ಸರ್ಕಾರದ ರೈತ ವಿರೋಧಿ ನಿಲುವು ಖಂಡಿಸಿ ರೈತಸಂಘ ಪ್ರತಿಭಟನೆ
ಮೈಸೂರು

ಸರ್ಕಾರದ ರೈತ ವಿರೋಧಿ ನಿಲುವು ಖಂಡಿಸಿ ರೈತಸಂಘ ಪ್ರತಿಭಟನೆ

August 18, 2020

ಮೈಸೂರು, ಆ.17(ಆರ್‍ಕೆಬಿ)- ರಾಜ್ಯ ಸರ್ಕಾರದ ರೈತ ವಿರೋಧಿ ನಿಲುವು ಗಳನ್ನು ಖಂಡಿಸಿ ಸಾಮೂಹಿಕ ನಾಯಕತ್ವ ದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ನ್ಯಾಯಾಲಯ ಸಮೀಪದ ಮಹಾತ್ಮ ಗಾಂಧಿ ಪುತ್ತಳಿ ಬಳಿ ಪ್ರತಿಭಟನೆ ನಡೆಸಿದರು.

ಸಂಘಟನೆಯ ರಾಜ್ಯ ವರಿಷ್ಠರಾದ ಚುಕ್ಕಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಜಮಾ ವಣೆಗೊಂಡ ರೈತರು ಕಬ್ಬಿನ ಜಲ್ಲೆಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ಮಾತನಾಡಿದ ಚುಕ್ಕಿ ನಂಜುಂಡಸ್ವಾಮಿ, ರೈತ ಸಮು ದಾಯದ ಸಾಮೂಹಿಕ ಮಾರಣಹೋಮಕ್ಕೆ ಕೇಂದ್ರ, ರಾಜ್ಯ ಸರ್ಕಾರ ಮುಂದಾಗಿವೆ. ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ, ವಿದ್ಯುಚ್ಛಕ್ತಿ ಕಾಯ್ದೆಗಳಿಗೆ ಸರ್ಕಾರ ತಿದ್ದುಪಡಿ ತಂದು ಇಡೀ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದೆ. ಅವಶ್ಯಕ ಪದಾರ್ಥಗಳ ಕಾಯ್ದೆ, ಬೀಜ ಕಾಯ್ದೆಗಳು ರೈತರಿಗೆ ಆಘಾತಕಾರಿಯಾಗಿ ಪರಿಣಮಿಸಿವೆ. ರೈತರ ಬದುಕು ದುಸ್ತರ ವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂಜನಗೂಡು ತಾಲೂಕಿನಲ್ಲಿ ಕುಲಾಂ ತರಿ ಹತ್ತಿಗಿಡ ವಿಫಲಗೊಂಡ ಬಗ್ಗೆ ಕಿಡಿ ಕಾರಿದ ರೈತರು ಹತ್ತಿಗಿಡಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ಭಟನೆಯಲ್ಲಿ ಸಂಘಟನೆ ಕೋರ್ ಕಮಿಟಿ ಸದಸ್ಯರಾದ ವಿದ್ಯಾಸಾಗರ್ ರಾಮೇಗೌಡ, ಮಂಜು, ಕಿರಣ್, ಇಮ್ಮಾವು ರಘು ಮುಂತಾದವರು ಭಾಗವಹಿಸಿದ್ದರು.

Translate »