ರೈತರು ಕೃಷಿ ಕ್ಷೇತ್ರದಲ್ಲೇ ಪ್ರಗತಿ ಕಾಣಲು ಕಾರ್ಯಯೋಜನೆ
ಮೈಸೂರು

ರೈತರು ಕೃಷಿ ಕ್ಷೇತ್ರದಲ್ಲೇ ಪ್ರಗತಿ ಕಾಣಲು ಕಾರ್ಯಯೋಜನೆ

August 18, 2021

ಮೈಸೂರು, ಆ.17(ಎಂಟಿವೈ)- ದೇಶದ ಒಟ್ಟು ಜನಸಂಖ್ಯೆಯ ಶೇ.80ರಷ್ಟು ಇರುವ ರೈತರ ಹಿತವನ್ನು ನಾವು ಕಾಯಬೇಕಿದೆ. ರೈತರು ಕೃಷಿಯಲ್ಲೇ ಉಳಿದು, ಪ್ರಗತಿ ಸಾಧಿಸು ವಂತೆ ನೋಡಿಕೊಳ್ಳಬೇಕಿದೆ. ಕೃಷಿ ಕ್ಷೇತ್ರ ವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕಿದೆ. ಈ ದಿಸೆಯಲ್ಲಿ ನಮ್ಮ ಇಲಾಖೆಯಿಂದ ಉತ್ತಮ ಕಾರ್ಯಯೋಜನೆ ರೂಪಿಸುವೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಚಿಂತನೆಗಳನ್ನು ಹಂಚಿಕೊಂಡರು.
ಕೇಂದ್ರ ಸಚಿವೆಯಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಶೋಭಾ, ಮಂಗಳವಾರ ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ರೈತರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.

ಪ್ರತಿ ಜಿಲ್ಲೆಯ ರೈತರ ಸಮಸ್ಯೆಯೂ ಭಿನ್ನ ವಾಗಿರುತ್ತವೆ. ಹಾಗಾಗಿ, ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡುವೆ. ಜಿಲ್ಲೆಗಳಲ್ಲಿನ ಕೃಷಿ ಸಮಸ್ಯೆ, ರೈತರು ಎದುರಿಸುತ್ತಿರುವ ಸಮಸ್ಯೆ ಗಳಿಗೆ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡುತ್ತೇನೆ ಎಂದರು.

ಪ್ರಧಾನಿ ಮೋದಿ ಅವರು ಕರ್ನಾಟಕದ ರೈತನೊಬ್ಬನ ಮಗಳಾದ ನನ್ನನ್ನು ಗುರು ತಿಸಿ ಕೃಷಿ ಖಾತೆ ನೀಡಿದ್ದಾರೆ. ನಾನು ಶಾಲೆ -ಕಾಲೇಜು ಓದುವಾಗ ನಮ್ಮ ಹಳ್ಳಿಯಲ್ಲಿ ಕರೆಂಟ್, ರಸ್ತೆಯೇ ಇರಲಿಲ್ಲ. ಕುಗ್ರಾಮ ದಿಂದ ಬಂದವಳಿಗೆ ಪ್ರಮುಖ ಖಾತೆ ಕೊಟ್ಟು ಕೆಲಸ ಮಾಡಲು ಪ್ರೋತ್ಸಾಹಿಸಿದ್ದಾರೆ.

ದಲ್ಲಾಳಿ ಪ್ರತಿಭಟನಾಕಾರರು: ಕೇಂದ್ರದ ಎನ್‍ಡಿಎ ಸರ್ಕಾರ ತಿದ್ದುಪಡಿ ಮಾಡಿದ ಮಹತ್ವದ 3 ಕೃಷಿ ಕಾಯ್ದೆಗಳನ್ನು ವಿರೋ ಧಿಸಿ ದೆಹಲಿಯಲ್ಲಿ ನಿರಂತರ ಪ್ರತಿಭಟನೆ ಮಾಡುತ್ತಿರುವವರು ನೈಜ ರೈತರಲ್ಲ, ಅವರೆಲ್ಲಾ ಎಪಿಎಂಸಿ ದಲ್ಲಾಳಿಗಳು. ರೈತರ ಹೆಸರೇಳಿಕೊಂಡು ಪ್ರತಿಭಟಿಸು ತ್ತಿದ್ದಾರೆ. ದೆಹಲಿ ರೈತರ ಹೋರಾಟ ಈಗ ದಲ್ಲಾಳಿಗಳ ಹೋರಾಟವಾಗಷ್ಟೇ ಉಳಿ ದಿದೆ. ನಿಜವಾಗಿಯೂ ನಿದ್ರೆ ಮಾಡುವವ ರನ್ನು ಎಬ್ಬಿಸಬಹುದು. ನಿದ್ರೆ ಬಂದಂತೆ ನಟಿಸುವವರನ್ನು ಎಬ್ಬಿಸಲಾಗೋಲ್ಲ. ನಿಜ ರೈತರ ಮನವೊಲಿಸಬಹುದು, ರೈತರಂತೆ ನಟಿಸುವವರ ಮನವೊಲಿಸಲು ಸಾಧ್ಯವೇ? ಎಂದು ಶೋಭಾ ಕರಂದ್ಲಾಜೆ ಟೀಕಿಸಿದರು.

ಮಂಡ್ಯ ಗದ್ದೆಗೆ ಬಾಂಬೆ ಟ್ರಕ್: ಕೃಷಿ ಕಾಯ್ದೆ ಗಳ ತಿದ್ದುಪಡಿಯಿಂದ ರೈತರು ಎಪಿಎಂಸಿ ಅಂಗಳದಲ್ಲಷ್ಟೇ ಅಲ್ಲ, ಎಪಿಎಂಸಿ ಹೊರಗೂ ವ್ಯಾಪಾರ ಮಾಡಬಹುದು. ಮಂಡ್ಯದ ರೈತನ ಗದ್ದೆಗೆ ಫಸಲು ಖರೀದಿಸಲು ಮುಂಬೈ ನಿಂದಲೂ ಟ್ರಕ್ ಬರುವಂತಾಗಲಿದೆ. ಆಗ ರೈತ ಹೆಚ್ಚಿನ ಬೆಲೆಗೆ ತನ್ನ ಬೆಳೆ ಮಾರಾಟ ಮಾಡಬಹುದಾಗಿದೆ ಎಂದರು.

ತಾಲಿಬಾನ್ ಹಿಂದೆ ಪಾಕ್: ಅಫ್ಘಾನಿ ಸ್ತಾನದಲ್ಲಿ ತಾಲಿಬಾನ್ ಉಗ್ರರ ಹಾವಳಿ ಮಿತಿ ಮೀರಿದೆ. ತಾಲಿಬಾನ್ ಕೃತ್ಯ ಕಂಡು ವಿಶ್ವವೇ ತಲ್ಲಣಗೊಂಡಿದೆ. ಗಡಿ ಭಾಗಗಳಲ್ಲಿ ಆತಂಕದ ವಾತಾವರಣವಿದೆ. ಅಫ್ಘಾನಿ ಸ್ತಾನ ಪಕ್ಕದ ಪಾಕಿಸ್ತಾನದ ಕುಮ್ಮಕ್ಕಿನಿಂದ ಅರಾಜಕತೆ, ದಂಗೆ ಏಳಲು ಕಾರಣ. ತಾಲಿ ಬಾನ್ ಉಗ್ರರ ಹಿಂದೆ ಪಾಕಿಸ್ತಾನÀದ ಕೈವಾಡ ಇದೆ ಎಂದು ಶೋಭಾ ಕರಂದ್ಲಾಜೆ ವಿಶ್ಲೇ ಷಿಸಿದರು. ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಮುಖಂಡರಾದ ಜೋಗಿ ಮಂಜು, ಕೇಬಲ್ ಮಹೇಶ್ ಇತರರಿದ್ದರು.


ಸುತ್ತೂರು ಮಠ, ಗಣಪತಿ ಆಶ್ರಮ ಭೇಟಿ: ಬಳಿಕ ಸಚಿವೆ ಬೆಟ್ಟದ ತಪ್ಪಲಿನ ಸುತ್ತೂರು ಮಠಕ್ಕೆ ತೆರಳಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜತೆ ಕೆಲಕಾಲ ಚರ್ಚಿಸಿ, ಆಶೀ ರ್ವಾದ ಪಡೆದರು. ದತ್ತ ನಗರದ ಗಣ ಪತಿ ಸಚ್ಚಿದಾನಂದ ಆಶ್ರಮಕ್ಕೂ ತೆರಳಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಾದ ಪಡೆದರು. ಈ ಸಂದರ್ಭ ಸಂಸದ ಪ್ರತಾಪಸಿಂಹ, ಶಾಸಕ ಎಲ್. ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ವಕೀಲ ಅರುಣ್‍ಕುಮಾರ್ ಮತ್ತಿತರರಿದ್ದರು.

Translate »