ಡ್ರಗ್ ಕೇಸ್: ಅಕುಲ್ ಬಾಲಾಜಿ, ಸಂತೋಷ್, ಯುವರಾಜ್‍ಗೆ ಸತತ 8 ಗಂಟೆಗಳ ಕಾಲ ಸಿಸಿಬಿ ಡ್ರಿಲ್
ಮೈಸೂರು

ಡ್ರಗ್ ಕೇಸ್: ಅಕುಲ್ ಬಾಲಾಜಿ, ಸಂತೋಷ್, ಯುವರಾಜ್‍ಗೆ ಸತತ 8 ಗಂಟೆಗಳ ಕಾಲ ಸಿಸಿಬಿ ಡ್ರಿಲ್

September 20, 2020

ಬೆಂಗಳೂರು, ಸೆ.19- ಸ್ಯಾಂಡಲ್‍ವುಡ್ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್ ಹಾಗೂ ಮಾಜಿ ಶಾಸಕರ ಪುತ್ರ ಆರ್.ವಿ.ಯುವ ರಾಜ್ ಅವರಿಗೆ ಶನಿವಾರ ಸಿಸಿಬಿ ಸತತ 8 ಗಂಟೆಗಳ ಕಾಲ ವಿಚಾ ರಣೆ ನಡೆಸಿದೆ. ಕಾಟನ್‍ಪೇಟೆ ಪೆÇಲೀಸ್ ಠಾಣೆಯಲ್ಲಿ ದಾಖಲಾದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೆÇಲೀಸರು ಶುಕ್ರವಾರ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಈ ಮೂವರು ಇಂದು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬಂದಿದ್ದರು. ಸತತ 8 ಗಂಟೆಗಳ ವಿಚಾರಣೆ ಬಳಿಕ ಸುದ್ದಿಗಾರರೊಂ ದಿಗೆ ಮಾತನಾಡಿದ ಅಕುಲ್ ಬಾಲಾಜಿ, ಸಿಸಿಬಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಮತ್ತೆ ವಿಚಾರಣೆಗೆ ಕರೆದರೇ ಹಾಜರಾಗುತ್ತೇವೆ ಎಂದಿದ್ದಾರೆ. ಸಿಸಿಬಿ ವಿಚಾರಣೆ ಎದುರಿಸಿದ ಬಳಿಕ ನಟ ಸಂತೋಷ್ ಹಾಗೂ ಅಕುಲ್ ಬಾಲಾಜಿ ಮಾಧ್ಯಮಗಳ ಜೊತೆ ಮಾತನಾಡಿ, ವಿಚಾರಣೆಗೆ ಕರೆದರೆ ಮತ್ತೆ ಬರುವುದಾಗಿ ಹೇಳಿದ್ದಾರೆ. ಆದರೆ ಯುವ ರಾಜ್ ಅವರನ್ನು ಮಾತ್ರ ಅವರ ಬೆಂಬಲಿಗರು ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಬಂದು ಕರೆದೊಯ್ದಿದ್ದಾರೆ. ಮಾಧ್ಯಮಗಳ ಕ್ಯಾಮೆರಾಮನ್ ಗಳನ್ನು ತಳ್ಳಿ ಯುವರಾಜ್‍ನನ್ನು ಬೆಂಬಲಿಗರು ಕರೆದುಕೊಂಡು ಹೋದ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಿಲ್ಲ.

 

Translate »