2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣು: ಮುಂದಿನ ತಿಂಗಳಿನಿಂದ 120 ದಿನಗಳ ಕಾಲ ದೇಶಾದ್ಯಂತ ನಡ್ಡಾ ಪ್ರವಾಸ
ಮೈಸೂರು

2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣು: ಮುಂದಿನ ತಿಂಗಳಿನಿಂದ 120 ದಿನಗಳ ಕಾಲ ದೇಶಾದ್ಯಂತ ನಡ್ಡಾ ಪ್ರವಾಸ

November 23, 2020

ನವದೆಹಲಿ,ನ.22-2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಪಕ್ಷ ಸಂಘಟನೆ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮುಂದಿನ ತಿಂಗಳಿನಿಂದ 120 ದಿನ ಗಳ ಕಾಲ ರಾಷ್ಟ್ರದಾದ್ಯಂತ ಪ್ರವಾಸ ಕೈಗೊಳ್ಳಲಿ ದ್ದಾರೆ. ಡಿಸೆಂಬರ್ ಮೊದಲ ವಾರದಿಂದ ಜೆ.ಪಿ. ನಡ್ಡಾ ಪ್ರವಾಸ ಆರಂಭಿಸಲಿದ್ದು, ಉತ್ತರ್‍ಖಂಡ್ ಮೊದಲ ರಾಜ್ಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸುದ್ದಿಗಾರ ರಿಗೆ ತಿಳಿಸಿದರು. ಡಿಸೆಂಬರ್ 5ರಿಂದ ಜೆ.ಪಿ.ನಡ್ಡಾ ಪ್ರವಾಸ ಆರಂಭಿಸುವ ಸಾಧ್ಯತೆಯಿದ್ದು, ಪ್ರತಿಯೊಂದು ರಾಜ್ಯಕ್ಕೂ ಭೇಟಿ ನೀಡಿ, ಎಲ್ಲಾ ಬೂತ್ ಮಟ್ಟದ ಮುಖ್ಯಸ್ಥರೊಂದಿಗೆ ವರ್ಚುಯಲ್ ಸಭೆ ನಡೆಸಲಿದ್ದಾರೆ. ಪ್ರತಿಯೊಂದು ರಾಜ್ಯದ ಜಿಲ್ಲಾ ಮುಖ್ಯಸ್ಥರು ಸೇರಿದಂತೆ ಹಿರಿಯ ಮುಖಂಡರು ಮಾತ್ರವಲ್ಲದೇ, ಪಕ್ಷದ ಶಾಸಕರು ಹಾಗೂ ಸಂಸದರನ್ನು ಭೇಟಿ ಮಾಡಲಿದ್ದಾರೆ ಎಂದರು.

ಪ್ರವಾಸದ ವೇಳೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸದ ಲೋಕಸಭಾ ಕ್ಷೇತ್ರಗಳು ಹಾಗೂ ವಲಯಗಳಲ್ಲಿ ಪಕ್ಷ ಸಂಘಟನೆ ನಿಟ್ಟಿನಲ್ಲಿ ಪಕ್ಷದ ಮುಖಂಡರೊಂದಿಗೆ ಕಾರ್ಯತಂತ್ರ ರೂಪಿಸಲಿದ್ದಾರೆ. ಮುಂದಿನ ವರ್ಷ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಅಸ್ಸಾಂನಲ್ಲಿ ಚುನಾವಣೆಗಾಗಿ ಪಕ್ಷದ ಸಿದ್ಧತೆಯನ್ನು ಪರಿಶೀಲನೆ ನಡೆಸಲಿದ್ದಾರೆ ಎಂದು ಅರುಣ್ ಸಿಂಗ್ ಮಾಹಿತಿ ನೀಡಿದರು.

Translate »