ಸಿಸಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮೈಸೂರು

ಸಿಸಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ

January 13, 2021

ನಂಜನಗೂಡು,ಜ.12-ಕೊರೊನಾ ಸಂಕಷ್ಟದ ನಡುವೆಯೂ ಕಷ್ಟಪಟ್ಟು ಅನುದಾನ ತಂದು ಗ್ರಾಮೀಣ ಭಾಗಕ್ಕೆ ಮೂಲ ಸೌಕರ್ಯ ಒದಗಿ ಸಲು ಸಿಸಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮ ಗಾರಿಗೆ ಚಾಲನೆ ನೀಡುತ್ತಿದ್ದೇನೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

ತಾಲೂಕಿನ ಹೆಗ್ಗಡಹಳ್ಳಿಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ಎಚ್.ಕೊಂಗಳ್ಳಿ ಗ್ರಾಮ ದಲ್ಲಿ 15 ಲಕ್ಷ ವೆಚ್ಚದಲ್ಲಿ ಎಸ್ಟಿ ಜನಾಂಗದ ಬೀದಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರ ವೇರಿಸಿ ಮಾತನಾಡಿದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ ಹೆಸರಿನಲ್ಲಿ ನೀಡಿದ್ದ ಅನು ದಾನ ವಾಪಸ್ ಹೋಗಿತ್ತು. ಆಗ ಸಚಿವರಿಗೆ ಮನವಿ ಮಾಡಿ ಮತ್ತೆ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಿದ್ದೆ. ಈಗ ಕೊರೊನಾ ಸÀಂದರ್ಭದಲ್ಲಿ ಸರ್ಕಾರ ಅಭಿ ವೃದ್ಧಿಗೆ ಅನುದಾನ ನೀಡುವುದಿಲ್ಲ. ಆದರೂ ಹೋರಾಟ ಮಾಡಿ ಅನುದಾನ ತರುತ್ತಿದ್ದೇನೆ. ಕ್ಷೇತ್ರದಲ್ಲಿ ಸುಮಾರು 300 ಕೋಟಿಗೂ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಚುನಾವಣೆಗೂ ಮುನ್ನಾ ನೀಡಿದ್ದ ಆಶ್ವಾಸನೆ ಯಂತೆ ನನಗೆ ಎಷ್ಟೆ ಕಷ್ಟವಾದರೂ ಅನು ದಾನ ತಂದು ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯ ಒದಗಿಸಲು ಬದ್ದನಾಗಿದ್ದೇನೆ ಎಂದರು. ಈ ವೇಳೆ ತಾಪಂ ಅಧ್ಯಕ್ಷ ಬಿ.ಎಸ್. ಮಹದೇವಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಮಹೇಶ್, ಜಿಪಂ ಮಾಜಿ ಸದಸ್ಯ ಸಿ.ಚಿಕ್ಕ ರಂಗನಾಯ್ಕ, ತಾಪಂ ಸದಸ್ಯ ಬಸವರಾಜು, ಮುಖಂಡರಾದ ಮಹದೇವಸ್ವಾಮಿ, ಸಣ್ಣಯ್ಯ, ಗಿರೀಶ್, ಧನರಾಜ್ ಬೂಲ ಸೇರಿದಂತೆ ಹಲವರಿದ್ದರು.

Translate »