ನಾಳೆ ದೆಹಲಿಯಲ್ಲಿ ರೈತರ ಟ್ರಾಕ್ಟರ್ ರ್ಯಾಲಿ
ಮೈಸೂರು

ನಾಳೆ ದೆಹಲಿಯಲ್ಲಿ ರೈತರ ಟ್ರಾಕ್ಟರ್ ರ್ಯಾಲಿ

January 25, 2021

ಚಂಡೀಗಢ,ಜ.24-ಜ.26ರಂದು ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಟ್ರಾಕ್ಟರ್ ರ್ಯಾಲಿ ಮಾಡಿಯೇ ಸಿದ್ದ ಎಂದು ಪ್ರತಿಭಟನಾ ನಿರತ ರೈತರು ಹೇಳಿದ್ದಾರೆ. ಇದಕ್ಕೆ ದೆಹಲಿ ಪೆÇಲೀಸರ ಅನುಮತಿ ಸಿಕ್ಕಿದೆ. ಆದರೆ ಇಷ್ಟು ದಿನ ದೆಹಲಿಯ ಔಟರ್ ರಿಂಗ್ ರೋಡ್‍ನಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸುತ್ತಿದ್ದೇವೆ ಎಂದು ಹೇಳುತ್ತಿದ್ದವರು, ಇದೀಗ ಸ್ವಲ್ಪ ಮೃದು ಭಾವನೆ ತೋರಿ ತಮ್ಮ ಹಠವನ್ನು ಸ್ವಲ್ಪ ಸಡಿಲಿಕೆ ಮಾಡಿ ಆ ರಸ್ತೆಯ ಪ್ರಮುಖ ಭಾಗವನ್ನು ಬಿಟ್ಟು ಬೇರೆಡೆ ರ್ಯಾಲಿ ನಡೆಸಲು ಮುಂದಾಗಿದ್ದಾರೆ. ರ್ಯಾಲಿಯಲ್ಲಿ ಸುಮಾರು 1 ಲಕ್ಷ ಟ್ರಾಕ್ಟರ್‍ಗಳು ರಸ್ತೆಯಲ್ಲಿ ಸಂಚ ರಿಸಲಿವೆ. 100ಕಿಲೋ ಮೀಟರ್‍ಗೂ ಅಧಿಕ ದೂರದವರೆಗೆ ಐದು ಮಾರ್ಗಗಳಲ್ಲಿ ಸಂಚರಿಸಲಿದ್ದಾರೆ.

ಔಟರ್ ರಿಂಗ್ ರೋಡ್‍ಗೆ ಬದಲಿಗೆ ರಾಜಧಾನಿಯ ಒಳಭಾಗಗಳಲ್ಲಿ ರೈತರು ಸಂಚರಿ¸ Àಲಿದ್ದಾರೆ. ಸಿಂಘು ಮತ್ತು ಟೆಕ್ರಿ ಗಡಿಭಾಗದಿಂದ ಬ್ಯಾರಿಕೇಡ್‍ಗಳನ್ನು ತೆಗೆಯಲು ಪೆÇಲೀಸರು ಒಪ್ಪಿಗೆ ನೀಡಿದ್ದು ದೆಹಲಿಗೆ ಟ್ರ್ಯಾಕ್ಟರ್ ಒಳಗೆ ಹೋಗಲು ಅನುವು ಮಾಡಿಕೊಡಲಿದ್ದಾರೆ. ದೆಹಲಿಯ ರಾಜ್ ಪಥ್ ನಲ್ಲಿ ಸರ್ಕಾರದಿಂದ ಗಣರಾಜ್ಯೋತ್ಸವ ಪರೇಡ್ ಮುಗಿದ ಬಳಿಕ ಈ ಪರೇಡ್ ನಡೆಯಲಿದೆ. ರೈತರ ರ್ಯಾಲಿ ಎಲ್ಲಿ ನಡೆಸುವುದು ಎಂಬ ಬಗ್ಗೆ ರೈತ ಮುಖಂಡರು ಮತ್ತು ಪೆÇಲೀಸರ ಮಧ್ಯೆ ಹಲವು ಬಾರಿ ಮಾತುಕತೆ ಗಳು ನಡೆದು ಇಲ್ಲಿಯವರೆಗೆ ಯಾವುದೇ ತೀರ್ಮಾನಕ್ಕೆ ಬಂದಿರಲಿಲ್ಲ. ಔಟರ್ ರಿಂಗ್ ರೋಡ್‍ನಲ್ಲಿ ನಡೆಸುತ್ತೇವೆ ಎಂದು ರೈತರು ಹಠಕ್ಕೆ ಬಿದ್ದಿದ್ದರು. ಅದಕ್ಕೆ ದೆಹಲಿ ಪೆÇಲೀಸರು ಒಪ್ಪಿರಲಿಲ್ಲ. ಇದರಿಂದ ಸರ್ಕಾರದ ಅಧಿಕೃತ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹಿನ್ನಡೆಯಾಗ ಬಹುದು ಎಂಬ ವಾದ ಪೆÇಲೀಸರದ್ದಾಗಿತ್ತು. ಕೊನೆಗೆ ರೈತ ಮುಖಂಡರು ಶಾಂ ತಿಯುತ ವಾಗಿ ಟ್ರ್ಯಾಕ್ಟರ್ ರ್ಯಾಲಿ ನಡೆಸುತ್ತೇವೆ ಎಂದವರಿಗೆ ಪೆÇಲೀಸರು ಅನುಮತಿ ಕೊಟ್ಟಿದ್ದಾರೆ. ದೆಹಲಿ, ಹರ್ಯಾಣ ಮತ್ತು ಉತ್ತರ ಪ್ರದೇಶದ ಪೆÇಲೀಸರೊಂದಿಗೆ ಮಾತುಕತೆ ನಡೆಸಿದ ನಂತರ ರೈತ ಮುಖಂಡರು ಇದೀಗ ಸಂಪೂರ್ಣ ಸಜ್ಜರಾಗಿ ಶಿಸ್ತುಬದ್ಧವಾಗಿ ರ್ಯಾಲಿ ನಡೆಸಲು ನಿರ್ಧರಿಸಿದ್ದಾರೆ. ದೇಶಾದ್ಯಂತ ರೈತರಿಂದ ಮತ್ತು ಬೆಂಬಲಿಗರಿಂದ ಭಾರೀ ಬೆಂಬಲವಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.

ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್, ನಾವು ಶಾಂತಿಯುತವಾಗಿ ಐತಿಹಾಸಿಕ ಟ್ರ್ಯಾಕ್ಟರ್ ರ್ಯಾಲಿ ಕೈಗೊಳ್ಳಲಿದ್ದು ಸರ್ಕಾರದ ಗಣರಾಜ್ಯೋತ್ಸವ ಪರೇಡ್ ಗೆ ಮತ್ತು ಭದ್ರತೆಗೆ ಯಾವುದೇ ರೀತಿಯಿಂದಲೂ ತೊಂದರೆಯಾಗುವುದಿಲ್ಲ. ಬ್ಯಾರಿಕೇಡ್‍ಗಳನ್ನು ತೆಗೆದುಕೊಡುತ್ತೇವೆ ಎಂದು ಪೆÇಲೀಸರು ಭರವಸೆ ನೀಡಿದ್ದು ದೆಹಲಿಯೊಳಗೆ ಪ್ರವೇಶಿಸುತ್ತೇವೆ ಎಂದರು. ಪಂಜಾಬ್ ಕಿಸಾನ್ ಸಂಘರ್ಷ ಸಮಿತಿಯ ಸತ್ಮಮ್ ಸಿಂಗ್ ಪನು, ಗಣರಾಜ್ಯೋತ್ಸವ ದಿನ ದೆಹಲಿಗೆ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಹಲವು ರೈತರು ಬರುತ್ತಾರೆ. ದೆಹಲಿಯ ಹೊರಗೆ ಔಟರ್ ರಿಂಗ್ ರೋಡ್‍ನಲ್ಲಿ ರ್ಯಾಲಿ ನಡೆಸುತ್ತೇವೆ. ದೆಹಲಿ ಪೆÇಲೀಸರು ಅನುಮತಿ ನೀಡುತ್ತಾರೋ, ಇಲ್ಲವೋ ಮುಖ್ಯವಲ್ಲ ಎಂದು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.

ಬೆಂಗಳೂರಲ್ಲೂ ಟ್ರಾಕ್ಟರ್ ಪೆರೇಡ್
ಬೆಂಗಳೂರು,ಜ.24-ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ಜ.26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಉದ್ದೇಶಿಸಲಾಗಿದ್ದು, ದೆಹಲಿ ರೈತ ಹೋರಾಟಕ್ಕೆ ರಾಜ್ಯದಲ್ಲೂ ಭಾರೀ ಬೆಂಬಲ ವ್ಯಕ್ತ ವಾಗುತ್ತಿದೆ. ಅಂದು ಬೆಂಗಳೂರಿನಲ್ಲೂ ಬೃಹತ್ ಟ್ರ್ಯಾಕ್ಟರ್ ಪರೇಡ್ ಮತ್ತು ರೈತ ಸಮಾವೇಶ ನಡೆಯಲಿದೆ.

“ಸಂಯುಕ್ತ ಹೋರಾಟ-ಕರ್ನಾಟಕ ವೇದಿಕೆ ಆಯೋಜಿಸು ತ್ತಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ನಾಲ್ಕೂ ದಿಕ್ಕು ಗಳು ರೈತರು ತಮ್ಮ ಟ್ರ್ಯಾಕ್ಟರ್‍ಗಳೊಂದಿಗೆ ಆಗಮಿಸಲಿದ್ದಾರೆ” ಎಂದು ಹೋರಾಟದ ಮುಖಂಡ ಹಾಗೂ ರೈತ ಸಂಘದ ಹಿರಿಯ ನಾಯಕರಾದ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸಹ ಮಾತನಾಡಿದ್ದು, ನೂತನ ಎಪಿಎಂಸಿ ಕಾಯ್ದೆ, ಭೂ ಸುಧಾ ರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿಯೂ ಪ್ರತಿಭಟನೆ ನಡೆ ಯಲಿದೆ. ಸಾವಿರಾರು ರೈತರು ಈ ರ್ಯಾಲಿಯಲ್ಲಿ ಭಾಗಿಯಾಗಲಿದ್ದು, ತುಮಕೂರು ನೈಸ್ ರಸ್ತೆಯ ಜಂಕ್ಷನ್‍ನಿಂದ ರ್ಯಾಲಿ ಆರಂಭ ವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದು ರೈತ, ಕಾರ್ಮಿಕರ ಹೋರಾಟ. ರಾಜ್ಯದ ಮುಂಬೈ ಕರ್ನಾಟಕ,ಹೈದರಾಬಾದ್ ಕರ್ನಾಟಕ, ಮಡಿಕೇರಿ-ಮೈಸೂರು ಭಾಗಗಳಿಂದ ರೈತರು, ಕಾರ್ಮಿಕರು ಹಾಗೂ ಈ ಹೋರಾಟದ ಬೆಂಬಲಿಗರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 25,000 ಮಂದಿ ಹೊರ ಜಿಲ್ಲೆಗಳಿಂದ ಆಗಮಿಸುತ್ತಿದ್ದಾರೆ. ಹತ್ತಿರದ ಜಿಲ್ಲೆ ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಟ್ರ್ಯಾಕ್ಟರ್‍ಗಳು ಆಗಮಿಸುತ್ತಿವೆ. ದ್ವಿಚಕ್ರವಾಹನಗಳು, ಅಲ್ಲದೆ ಇತರೆ ವಾಹನಗಳು ಆಗಮಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ. ಮಡಿಕೇರಿಯ ಕುಟ್ಟಾದಿಂದ ಜ.25ರಂದು ಟ್ರ್ಯಾಕ್ಟರ್ ರ್ಯಾಲಿ ಹೊರಡುತ್ತಿದೆ. ಪೆÇನ್ನಂಪೇಟೆ, ಬಿ ಮಂಗಲ, ಗೋಣಿಕೊಪ್ಪ, ತಿತಿಮತಿ, ಹುಣಸೂರು ಮೂಲಕ ಮೈಸೂರಿಗೆ ಆಗಮಿಸುತ್ತಿದೆ. ಅಲ್ಲಿಂದ ಪಾಂಡವಪುರ, ಮಂಡ್ಯ ಮಾರ್ಗವಾಗಿ ಬರುವ ಈ ರ್ಯಾಲಿ ಬಿಡದಿ ಸೇರುವುದು.

ಬೆಳಗಾವಿ, ಹುಬ್ಬಳಿ ಕಡೆಯಿಂದ ಬರುವ ವಾಹನಗಳು ಚಿತ್ರದುರ್ಗದಲ್ಲಿ ತಂಗಲಿವೆ. ರಾಯಚೂರು, ಬಳ್ಳಾರಿ ಕಡೆಯಿಂದ ಬರುವ ವಾಹನಗಳು ತುಮಕೂರಿನ ಮಠದಲ್ಲಿ ತಂಗಲಿವೆ. ಚಿಕ್ಕಬಳ್ಳಾಪುರ, ಕೋಲಾರ ಕಡೆಯಿಂದಲೂ ವಾಹನಗಳು ಆಗಮಿಸುತ್ತಿವೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ. ಗಣರಾಜ್ಯೋತ್ಸವದಂದು ನಗರದ ಎಲ್ಲಾ ದಿಕ್ಕುಗಳಿಂದ ಬರುವ ವಾಹನಗಳು 11 ಗಂಟೆ ಹೊತ್ತಿಗೆ ಬೆಂಗಳೂರು ನಗರದ ಹೊರ ವಲಯದಲ್ಲಿ ನೆರೆಯಲಿದ್ದು, 12 ಗಂಟೆಗೆ ಸರಿಯಾಗಿ ನಗರವನ್ನು ಪ್ರವೇಶಿಸುತ್ತವೆ. ಜ.26ರಂದು ಬೆಳಗ್ಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಗಳು ಧ್ವಜಾರೋಹಣ ಮಾಡಿ, ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹಿಸಲಾಗುವುದು ಎಂದು ಬಡಗಲಪುರ ನಾಗೇಂದ್ರರವರು ಮಾಹಿತಿ ನೀಡಿದ್ದಾರೆ.

 

Translate »