ಚಲಿಸುತ್ತಿದ್ದ ಕಾರಿಗೆ ಬೆಂಕಿ; ಸ್ವಲ್ಪದರಲ್ಲೇ ಪಾರಾದ ಕುಟುಂಬ
ಮೈಸೂರು

ಚಲಿಸುತ್ತಿದ್ದ ಕಾರಿಗೆ ಬೆಂಕಿ; ಸ್ವಲ್ಪದರಲ್ಲೇ ಪಾರಾದ ಕುಟುಂಬ

June 11, 2020

ಮೈಸೂರು,ಜೂ.10(ವೈಡಿಎಸ್)- ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಮೈಸೂರು-ತಿ.ನರಸೀಪುರ ರಸ್ತೆಯ ಚಿಕ್ಕಹಳ್ಳಿ ಬಳಿ ಬುಧವಾರ ಸಂಜೆ ನಡೆದಿದೆ.

ಮೈಸೂರಿನ ಪೊಲೀಸ್ ಬಡಾವಣೆ ನಿವಾಸಿ ಬಸಪ್ಪ ಎಂಬವರು ಕುಟುಂಬದೊಂದಿಗೆ ಮಾರುತಿ ಝೆನ್ (ಕೆಎ03ಎಂಜಿ8772) ಕಾರಿ ನಲ್ಲಿ ಚಾಮರಾಜನಗರಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಬುಧವಾರ ಸಂಜೆ 7.30ರ ವೇಳೆ ಚಿಕ್ಕಹಳ್ಳಿ ಬಳಿ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಎಚ್ಚೆತ್ತ ಬಸಪ್ಪ ಕಾರನ್ನು ತಕ್ಷಣ ನಿಲ್ಲಿಸಿ ಕುಟುಂಬದವರು ಕಾರಿನಿಂದ ಇಳಿಸಿದ್ದಾರೆ. ಬಳಿಕ ಬೆಂಕಿ ಹೊತ್ತಿಕೊಂಡು ಕಾರನ್ನು ಆವರಿಸಿ ಉರಿಯ ಲಾರಂಭಿಸಿದೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ ರಾದರೂ ಅಷ್ಟರಲ್ಲಾಗಲೇ ಕಾರು ಪೂರ್ಣ ಸುಟ್ಟು ಕರಕಲಾಗಿತ್ತು ಎಂದು ವರುಣಾ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

Translate »