ಡಿಜಿಟಲ್ ಪ್ರಕ್ರಿಯೆ ಆರಂಭಿಸಿದ ಶಿಕ್ಷಣ ಇಲಾಖೆ
ಮೈಸೂರು

ಡಿಜಿಟಲ್ ಪ್ರಕ್ರಿಯೆ ಆರಂಭಿಸಿದ ಶಿಕ್ಷಣ ಇಲಾಖೆ

October 19, 2020

ಬೆಂಗಳೂರು, ಅ.18- ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ಪಡೆಯಲು ಇನ್ನುಮುಂದೆ ಫ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ನೇರವಾಗಿ ತೆರಳಿ ಅರ್ಜಿ ಸಲ್ಲಿಸಿ, ತಿಂಗಳಾನುಗಟ್ಟಲೇ ಕಾಯಬೇಕಿಲ್ಲ. 5 ದಿನಗಳಲ್ಲೇ ಅಂಕಪಟ್ಟಿ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದಕ್ಕಾಗಿ ಡಿಜಿಟಲ್ ಪ್ರಕ್ರಿಯೆಯನ್ನು ಆರಂ ಭಿಸಿದ್ದು, ಆನ್‍ಲೈನ್ ಮೂಲಕವೇ ವಿದ್ಯಾರ್ಥಿ ಗಳು ಅರ್ಜಿ ಸಲ್ಲಿಸಿ, ದಾಖಲೆಗಳನ್ನು ನೀಡ ಬಹುದಾಗಿದೆ. ಈಹಿಂದೆ ಸ್ವತಃ ಶಿಕ್ಷಣ ಮಂಡಳಿಗೆ ತೆರಳಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಿತ್ತು. ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಈ ಅರ್ಜಿಗಳು ತಲುಪಲು ತಿಂಗಳಾನುಗಟ್ಟಲೆ ಕಾಲಾವ ಕಾಶ ತೆಗೆದುಕೊಳ್ಳುತ್ತಿತ್ತು. ತತ್ಕಾಲ್ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಆನ್‍ಲೈನ್ ಮೂಲಕ ಅಥವಾ ಬ್ಯಾಂಕ್ ಇನ್ನಿತರೆ ವ್ಯವಸ್ಥೆಗಳ ಮೂಲಕ ಹಣ ಪಾವತಿಸಬಹುದಾಗಿದೆ. ಬಳಿಕ ವಿದ್ಯಾರ್ಥಿಗಳು ತಾವು ಸಲ್ಲಿಸಿದ ಅರ್ಜಿ ಪ್ರತಿಯನ್ನು ತಮ್ಮ ಶಾಲೆಗಳ ಮುಖ್ಯಸ್ಥರಿಗೆ ಸಲ್ಲಿಸಬೇಕಿದೆ. ಇದಾದ ಬಳಿಕ 5 ದಿನಗಳಲ್ಲಿ ಅಂಕಪಟ್ಟಿ ಸಿಗಲಿದೆ. ಆನ್‍ಲೈನ್ ಮೂಲಕವೇ ಶಾಲಾ ಮುಖ್ಯಸ್ಥರು, ಬಿಇಒ ಹಾಗೂ ಡಿಡಿಪಿಐ ಹಂತದಲ್ಲಿ ಪರಿಶೀಲನೆಗಳು ನಡೆಯಲಿವೆ. ಅರ್ಜಿ ಸಲ್ಲಿಸಿದ 5 ದಿನಗಳಲ್ಲಿ ಅಂಕಪಟ್ಟಿಯನ್ನು ಶಾಲೆಯ ಮುಖ್ಯಸ್ಥರ ಕಚೇರಿಗೆ ತಲುಪಲಿದೆ. ಒಂದು ವೇಳೆ ತುರ್ತಾಗಿ ಬೇಕಿರದವರಿಗೆ ಅಂಕ ಪಟ್ಟಿಗಳು 30 ದಿನಗಳಲ್ಲಿ ಸಿಗಲಿದೆ. ಒಬ್ಬ ವಿದ್ಯಾರ್ಥಿ 4 ಬಾಕಿ ಅಂಕಪಟ್ಟಿಯನ್ನು ಪಡೆಯಬಹುದಾಗಿದೆ.

Translate »