಜಿತವಾಗಿ ಬಂದಿರುವ ಈ ಜಮೀನು ಹಾಲಿ ನಮ್ಮ ಹೆಸರಿಗೆ ಪೌತಿ ಖಾತೆಯಾಗಿ ಸಂಪೂರ್ಣ ಸ್ವಾಧೀನಾನುಭವದಲ್ಲಿದ್ದು, ಬಾಚೇಗೌಡನಹಳ್ಳಿ ಗ್ರಾಮದಲ್ಲಿ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಶಾಲಾ ಕಟ್ಟಡ ನಿರ್ಮಾಣಮಾಡಲು ಬೇರೆ ಕಡೆ ಯಾವುದೇ ಸ್ಥಳಾವಕಾಶವಿಲ್ಲದ ಕಾರಣ ನಮ್ಮ ಎರಡೂವರೆ ಎಕರೆ ಜಮೀನನ್ನು ರಾಜ್ಯ ಪಾಲರ ಮುಖಾಂತರ ಸಂಬAಧಪಟ್ಟ ಇಲಾಖೆಗೆ ದಾನವಾಗಿ ಕೊಟ್ಟಿರುತ್ತೇವೆ. ಇನ್ನು ಮುಂದೆ ಈ ಸ್ವತ್ತಿಗೆ ಕರ್ನಾಟಕ ರಾಜ್ಯ ಸರ್ಕಾರವೇ ಮಾಲೀಕರಾಗಿದ್ದು, ಈ ಸ್ವತ್ತನ್ನು ಶಾಲಾ ಮಕ್ಕಳ ಅನುಕೂಲಕ್ಕಾಗಿ ಮಾತ್ರ ಉಪಯೋಗಿಸಿಕೊಳ್ಳುವುದು. ವೈಯಕ್ತಿಕ ಉಪಯೋಗಕ್ಕಾಗಿ ಯಾರಿಗೂ ಹಕ್ಕಿರುವುದಿಲ್ಲ. ಇನ್ನು ಮುಂದೆ ಈ ಸ್ವತ್ತಿಗೆ ಸರ್ಕಾರಕ್ಕೆ ಸಂಪೂರ್ಣ ಹಕ್ಕು ಇದ್ದು, ಇದರಲ್ಲಿ ಶಾಲೆಗೆ ಸಂಬAಧಪಟ್ಟ ಕಟ್ಟಡ ವಗೈರೆ ನಿರ್ಮಿಸಲು ಯಾವುದೇ ತಂಟೆ-ತಕರಾರು ಇರುವುದಿಲ್ಲ. ಈ ಜಮೀನು ಗ್ರಾಮ ಠಾಣಾ ವ್ಯಾಪ್ತಿಯಲ್ಲಿದ್ದು ನಮ್ಮನ್ನು ಹೊರತುಪಡಿಸಿ ಬೇರೆ ಯಾರು ಹಕ್ಕುದಾರರು, ವಾರಸುದಾರರು ಇರುವುದಿಲ್ಲ. ಹಾಗೇನಾದರೂ ಇದ್ದಲ್ಲಿ ನಾವುಗಳೇ ಪರಿಹರಿಸಿಕೊಡುತ್ತೇವೆ ಎಂದು ಮಹಮ್ಮದ್ ಜಾಫರ್ ಅವರ ಪುತ್ರ ಮಹಮ್ಮದ್ ರಾಖೀಬ್ ದಾನಪತ್ರ ಬರೆದುಕೊಟ್ಟಿದ್ದಾರೆ. ಇದಕ್ಕೆ ಮಹಮ್ಮದ್ ರಾಖೀಬ್ ಒಡಹುಟ್ಟಿದವರಾದ ಮಹಮ್ಮದ್ ರಫಿಕ್, ಮಹಮ್ಮದ್ ಫಾರೂಕ್ ಅಹಮದ್, ಮಹ ಮ್ಮದ್ ರಾಜಿಕ್, ಗುಲ್ಜಾರ್ ಬೇಗಂ, ಗುಲ್ನಾಜ್ ಬೇಗಂ ಅವರೂ ಸಹಮತ ವ್ಯಕ್ತಪಡಿಸಿ, ದಾನಪತ್ರಕ್ಕೆ ಸಹಿ ಹಾಕಿದ್ದಾರೆ. ಅಲ್ಲದೆ ಮಹಮ್ಮದ್ ರಾಖೀಬ್ ಅವರ ಪತ್ನಿ, ನಾಲ್ವರು ಪುತ್ರರೂ ಕುಟುಂಬದ ಸಾರ್ಥಕ ಸೇವೆಯನ್ನು ಬೆಂಬಲಿಸಿದ್ದಾರೆ. ಗ್ರಾಮದ ಯಜಮಾನರುಗಳು ಸೇರಿದಂತೆ ಎಲ್ಲಾ ನಿವಾಸಿಗಳು, ಎಸ್‌ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಾಲೆ ಶಿಕ್ಷಕರ ಮನವಿಯಂತೆ ಶಾಲೆ ಸಮೀಪದ ಜಮೀನನ್ನು ಉಚಿತವಾಗಿ ನೀಡಿದ್ದಾರೆ. ಜಾಫರ್ ಅವರ ಕುಟುಂಬದವರನ್ನು ಮನವೊಲಿಸಿ, ಶಾಲೆಗೆ ಭೂಮಿ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಗ್ರಾಮಸ್ಥರು ಜಮೀನಿನ ಸರ್ವೆ, ನೋಂದಣ ಇನ್ನಿತರ ಕಾರ್ಯಗಳಿಗೆ ಆರ್ಥಿಕ ನೆರವನ್ನೂ ಒದಗಿಸಿದ್ದಾರೆ.

ರೈತ ಕುಟುಂಬದ ಸೇವೆ: ಮಹಮ್ಮದ್ ಜಾಫರ್ ಅವರು ಕೃಷಿಕರಾಗಿದ್ದರು. ಅವರ ಮಕ್ಕಳೂ ಕೃಷಿ ಹಾಗೂ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದಾರೆ. ದಾನಪತ್ರ ಬರೆದುಕೊಟ್ಟ ಮಹಮ್ಮದ್ ರಾಖೀಬ್ ಅವರ ಕುಟುಂಬ ಹಂಪಾಪುರ ಸಮೀಪದ ಮಾರ್ಚಳ್ಳಿಯಲ್ಲಿ ನೆಲೆಸಿದೆ. ರಾಖೀಬ್ ಹಾಗೂ ಅವರ ನಾಲ್ವರ ಮಕ್ಕಳೂ ಸಣ್ಣಪುಟ್ಟ ವ್ಯಾಪಾರದ ಜೊತೆಗೆ ಬಾಚೇ ಗೌಡನಹಳ್ಳಿಯಲ್ಲಿರುವ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಕೃತಜ್ಞರಾಗಿರುತ್ತೇವೆ: ಶಾಲೆಗೆ ಜಾಗದ ಕೊರತೆಯಿತ್ತು. ಈ ಬಾರಿಯಿಂದ ಆಂಗ್ಲ ಮಾಧ್ಯಮ ಶಾಲೆಯೂ ಆರಂಭವಾಗುವುದರಿAದ ಕಟ್ಟಡ ವಿಸ್ತರಣೆಯಾಗಬೇಕು. ಈ ಹಿನ್ನೆಲೆಯಲ್ಲಿ ಶಾಲೆ ಸಮೀಪದ ಭೂಮಿಯನ್ನು ಶಾಲೆಗೆ ನೀಡುವಂತೆ ಮನವಿ ಮಾಡಿದ್ದೆವು. ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ತುಂಬಾ ಸಹಕಾರ ನೀಡಿದರು. ಮಕ್ಕಳ ಶಿಕ್ಷಣಕ್ಕಾಗಿ ಜಮೀನು ನೀಡುವಂತೆ ಮಹಮ್ಮದ್ ರಾಖೀಬ್ ಅವರನ್ನು ಕೇಳಿದ್ದರು. ಮಹಮ್ಮದ್ ರಾಖೀಬ್ ಹಾಗೂ ಕುಟುಂಬದವರು ನಿನ್ನೆ ಎರಡೂವರೆ ಎಕರೆ ಜಮೀನನ್ನು ಶಾಲೆ ಹೆಸರಿಗೆ ನೋಂದಣ ಮಾಡಿಸಿ, ದಾನಪತ್ರ ನೀಡಿದ್ದಾರೆ. ಸರ್ವೆ, ನೋಂದಣ ವೆಚ್ಚವನ್ನು ಗ್ರಾಮಸ್ಥರು ಭರಿಸಿದ್ದಾರೆ. ರಾಖೀಬ್ ಅವರ ಫೋಟೋ ಕೇಳಿದೆವು. ಆದರೆ ನೀಡಿರುವುದು ನಮ್ಮ ತಂದೆಯ ಆಸ್ತಿ ಹಾಗಾಗಿ ಅವರ ಫೋಟೋ ಕೊಡುತ್ತೇನೆ ಎಂದಿದ್ದಾರೆ. ಇದರಿಂದ ಶಾಲೆ ಅಭಿವೃದ್ಧಿಗೆ ತುಂಬಾ ಸಹಾಯವಾಗಲಿದ್ದು, ರಾಖೀಬ್ ಕುಟುಂಬದವರ ಸೇವೆ ಸ್ಮರಣ Ãಯ ಎಂದು ಬಾಚೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮರಿಕಾಳಯ್ಯ ಬಾವುಕರಾಗಿ ನುಡಿದರು.

Translate »