ಮೈಸೂರಲ್ಲಿ ಇನ್ನು ಮುಂದೆ ವಾರಕ್ಕೆ ಮೂರು ದಿನ `ಡ್ರಂಕ್ ಅಂಡ್ ಡ್ರೈವ್’ ಕಾರ್ಯಾಚರಣೆ
ಮೈಸೂರು

ಮೈಸೂರಲ್ಲಿ ಇನ್ನು ಮುಂದೆ ವಾರಕ್ಕೆ ಮೂರು ದಿನ `ಡ್ರಂಕ್ ಅಂಡ್ ಡ್ರೈವ್’ ಕಾರ್ಯಾಚರಣೆ

November 25, 2022

ಮೈಸೂರು, ನ.24(ಎಂಟಿವೈ)- ಟ್ರಾಫಿಕ್ ರೂಲ್ಸ್ ಗಾಳಿಗೆ ತೂರಿ ಬೇಕಾಬಿಟ್ಟಿ ವಾಹನ ಚಲಾಯಿಸುವವರಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ಮೈಸೂರು ಸಂಚಾರ ಪೊಲೀಸರು, ಇನ್ನು ಮುಂದೆ ವಾರಕ್ಕೆ ಮೂರು ದಿನ `ಡ್ರಂಕ್ ಅಂಡ್ ಡ್ರೈವ್’ ತಪಾಸಣೆ ಕಾರ್ಯಾಚರಣೆ ನಡೆಸಲು ಸಜ್ಜಾಗಿದ್ದಾರೆ. ಕೊರೊನಾ ಹಿನ್ನೆಲೆ ಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕುಡಿದು ವಾಹನ ಚಲಾ ಯಿಸುವವರಿಗೆ ಕಡಿವಾಣ ಹಾಕಲು ಕಾರ್ಯಾಚರಣೆ ನಡೆಸುತ್ತಿರ ಲಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿದ್ದ ಕೆಲವರು ಸಂಜೆ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದರು. ಇದರಿಂದ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದವು. ಇದನ್ನು ಗಮನಿಸಿ ರುವ ಮೈಸೂರು ಪೊಲೀ ಸರು ಕುಡಿದು ವಾಹನ ಚಲಾಯಿಸು ವವರಿಂದ ಅಮಾಯಕರಿಗೆ ಆಗುವ ತೊಂದರೆ ತಡೆಗಟ್ಟಲು ಮತ್ತೆ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ನೂತನ ಪೊಲೀಸ್ ಆಯುಕ್ತರಾಗಿ ಬಿ.ರಮೇಶ್ ಅಧಿಕಾರ ವಹಿಸಿಕೊಂಡ ನಂತರ ಎಲ್ಲಾ ಟ್ರಾಫಿಕ್ ಪೊಲೀಸ್ ಠಾಣೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ತಮ್ಮ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡದ ಬರೆ ಬೀಳಲಿದೆ. ಈ ಮಧ್ಯೆ ಮೈಸೂರಲ್ಲಿ ತ್ರಿಬಲ್ ಡ್ರೈವ್, ಹೆಲ್ಮೆಟ್ ತಪಾಸಣಾ ಕಾರ್ಯಾಚರಣೆಯನ್ನೂ ಆರಂಭಿಸ ಲಾಗಿದೆ. ಅಲ್ಲದೆ, ಕುಡಿದು ವಾಹನ ಚಾಲನೆ ಮಾಡು ವವರಿಗೆ ಕಡಿವಾಣ ಹಾಕಲು ವಾರದಲ್ಲಿ 3 ದಿನ ಆಯ್ದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲು ಕ್ರಮ ಕೈಗೊಂಡಿದ್ದಾರೆ. ಕುಡಿದು ವಾಹನ ಚಾಲನೆ ಮಾಡು ವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

Translate »