ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ಪ್ರಕ್ರಿಯೆಗೆ ಚಾಲನೆ
ಮೈಸೂರು

ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ಪ್ರಕ್ರಿಯೆಗೆ ಚಾಲನೆ

April 12, 2022

ಮೈಸೂರು,ಏ.೧೧(ಎಸ್‌ಬಿಡಿ)-`ಬೃಹತ್ ಮೈಸೂರು ಮಹಾ ನಗರ ಪಾಲಿಕೆ’ ರಚನೆಗೆ ಪ್ರಾಥಮಿಕ ಪ್ರಕ್ರಿಯೆ ಆರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆ ಯಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಗರ ಪಾಲಿಕೆ ಆಯುಕ್ತ ಲಕ್ಷಿö್ಮಕಾಂತ ರೆಡ್ಡಿ ಪ್ರಸ್ತಾವನೆ ಬಳಿಕ ಜನಪ್ರತಿನಿಧಿಗಳು ತಮ್ಮ ಅಭಿಪ್ರಾಯ ಮಂಡಿ ಸುವುದರ ಜೊತೆಗೆ `ಬೃಹತ್ ಮೈಸೂರು ಮಹಾನಗರ ಪಾಲಿಕೆ’ ರಚನೆಗೆ ಸಹಮತ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ನಗರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳಿAದ ಈ ಸಂಬAಧ ನಿರ್ಣಯ ಕೈಗೊಂಡು, ಮಾಹಿತಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಆಯುಕ್ತರ ಪ್ರಸ್ತಾವನೆ: ಮೈಸೂರು ನಗರ ಬೆಳೆಯುತ್ತಿದ್ದರೂ ನಗರ ಪಾಲಿಕೆ ವ್ಯಾಪ್ತಿ ವಿಸ್ತಾರವಾಗಿಲ್ಲ. ಕಳೆದ ೨೫ ವರ್ಷಗಳಲ್ಲಿ ಪಾಲಿಕೆ ವ್ಯಾಪ್ತಿಗೆ ಹೊಂದಿಕೊAಡAತಿರುವ ಹಾಗೂ ಹೊರ ಭಾಗದ ಕೆಲವು ಗ್ರಾಮಗಳು ಕ್ಷಿಪ್ರಗತಿಯಲ್ಲಿ ಪ್ರಗತಿ ಹೊಂದು ತ್ತಿವೆ. ಆದರೆ ನಿಯಂತ್ರಣ ವೈಫಲ್ಯದಿಂದ ಯೋಜನಾ ಬದ್ಧ ಬೆಳವಣ ಗೆ ಇಲ್ಲದೆ ಕನಿಷ್ಠ ಮೂಲಭೂತ ಸೌಕರ್ಯಗಳಿಗೂ ಕೊರತೆಯಾಗಿದೆ. ಪರಿಣಾಮ ಮೈಸೂರು ನಗರದ ಯೋಜನಾ ಬದ್ಧವಾದ ಬೆಳವಣ ಗೆ ಮೇಲೂ ದುಷ್ಪರಿಣಾಮವಾಗುತ್ತಿದೆ. ಆದ್ದರಿಂದ ನಗರದ ಅಭಿವೃದ್ಧಿ ದೃಷ್ಟಿಯಿಂದ ಪಾಲಿಕೆ ವ್ಯಾಪ್ತಿಗೆ ಹೊಂದಿಕೊAಡAತಿರುವ ಹೂಟಗಳ್ಳಿ ನಗರಸಭೆ, ಬೋಗಾದಿ, ಶ್ರೀರಾಂಪುರ ಹಾಗೂ ರಮ್ಮನಹಳ್ಳಿ ಪಟ್ಟಣ ಪಂಚಾಯ್ತಿ, ಚಾಮುಂಡಿ ಬೆಟ್ಟ, ಆಲನಹಳ್ಳಿ, ಸಿದ್ದಲಿಂಗಪುರ ಹಾಗೂ ಇಲವಾಲ ಗ್ರಾಮ ಪಂಚಾಯ್ತಿ ಮತ್ತು ಮಂಡಕಳ್ಳಿ ಹಾಗೂ ಬಂಡಿಪಾಳ್ಯ ಪ್ರದೇಶ ವನ್ನೊಳಗೊಂಡ ಕಡಕೊಳ ಪಟ್ಟಣ ಪಂಚಾಯ್ತಿ ಮೈಸೂರು ನಗರಪಾಲಿಕೆ ವ್ಯಾಪ್ತಿಗೆ ಸೇರಿಸಿದರೆ ಆದಾಯ ಕ್ರೋಢೀಕರಣ ಹೆಚ್ಚುವ ಜೊತೆಗೆ ಸಮಗ್ರ ಹಾಗೂ ಯೋಜನಾಬದ್ಧ ಅಭಿ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ನಗರ ಪಾಲಿಕೆ ಆಯುಕ್ತ ಲಕ್ಷಿö್ಮಕಾಂತ ರೆಡ್ಡಿ, ಸಭೆಗೆ ಪ್ರಸ್ತಾವನೆ ಸಲ್ಲಿಸಿದರು.

ಸದ್ಯದಲ್ಲೇ ನಗರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗೆ ಒಳಪಡುವ ಎಲ್ಲಾ ಗ್ರಾಮಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ಸದ್ಯ ನಕ್ಷೆ ಪ್ರಕ್ರಿಯೆ ಹಂತದಲ್ಲಿದೆ. ಚಾಮುಂಡಿ ಬೆಟ್ಟ ಹಾಗೂ ಸಿದ್ದಲಿಂಗಪುರ ಗ್ರಾಮ ಪಂಚಾಯ್ತಿ ಹೊರತು ಪಡಿಸಿ ಉಳಿದೆಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಮಂಡಳಿಯಿಲ್ಲ. ಈ ಸಂಬAಧ ಕಾನೂನಾತ್ಮಕ ಹಾಗೂ ಆಡಳಿ ತಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸಬೇಕಿದೆ. ನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆ ಸಂಬAಧ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡು ಪ್ರಸ್ತಾವನೆ ಸಲ್ಲಿಸಬೇಕಿದೆ ಎಂದು ತಿಳಿಸಿದರು.

ತ್ವರಿತವಾಗಿ ಆಗಲಿ: ಸಂಸದ ಪ್ರತಾಪ್ ಸಿಂಹ ಮಾತನಾಡಿ, ಸಮಸ್ಯೆಗಳಿಗೆ ಕೊನೆ ಯಿರುವುದಿಲ್ಲ, ಆದರೆ ಅವುಗಳನ್ನು ಹಂತಹAತವಾಗಿ ಪರಿಹರಿಸಿಕೊಂಡು ಮುಂದುವರೆಯಬೇಕು. ಸಮಸ್ಯೆಗಳನ್ನು ಮುಂದಿಟ್ಟುಕೊAಡು ಸುಮ್ಮನಾದರೆ ಅಭಿವೃದ್ಧಿ ಕಷ್ಟ ಸಾಧ್ಯ. ನೂತನ ಸ್ಥಳೀಯ ಸಂಸ್ಥೆಗಳು ಹಾಗೂ ಚುನಾಯಿತ ಆಡಳಿತ ಮಂಡಳಿ ಇರದ ಗ್ರಾಪಂಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳೋಣ. ಪಾಲಿಕೆ ವ್ಯಾಪ್ತಿಗೆ ಹೆಚ್ಚು ಕೈಗಾರಿಕಾ ಪ್ರದೇಶ ಒಳಪಡುವುದರಿಂದ ಹೆಚ್ಚು ಆದಾಯ ಸಂಗ್ರಹವಾಗುತ್ತದೆ. ಆ ಮೂಲಕ ಉತ್ತಮ ನಿರ್ವಹಣೆ ಹಾಗೂ ಅಭಿವೃದ್ಧಿ ಸಾಧ್ಯವಿದೆ. ಹಾಗಾಗಿ ಬೃಹತ್ ಮೈಸೂರು ನಗರ ಪಾಲಿಕೆ ರಚನೆಗೆ ಸಹಮತಿಸುವ ಮೂಲಕ ಒಮ್ಮತದ ಹೆಜ್ಜೆ ಇಡೋಣ ಎಂದು ಮನವಿ ಮಾಡಿದರು.

ಈ ಹಂತದಲ್ಲೇ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಬಗ್ಗೆ ಮುಡಾ ಸಮರ್ಪಕ ಮಾಹಿತಿ ನೀಡುವುದು ಉತ್ತಮ. ರಿಂಗ್ ರಸ್ತೆ ವ್ಯಾಪ್ತಿ, ನಕ್ಷೆ ಇನ್ನಿತರ ಮಾಹಿತಿ ಅಗತ್ಯ ವಾಗಿದೆ. ಯೋಜನೆಗೆ ಬೇಕಾದ ಭೂಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದರೆ ಸಮಸ್ಯೆಯಾಗುತ್ತದೆ. ಮೊದಲೇ ಸ್ಥಳವನ್ನು ಗುರುತಿಸಿ, ಕಾಯ್ದುಕೊಳ್ಳುವ ಕೆಲಸವಾಗ ಬೇಕು. ಮರ‍್ನಾಲ್ಕು ರಾಷ್ಟಿçÃಯ ಹೆದ್ದಾರಿಗಳು ರಿಂಗ್ ರಸ್ತೆ ಸಂಪರ್ಕಿಸುವುದರಿAದ ಕೇಂದ್ರ ಸರ್ಕಾರದ ನೆರವು ಪಡೆಯುವ ಅವಕಾಶವೂ ಇದೆ ಎಂದು ತಿಳಿಸಿದರು.

ಜಾಗದ ಬೆಲೆ ಜಿಗಿಯುತ್ತದೆ: ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮಾತನಾಡಿ, ಬೃಹತ್ ಮೈಸೂರು ನಗರ ಪಾಲಿಕೆ ರಚನೆಗೆ ಆಕ್ಷೇಪವಿಲ್ಲ. ಆದರೆ ಈ ಘೋಷಣೆಯ ಮೊದಲ ಪರಿಣಾಮವಾಗಿ ಈ ವ್ಯಾಪ್ತಿಗೆ ಒಳಪಡುವಂತಹ ಪ್ರದೇಶಗಳಲ್ಲಿ ಜಾಗದ ಬೆಲೆ ಏರಿಕೆಯಾಗುತ್ತದೆ. ಆದ್ದರಿಂದ ಸಾಧಕ-ಬಾಧಕಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ಯಾಗಬೇಕು. ಸೀವೇಜ್, ಗಾರ್ಬೆಜ್ ಸಂಸ್ಕರಣೆ ವ್ಯವಸ್ಥೆ ಬಗ್ಗೆ ಚಿಂತನೆ ನಡೆಯಬೇಕು. ಸಾರಿಗೆ ಸಂಪರ್ಕ ಸೇವೆ, ಪೊಲೀಸ್ ಠಾಣೆಗಳ ಸಂಖ್ಯೆ ಹೀಗೆ ಹಲವು ಸೌಲಭ್ಯಗಳು ಹೆಚ್ಚಿಸಬೇಕು. ಬೆಂಗಳೂರಿನಲ್ಲಿ ರಸ್ತೆ ವಿಸ್ತರಣೆಗೆ ಅವಕಾಶವಿಲ್ಲ. ಅಂತಹ ಅದ್ವಾನಗಳು ಸೃಷ್ಟಿಯಾಗಬಾರದು. ಹಾಗಾಗಿ ಸಮಗ್ರ ಪ್ರಸ್ತಾವನೆ ಸಿದ್ಧಪಡಿಸಿಕೊಂಡು, ಅಗತ್ಯ ರಸ್ತೆ ಅಭಿವೃದ್ಧಿ ಇನ್ನಿತರ ಕಾಮಗಾರಿಗಳಿಗೆ ಅಗತ್ಯ ಭೂಸ್ವಾಧೀನಪಡಿಸಿಕೊಂಡ ನಂತರ ಈ ನಿಟ್ಟಿನಲ್ಲಿ ಮುಂದುವರೆಯುವುದು ಸೂಕ್ತ ಎಂದು ಅಭಿಪ್ರಾಯಿಸಿದರು.

ಸ್ವಾಗತಾರ್ಹ ನಡೆ: ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ಮೈಸೂರು ನಗರದ ಭವಿಷ್ಯ ದೃಷ್ಟಿಕೋನ ಹಾಗೂ ಆಡಳಿತ ಸಮಸ್ಯೆ ನಿವಾರಣೆ ದೃಷ್ಟಿಯಿಂದ `ಬೃಹತ್ ಮೈಸೂರು’ ನಿರ್ಣಯ ಸ್ವಾಗತಾರ್ಹವಾಗಿದೆ. ಪ್ರಾಧಿಕಾರದ ೯೬ ಸಾವಿರ ನಿವೇಶನ ಹಾಗೂ ಅನುಮೋದನೆ ಪಡೆದಿರುವ ಖಾಸಗಿ ಬಡಾವಣೆಗಳ ಒಂದು ಲಕ್ಷಕ್ಕೂ ಹೆಚ್ಚು ನಿವೇಶನಗಳು ಸೇರ್ಪಡೆಯಾಗುತ್ತವೆ. ಪ್ರಾಧಿಕಾರಕ್ಕೆ ಬಡಾವಣೆಗಳ ನಿರ್ವಹಣೆ ಸಾಧ್ಯವಿಲ್ಲ, ಇನ್ನು ಗ್ರಾಮ ಪಂಚಾಯ್ತಿಗಳಿಗೆ ಆ ಶಕ್ತಿ ಇಲ್ಲ. ಎರಡು ಗ್ರಾಪಂ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಸಮಸ್ಯೆಗಳಿಗೆ ಪರಿಹಾರವೇ ಇಲ್ಲ. ಹೀಗಿರುವಾಗ ಆಡಳಿತ ಹಾಗೂ ನಿರ್ವಹಣೆ ಜವಾಬ್ದಾರಿ ಒಂದೇ ಸ್ಥಳೀಯ ಸಂಸ್ಥೆಗೆ ಒಳಪಡುವುದು ಸೂಕ್ತ ಎಂದು ಅಭಿಮತ ವ್ಯಕ್ತಪಡಿಸಿದರು.

ಮೇಯರ್ ಸುನಂದಾ ಪಾಲನೇತ್ರ ಮಾತನಾಡಿ, ಯೋಜನೆಯಲ್ಲಿ ಸಾಧಕ-ಬಾಧಕ ಗಳು ಸಹಜ. ಆದರೆ ಏನೇ ಸಮಸ್ಯೆಯಾದರೂ ಪಾಲಿಕೆ ನಿರ್ವಹಿಸಿಕೊಂಡು ಹೋಗುವು ದಾಗಿ ವಿಶ್ವಾಸವಿದ್ದು, ಶೀಘ್ರ ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಬೇಕೆAದು ಆಗ್ರಹಿಸಿದರು. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ರಿಂಗ್ ರಸ್ತೆಯಲ್ಲಿ ಓಡಾಡಲು ಭಯಪಡುತ್ತಿದ್ದರು, ಆದರೀಗ ಅದು ನಗರದ ಮಧ್ಯಭಾಗ ಎನ್ನುವಂತಾಗಿದೆ. `ಬೃಹತ್ ಮೈಸೂರು’ ಒಳ್ಳೆಯ ಯೋಜನೆಯಾಗಿದ್ದು ನಮ್ಮ ಸರ್ಕಾರದ ಅವಧಿಯಲ್ಲೇ ಆಗಬೇಕು. ನಿರ್ವಹಣೆ ಕಷ್ಟವಾಗುತ್ತದೆ ಎಂಬ ಚಿಂತೆ ಬೇಡ. ಪಾಲಿಕೆ ವಿಸ್ತರಣೆಯಿಂದ ಆದಾಯವೂ ಹೆಚ್ಚಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಾಯವೂ ಸಿಗುತ್ತದೆ ಎಂದು ಅಭಿಪ್ರಾಯಿಸಿದರು. ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತ ನಾಡಿ, ಬೃಹತ್ ಮೈಸೂರು ರಚನೆ ಆಗುವವರೆಗೆ ಇದಕ್ಕೆ ಒಳಪಡುವ ಪ್ರದೇಶಗಳ ಆಸ್ತಿ ಭದ್ರತೆ ಹಾಗೂ ಮಾರಾಟಕ್ಕೆ ಅನುವಾಗುವಂತೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಉಪಮೇಯರ್ ಅನ್ವರ್‌ಬೇಗ್, ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ, ಮುಡಾ ಆಯುಕ್ತ ಡಿ.ಬಿ.ನಟೇಶ್, ಜಿಪಂ ಸಿಇಓ ಪೂಣ ðಮಾ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಮೈಸೂರು ನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಉದ್ದೇಶಿಸಿರುವ ಪ್ರದೇಶಗಳು ನಗರದ ಮಧ್ಯಭಾಗದಿಂದ ೬.೮ ಕಿ.ಮೀ.ನಿಂದ ೧೨.೫ ಕಿ.ಮೀ. ಅಂತರ ದಲ್ಲಿವೆ. ಪಾಲಿಕೆ ವಿಸ್ತರಣೆಯಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಸೇರ್ಪಡೆ ಯಾಗಲಿದ್ದು, ವಾರ್ಷಿಕ ೨೬ ಕೋಟಿ ರೂ.ಗೂ ಹೆಚ್ಚು ಆದಾಯ ನಿರೀಕ್ಷಿಸಲಾಗಿದೆ.

ದಶಕದ ಕನಸಿಗೆ ಮರುಜೀವ; ರಾಮದಾಸ್ ಧನ್ಯವಾದ
ಮೈಸೂರು: ದಶಕದ ಕನಸು ಮತ್ತೆ ಚರ್ಚೆಗೆ ಬಂದಿದೆ. ಇದಕ್ಕೆ ಕಾರಣರಾದ ಸಂಸದ ಪ್ರತಾಪ್ ಸಿಂಹ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಶಾಸಕ ಎಸ್.ಎ.ರಾಮದಾಸ್ ಸಭೆಯಲ್ಲಿ ಹೇಳಿದರು.

೧೦ ವರ್ಷಗಳ ಹಿಂದೆ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ `ಬೃಹತ್ ಮೈಸೂರು’ ರಚನೆಗೆ ಪ್ರಯತ್ನ ನಡೆದಿತ್ತು. ಸತತ ೨ ವರ್ಷ ಪ್ರಯತ್ನ ದಿಂದ ಸಿಡಿಪಿಯಲ್ಲೂ ಪ್ರಸ್ತಾಪವಾಗಿತ್ತು. ನಗರದ ಸುತ್ತಮುತ್ತಲ ಪಂಚಾಯ್ತಿ ಗಳ ಚುನಾವಣೆ ನಡೆಯದಿರುವ ಸಂದರ್ಭದಲ್ಲೇ ಈ ಯೋಜನೆಗೆ ಮುಂದಾ ಗಿದ್ದೆವು. ಸಮಿತಿ ರಚಿಸಿ, ಸವಿಸ್ತಾರವಾಗಿ ಚರ್ಚಿಸಿ, ವರದಿ ಸಲ್ಲಿಸಲಾಗಿತ್ತು. ಈ ಬಗ್ಗೆ ಅಂದಿನ ನಗರಾಭಿವೃದ್ಧಿ ಸಚಿವರು ಹಾಗೂ ಮುಖ್ಯಮಂತ್ರಿಗಳೊA ದಿಗೆ ಚರ್ಚಿಸಲಾಗಿತ್ತು. ಆದರೆ ದುರ್ದೈವ ಇದರಲ್ಲಿ ರಾಮದಾಸ್ ಅವರ ಸ್ವಹಿತಾಸಕ್ತಿ ಇದೆ ಎಂದು ನಮ್ಮವರೇ ಗ್ರಾಮ ಪಂಚಾಯ್ತಿಗಳಲ್ಲಿ ಸಭೆ ನಡೆಸಿ ದರು. ಪರಿಣಾಮ ೧೮ ಗ್ರಾಪಂಗಳು ವಿರೋಧ

ವ್ಯಕ್ತಪಡಿಸಿದವು. ಮುಖ್ಯಮಂತ್ರಿಗಳು ಸಮ್ಮತಿಸಿದರೂ ನಗರಾಭಿವೃದ್ಧಿ ಸಚಿವರು ಧೈರ್ಯ ಮಾಡಲಿಲ್ಲ. ಈಗ ಮತ್ತೆ ಚರ್ಚೆಗೆ ಬಂದಿರುವುದು ಸಂತೋಷ ತಂದಿದೆ. ಒಂದು ಆಡಳಿತ ವ್ಯವಸ್ಥೆಗೆ ತರುವ ಈ ಪ್ರಯತ್ನ ಸೂಕ್ತವಾಗಿದೆ. ಸಮಿತಿ ರಚನೆ ಮಾಡಿ ಆ ಮೂಲಕ ಸಾಧಕ-ಬಾಧಕಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಿ, ಗಡಿ ಪ್ರದೇಶ ಗುರುತಿಸು ವಿಕೆ ಇನ್ನಿತರ ಪ್ರಕ್ರಿಯೆಗಳಿಗೆ ಗಡುವು ನೀಡಬೇಕು. ಅನುಷ್ಠಾನಕ್ಕೆ ತ್ವರಿತ ಪ್ರಯತ್ನ ನಡೆಸ ಬೇಕು ಎಂದು ಅಭಿಪ್ರಾಯಿಸಿದರು. ಶಾಸಕ ಎಲ್.ನಾಗೇಂದ್ರ ಮಾತನಾಡುವಾಗಲೂ ಬೃಹತ್ ಮೈಸೂರು ರಚನೆಗೆ ೧೦ ವರ್ಷಗಳ ಹಿಂದೆಯೇ ಪ್ರಸ್ತಾವನೆ ಸಿದ್ಧವಾಗಿತ್ತು. ನಾನು ಆಗ ಮುಡಾ ಅಧ್ಯಕ್ಷನಾಗಿದ್ದೆ. ಸಿಡಿಪಿಯಲ್ಲೂ ಈ ವಿಚಾರ ಪ್ರಸ್ತಾಪವಾಗಿತ್ತು. ಆ ಸಂದರ್ಭ ದಲ್ಲಿ ದಿವಂಗತ ಅನಂತ್‌ಕುಮಾರ್ ಹಾಗೂ ಸುರೇಶ್‌ಕುಮಾರ್ ಅವರ ಸಮ್ಮುಖದಲ್ಲಿ `ಆಟೋ ನಗರ’ ಚಿಂತನೆಯೊAದಿಗೆ ಕಾರ್ಯಕ್ರಮವನ್ನೂ ಮಾಡಿದ್ದೆವು ಎಂದು ಸ್ಮರಿಸಿಕೊಂಡರು.

Translate »