ಡಾ.ಬನ್ನಂಜೆ ಗೋವಿಂದಾಚಾರ್ಯರಿಗೆ ‘ತತ್ವ ವಿದ್ಯಾನಿಧಿ’ ಪ್ರಶಸ್ತಿ ಪ್ರದಾನ
ಮೈಸೂರು

ಡಾ.ಬನ್ನಂಜೆ ಗೋವಿಂದಾಚಾರ್ಯರಿಗೆ ‘ತತ್ವ ವಿದ್ಯಾನಿಧಿ’ ಪ್ರಶಸ್ತಿ ಪ್ರದಾನ

January 26, 2020

ಮೈಸೂರು: ಪದ್ಮಶ್ರೀ ಪುರಸ್ಕೃತ , ಹಿರಿಯ ವಿದ್ವಾಂಸ ಡಾ.ಬನ್ನಂಜೆ ಗೋವಿಂದಾಚಾರ್ಯ ಅವರಿಗೆ ಕಲಾಸಂದೇಶ ಪ್ರತಿಷ್ಠಾನದ ವತಿಯಿಂದ ‘ತತ್ವ ವಿದ್ಯಾನಿಧಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಕಲಾಸಂದೇಶ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯ ದಲ್ಲಿ ಶನಿವಾರ ಆಯೋಜಿಸಿದ್ದ ‘ಕಲಾಭಿವರ್ಧನ-2020’ ಭಾರತೀಯ ಕಲೆಗಳ ಆರಾಧನಾ ಪರ್ವ ಮತ್ತು ಅಭಿ ನಂದನಾ ಸಮಾರಂಭದಲ್ಲಿ ಗ್ಲೋಬಲ್ ವಿಷ್ಣುಸಹಸ್ರ ನಾಮ ಸತ್ಸಂಗ್ ಫೆಡರೇಷನ್ ಸ್ಥಾಪಕ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ಸನ್ಮಾನಿಸಿ, ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ. ಬನ್ನಂಜೆ ಗೋವಿಂದಾಚಾರ್ಯ, ಕಾಳಿದಾಸ ಹೇಳಿ ದಂತೆ ಎಲ್ಲಾ ಬಗೆಯ ಕಲೆಯನ್ನು ಭರತನಾಟ್ಯ ಹೊಂದಿದೆ. ಭರತನಾಟ್ಯ ಅದ್ಭುತ ಕಲೆಯಾಗಿದ್ದು, ವಿಶ್ವದಲ್ಲಿಯೇ ಇಲ್ಲ. ಆಧ್ಯಾತ್ಮ, ಸಾಹಿತ್ಯ ಎಲ್ಲವನ್ನು ನಾಟ್ಯ ಒಳ ಗೊಂಡಿದ್ದು, ಎಲ್ಲಾ ವಿಧದÀ ಕಲೆಯ ಅಭಿರುಚಿಯನ್ನು ಪೂರೈಸುತ್ತದೆ. ಈ ನಿಟ್ಟಿನಲ್ಲಿ ನಾನು ಕೂಡ ಭರತ ನಾಟ್ಯ ನೋಡಲು ಬಂದೆ, ಆದರೆ ನನಗೆ ಪ್ರಶಸ್ತಿ ನೀಡಿ ದರು ಎಂದರು. ಅಲ್ಲದೆ ‘ತತ್ವ ವಿದ್ಯಾನಿಧಿ’ ಪ್ರಶಸ್ತಿಯೊಂ ದಿಗೆ ನೀಡಿದ್ದ 1 ಲಕ್ಷ ರೂ. ಹಣವನ್ನು ಹಿಂದಿರುಗಿಸಿ, ಕಲೆ, ಸಾಹಿತ್ಯದ ಅಭಿವೃದ್ಧಿಗೆ ಬಳಸುವಂತೆ ಹೇಳಿದರು.

ಬಳಿಕ ಮಾತನಾಡಿದ ಡಾ.ಅರಳುಮಲ್ಲಿಗೆ ಪಾರ್ಥ ಸಾರಥಿ ಅವರು, ಬನ್ನಂಜೆ ಅವರು, ಯಾವತ್ತ್ತೂ ಅಹಂಕಾರವನ್ನು ತಮ್ಮ ಮೇಲೆ ಹೇರಿಕೊಂಡವರಲ್ಲ. ಪರಮಾತ್ಮನಿಗೆ ಹತ್ತಿರವಾಗಿ ಕನ್ನಡದಲ್ಲಿ 106 ಗ್ರಂಥ ಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅಲ್ಲದೆ ಸಂಸ್ಕøತದಲ್ಲಿಯೂ 40ಕ್ಕೂ ಹೆಚ್ಚು ಕೃತಿಗಳನ್ನು ಬರೆದಿ ದ್ದಾರೆ. ಅವರ ಬರವಣಿಗೆಯ ಶೈಲಿ, ವಿದ್ವತ್ತಿಗೆ ಅವರೇ ಸಾಟಿ ಎಂದು ಬಣ್ಣಿಸಿದರು.

ಬನ್ನಂಜೆ ಅವರು ಬರೆದಿರುವ ಗ್ರಂಥಗಳ ಒಂದೊಂದು ಪದವು ಸಾಮಾನ್ಯರಿಗೂ ಅರ್ಥವಾಗುವಂತಿದೆ. ಶಂಕ ರಾಚಾರ್ಯರು, ಮಧ್ವಾಚಾರ್ಯರು, ರಾಮಾನು ಜಾಚಾರ್ಯರು, ಕನಕದಾಸರು, ಪುರಂದರದಾಸರ ಕುರಿತು ಆಳವಾದ ಅಧ್ಯಯನ ನಡೆಸಿರುವ ಇವರು, ಪ್ರತ್ಯೇಕ ಗ್ರಂಥಗಳನ್ನು ಬರೆಯುವ ಮೂಲಕ ಸಾಮಾನ್ಯ ನಾಗರಿಕನೂ ಅರಿಯುವಂತೆ ಮಾಡಿದ್ದಾರೆ ಎಂದರು.

ಗಮಕಿ ಡಾ.ಜ್ಯೋತಿ ಶಂಕರ್ ಮಾತನಾಡಿ, ಭಗ ವದ್ಗೀತೆ ಕುರಿತು ಒಟ್ಟು 240 ಗಂಟೆಗಳು ಉಪನ್ಯಾಸ ನೀಡಿದ ಏಕೈಕ ವ್ಯಕ್ತಿ ಬನ್ನಂಜೆ ಗೋವಿಂದಾ ಚಾರ್ಯರು. ಕನ್ನಡಕ್ಕಾಗಿ ಸಂಸ್ಕøತವನ್ನು ಉಳಿಸಬೇಕು ಎಂಬ ನಿಲುವನ್ನು ಹೊಂದಿದ್ದ ಅವರು, ಸ್ತ್ರಿ ಸಂಕು ಲಕ್ಕೂ ಸಮಾನ ಆದ್ಯತೆ ನೀಡಬೇಕು. ಯಾವುದೇ ಸಾಂಸ್ಕøತಿಕ ಪರಂಪರೆ ಉಳಿಯುವುದು ಹೆಣ್ಣಿನಿಂದ ಎಂದು ಪ್ರತಿಪಾದಿಸಿದರು ಎಂದು ಗುಣಗಾನ ಮಾಡಿದರು.

ನಂತರ ಭರತನಾಟ್ಯ ಕಲಾವಿದ ಕೆ.ಸಂದೇಶ್ ಭಾರ್ಗವ್ ಮತ್ತು ಶಿಷ್ಯವೃಂದದಿಂದ ಡಾ.ಬನ್ನಂಜೆ ಗೋವಿಂದಾಚಾರ್ಯ ವಿರಚಿತ, ವಿದುಷಿ ಕಾಂಚನ ಎಸ್.ಶ್ರೀರಂಜನಿ ಸಂಗೀತ ಸಂಯೋಜನೆಯಲ್ಲಿ ‘ವಿಶ್ವಾ ಮಿತ್ರ ಗಾಯತ್ರಿ’ ನೃತ್ಯ ರೂಪಕ ಪ್ರದರ್ಶನ ನಡೆಯಿತು.

ವೇದಿಕೆಯಲ್ಲಿ ವಿದ್ವಾನ್ ಕೃ.ರಾಮಚಂದ್ರ, ಮುಕ್ತಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ರಾಮಪ್ರಸಾದ್, ಪರಂಪರೆ ಕಾರ್ಯದರ್ಶಿ ಪಿ.ಕೃಷ್ಣಕುಮಾರ್, ಭರತ ನಾಟ್ಯ ವಿದುಷಿ ಡಾ.ತುಳಸಿ ರಾಮಚಂದ್ರ, ಸಂಗೀತ ತಜ್ಞೆ ಡಾ.ರಮಾ ವಿ.ಬೆಣ್ಣೂರು, ಮೃದಂಗ ವಿದ್ವಾಂಸ ಹೆಚ್.ಎಲ್.ಶಿವಶಂಕರಸ್ವಾಮಿ, ಭರತನಾಟ್ಯ ಕಲಾ ವಿದೆ ಡಾ.ಶೀಲಾ ಶ್ರೀಧರ್, ಪಿಟೀಲು ವಿದ್ವಾಂಸ ಎ.ಪಿ. ಶ್ರೀನಿವಾಸ್, ಕಲಾಸಂದೇಶ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಡಿ.ಉಮಾಪತಿ, ಟ್ರಸ್ಟಿಗಳಾದ ಮನು ಗುರುಸ್ವಾಮಿ, ರಾಧಿಕಾ ಸಂದೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »