ಮೈಸೂರು,ಜೂ.29(ಎಂಟಿವೈ)-ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಯಶಸ್ವಿ ಕಾರ್ಯಕ್ರಮದಲ್ಲಿ ಒಂದಾದ ಯುವ ಸಂಘಟನೆ(ಯೂತ್ ಕ್ಲಬ್) ಈ ಬಾರಿ ಕೊರೊನಾ ಸೋಂಕಿನ ಹಾವಳಿ ಯಿಂದಾಗಿ `ಇ-ಯುವ ಸಂಘ ಟನೆ’ಯಾಗಿ ಚಟುವಟಿಕೆ ನಡೆಸ ಲಿದೆ. ಆಸಕ್ತರು ಜು.10ರೊಳಗೆ ವೆಬ್ ಸೈಟ್‍ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಯುವ ಸಂಘಟನೆ ಚಟುವಟಿಕೆ ಜು.25ಕ್ಕೆ ಆರಂಭಗೊಳ್ಳಲಿದೆ. 2022ರ ಜ.9ರವರೆಗೂ ಪ್ರತಿ ಭಾನುವಾರ ಚಟುವಟಿಕೆ ನಡೆಸಲಾಗುವುದು. 12-18 ವರ್ಷ ವಯೋಮಾನದ ಆಸಕ್ತರು `ಇ-ಯುವ ಸಂಘಟನೆ’ ಸದಸ್ಯತ್ವ ಪಡೆಯಬಹುದು. ಮೊದಲು ಅರ್ಜಿ ಸಲ್ಲಿಸಿದ 60 ಮಂದಿಗೆ ಮಾತ್ರ ಅವಕಾಶ.
ವನ್ಯಜೀವಿಗಳ ಬಗ್ಗೆ ಆಸಕ್ತಿ ಉಳ್ಳವರು ಜು.10ರೊಳಗೆ hಣಣಠಿs://ಜಿoಡಿms.gಟe/ಃಚಿಘಿಥಿತಿ3ಛಿಞmಎSಟಿಅZಊS6 ಲಿಂಕ್ ಬಳಸಿ ಅರ್ಜಿ ಭರ್ತಿ ಮಾಡಿ, ಮೃಗಾ ಲಯದ ಬ್ಯಾಂಕ್ ಖಾತೆ: 1720-214-0000028; IಈSಅ ಅoಜe: ಅಓಖಃ 0011720 ನಿಗದಿತ ಶುಲ್ಕ 1000 ರೂ. ಜಮೆ ಮಾಡಬೇಕು. ಬಳಿಕ ಅರ್ಜಿ ಸಲ್ಲಿಕೆ ಮತ್ತು ಹಣ ಪಾವತಿ ಮಾಹಿತಿಯೊಂದಿಗೆ ಇತ್ತೀಚಿನ 2 ಪಾಸ್‍ಪೋರ್ಟ್ ಅಳತೆ ಭಾವಚಿತ್ರ, ಅಂಕಪಟ್ಟಿ, ಆಧಾರ್ ಕಾರ್ಡ್ ನಂಬರ್, ರಕ್ತದ ಗುಂಪು ಮೊದಲಾದ ಮಾಹಿತಿಯನ್ನು ಜುಲೈ 10ರೊಳಗೆ eಜumಥಿsoಡಿe99@ gmಚಿiಟ. ಛಿomಗೆ ಇ-ಮೇಲ್ ಮಾಡಿ. ಹೆಚ್ಚಿನ ಮಾಹಿತಿಗೆ ದೂ. 0821-2440752, ಮೊ.ಸಂ; 96866 68099ಗೆ ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.