ಮೈಸೂರು,ಜೂ.22(ಆರ್‍ಕೆಬಿ)-ಮೈಸೂರಿನ ಪ್ರತಿಷ್ಠಿತ ಶಾಂತಲಾ ಚಿತ್ರಮಂದಿರ ಮುಚ್ಚುತ್ತಿರುವ ಹಿನ್ನೆಲೆಯಲ್ಲಿ ಕಲಾಭಿಮಾನಿಗಳ ಹಾಗೂ ಪ್ರೇಕ್ಷಕರ ಜನಸ್ನೇಹಿ ಮಾಲೀಕರಾಗಿದ್ದ ಪದ್ಮನಾಭ ಪದಕಿ ಮತ್ತು ವ್ಯವಸ್ಥಾಪಕ ದೇವರಾಜು ಅವರ 4 ದಶಕಗಳ ಸುದೀರ್ಘ ಕಲಾಸೇವೆಯನ್ನು ಪರಿಗಣಿಸಿ ಪಾತಿ ಫೌಂಡೇಷನ್ ವತಿಯಿಂದ ಚಿತ್ರಮಂದಿರದ ಮುಂಭಾಗ ಇಬ್ಬರನ್ನೂ ಸನ್ಮಾನಿಸಲಾಯಿತು.
ಈ ಸಂದರ್ಭದÀಲ್ಲಿ ಚಲನಚಿತ್ರ ನಿರ್ಮಾಪಕರೂ ಆದ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಸಾಂಸ್ಕøತಿಕ ರಾಜಧಾನಿ ಮೈಸೂರಿನಲ್ಲಿ ಕಲಾಭಿಮಾನಿಗಳು, ಸಿನಿ ಪ್ರೇಕ್ಷಕರು ಹೆಚ್ಚಾ ಗಿದ್ದು, ಅವರೆಲ್ಲಾ ಈ ಚಿತ್ರಮಂದಿರದಲ್ಲಿ ಮನೆಮಂದಿಯೊಂದಿಗೆ ಒಟ್ಟಾಗಿ ಕುಳಿತು ಸಿನಿಮಾ ವೀಕ್ಷಿಸುತ್ತಿದ್ದ ಕಾಲವನ್ನು ಸ್ಮರಿಸಿದರು.
ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರಿಕರವ ರೆಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಚಿತ್ರಮಂದಿರ ಇತಿಹಾಸದ ಪುಟಕ್ಕೆ ಸೇರುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಚಿತ್ರಗಳ ಬಿಡುಗಡೆ ಸಂದರ್ಭದಲ್ಲಿ ಯಾವುದೇ ಗಲಾಟೆಗಳಿಗೂ ಅವಕಾಶ ವಾಗದ ರೀತಿಯಲ್ಲಿ ಮಾಲೀಕರು ಮತ್ತು ವ್ಯವಸ್ಥಾಪಕರೇ ಕೈಯ್ಯಲ್ಲಿ ಲಾಠಿ ಹಿಡಿದು ಜನರನ್ನು ನಿಯಂತ್ರಿಸುತ್ತಿದ್ದರು. ಯಾವುದೇ ಚಿತ್ರ ಬಿಡುಗಡೆಯಾದÀರೂ ಇಲ್ಲಿ ಕನಿಷ್ಠ 50 ದಿನಗಳನ್ನು ಪೂರೈಸುತ್ತಿ ದ್ದವು. ಚಿತ್ರ ನಿರ್ಮಾಪಕರ ಪಾಲಿಗೆ ಶಾಂತಲಾ ಅದೃಷ್ಟದ ಚಿತ್ರಮಂದಿರ ಎನಿಸಿತ್ತು ಎಂದು ಹೇಳಿದರು.
ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ ಮಾತ ನಾಡಿ, ತಾತಯ್ಯ ಅನಾಥಾಲಯ ಸಂಘದ ಒಡೆತನದ ಜಾಗದಲ್ಲಿ 50 ವರ್ಷಗಳ ಹಿಂದೆ ಪ್ರಾರಂಭವಾದ ಶಾಂತಲಾ ಚಿತ್ರಮಂದಿರ ಪ್ರತಿ ಶುಕ್ರವಾರ, ಶನಿವಾರ ಸ್ನೇಹಿತರ ಸಂತೋಷಕೂಟಕ್ಕೆ ಸಾಕ್ಷಿ ಯಾಗುತ್ತಿತ್ತು. ಸುತ್ತಲೂ ಸಾಲು ಮರ ಬೆಳೆಸಿ, ಪ್ಲಾಸ್ಟಿಕ್ ನಿಷೇಧ ವಲಯವಾಗಿ ಮಾಡುವ ಮೂಲಕ ಪರಿಸರಕ್ಕೂ ಒತ್ತು ನೀಡ ಲಾಗಿತ್ತು. ಇಂತಹ ಚಿತ್ರಮಂದಿರಗಳನ್ನು ರಕ್ಷಿಸಲು ರಾಜ್ಯ ಸರ್ಕಾರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ವಹಿಸಬೇಕು. ಮತ್ತೊಮ್ಮೆ ಶಾಂತಲಾ ಚಿತ್ರಮಂದಿರದಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲು ತಾತಯ್ಯ ಅನಾಥಾಲಯ ಸಂಘ ಮುಂದಾಗ ಬೇಕು ಎಂದು ಮನವಿ ಮಾಡಿದರು. ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ, ಕೇಬಲ್ ಮಹೇಶ್, ಲಕ್ಷ್ಮಿದೇವಿ, ಎಸ್.ಎನ್.ರಾಜೇಶ್, ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್, ಚಕ್ರಪಾಣಿ, ಸುಚೀಂದ್ರ, ಹರೀಶ್ ನಾಯ್ಡು, ಎಸ್.ಎನ್.ರಾಜೇಶ್ ಮತ್ತು ಚಿತ್ರಮಂದಿರದ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.