ಮೈಸೂರು-ಗೋವಾ ನಡುವೆ ವಿಮಾನ ಹಾರಾಟ ಆರಂಭ
ಮೈಸೂರು

ಮೈಸೂರು-ಗೋವಾ ನಡುವೆ ವಿಮಾನ ಹಾರಾಟ ಆರಂಭ

July 3, 2020

ಮೈಸೂರು, ಜು. 2 (ಆರ್‍ಕೆ)- ಏರ್ ಇಂಡಿಯಾ ಲಿಮಿಟೆಡ್ ಮಾಲೀಕತ್ವದ ಅಲಯನ್ಸ್ ಏರ್ ಸಂಸ್ಥೆಯು ಬೆಂಗಳೂರು ಮತ್ತು ಗೋವಾ ನಡುವೆ ಮೈಸೂರು ಮಾರ್ಗವಾಗಿ ಜುಲೈ 1 ರಿಂದ ವಿಮಾನ ಹಾರಾಟ ಆರಂಭಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮೈಸೂರು ವಿಮಾನ ನಿಲ್ದಾಣದ ನಿರ್ದೇ ಶಕ ಆರ್.ಮಂಜುನಾಥ್ ಅವರು, ಮಂಗಳವಾರ ಹೊರತುಪಡಿಸಿ ಉಳಿದ ದಿನ ಗಳಂದು ಪ್ರತಿ ದಿನ ಮಧ್ಯಾಹ್ನ 2.20 ಗಂಟೆಗೆ ಬೆಂಗಳೂರಿನಿಂದ ಹೊರಡುವ ಅಲಯನ್ಸ್ ಏರ್ ವಿಮಾನವು ಮಧ್ಯಾಹ್ನ 3.15 ಗಂಟೆಗೆ ಮೈಸೂರು ತಲುಪಿ ಅದೇ ವಿಮಾನವು ಮಧ್ಯಾಹ್ನ 3.55 ಗಂಟೆಗೆ ಮೈಸೂರಿನಿಂದ ಪ್ರಯಾಣ ಆರಂಭಿಸಿ ಸಂಜೆ 6 ಗಂಟೆಗೆ ಗೋವಾ ತಲುಪಲಿದೆ ಎಂದು ತಿಳಿಸಿದ್ದಾರೆ.

ರಾತ್ರಿ 7 ಗಂಟೆಗೆ ಗೋವಾದಿಂದ ಹೊರಡುವ ವಿಮಾನವು ರಾತ್ರಿ 8.30 ಗಂಟೆಗೆ ಮೈಸೂರು ತಲುಪಿ, ನಂತರ 8.55 ಗಂಟೆಗೆ ಮೈಸೂರಿನಿಂದ ಪ್ರಯಾಣ ಮುಂದುವರೆಸಿ ರಾತ್ರಿ 9.45 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಗೋವಾಗೆ (ಒಂದು ಕಡೆಗೆ) ಪ್ರಯಾಣ ದರ ಒಬ್ಬರಿಗೆ 3,282 ರೂ., ಮೈಸೂರಿನಿಂದ ಗೋವಾಗೆ 1,600 ರಿಂದ 1,700 ರೂ. ನಿಗದಿಪಡಿಸಲಾಗಿದೆ ಎಂದು ಮಂಜು ನಾಥ್ ತಿಳಿಸಿದ್ದಾರೆ.

ತಿತಿತಿ.ಚಿiಡಿiಟಿಜiಚಿ.iಟಿ ಮೂಲಕ ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದ್ದು, ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ಸ್ (ಎಸ್‍ಓಪಿ) ಬಗ್ಗೆ ಸಿವಿಲ್ ಎವಿಯೇಷನ್ ಮಿನಿಸ್ಟ್ರಿ ಮಾರ್ಗಸೂಚಿಗಳನ್ನು ಸಂಸ್ಥೆಯು ಪಾಲಿಸುವಂತೆ ಸೂಚಿಸಲಾಗಿದೆ. ವಿಮಾನ ಹಾರಾಟಕ್ಕೆ ಬೇಕಾದ ಸೌಲಭ್ಯ ಹಾಗೂ ಮುಂಜಾ ಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಶೇ. 20 ರಷ್ಟು ಆಸನ ಭರ್ತಿ: ಮೈಸೂರಿನಿಂದ ಕೊಚ್ಚಿನ್, ಹೈದರಾಬಾದ್, ಗೋವಾ, ಬೆಂಗಳೂರು, ಬೆಳಗಾವಿ ಹಾಗೂ ಚೆನ್ನೈ ನಗರಗಳಿಗೆ ಸಂಚರಿ ಸುತ್ತಿರುವ ಅಲಯನ್ಸ್ ಏರ್ ಹಾಗೂ ಟ್ರೂಜೆಟ್ ವಿಮಾನಗಳಲ್ಲಿ ಪ್ರತಿದಿನ ಸರಾಸರಿ ಶೇ. 20 ರಿಂದ 25 ರಷ್ಟು ಆಸನಗಳು ಭರ್ತಿಯಾಗುತ್ತಿವೆ ಎಂದು ಮಂಜುನಾಥ್ ತಿಳಿಸಿದರು.

Translate »