ಮೈಸೂರಿನ ಕಾವಾದಲ್ಲಿ ಕಲಾಕೃತಿ ವೀಕ್ಷಣೆಗೆ  ಸೀಮಿತವಾದ ಕನ್ನಡ-ಸಂಸ್ಕøತಿ ಸಚಿವರ ಭೇಟಿ
ಮೈಸೂರು

ಮೈಸೂರಿನ ಕಾವಾದಲ್ಲಿ ಕಲಾಕೃತಿ ವೀಕ್ಷಣೆಗೆ ಸೀಮಿತವಾದ ಕನ್ನಡ-ಸಂಸ್ಕøತಿ ಸಚಿವರ ಭೇಟಿ

August 26, 2021

ಮೈಸೂರು, ಆ.25(ಎಂಟಿವೈ)- ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿಗೆ (ಕಾವಾ) ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‍ಕುಮಾರ್ ಬುಧ ವಾರ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು.

ಸಚಿವರಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಸಚಿವ ವಿ.ಸುನೀಲ್ ಕುಮಾರ್ ಬೆಂಬಲಿಗ ರೊಂದಿಗೆ ಚಾಮುಂಡಿಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಕಾವಾ ಕಾಲೇಜಿಗೆ ಭೇಟಿ ನೀಡಿದ ಅವರು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ರಚಿಸಿದ ಕಲಾಕೃತಿಗಳು ಮತ್ತು ಚಿತ್ರಕಲೆಯನ್ನು ವೀಕ್ಷಣೆ ಮಾಡಿದರು. ಆದರೆ ಕಾಲೇಜಿನ ನಾನಾ ಸಮಸ್ಯೆಗಳಿಗೆ ಕಿವಿಯಾಗದೇ ಕಲಾಕೃತಿ ನೋಡ ಬಂದವರಂತೆ ವಾಪಸ್ಸು ತೆರಳಿದರು. ಇದರಿಂದ ಅಲ್ಲಿನ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿಷ್ಠಿತ ಕಾವಾ ಸಂಸ್ಥೆಗೆ ಕಳೆದ 5 ವರ್ಷದಿಂದ ಖಾಯಂ ಡೀನ್ ಇಲ್ಲ. ನಾನಾ ಸಮಸ್ಯೆಯಿಂದ ವಿದ್ಯಾರ್ಥಿ ಗಳು ಪರದಾಡುವಂತಾಗಿದೆ. ಈ ಹಿಂದೆ ಡೀನ್ ಆಗಿದ್ದ ಬಸವರಾಜ ಮುಷವಳಿಗಿ ನಿವೃತ್ತಿಯಾದಾಗಿನಿಂದ ಕಾವಾಗೆ ಡೀನ್ ನಿಯೋಜಿಸಿಲ್ಲ. ಕಾಲೇಜಿಗೆ ಭೇಟಿ ನೀಡಿದ್ದ ಸಚಿವರು, ಡೀನ್ ನಿಯೋಜನೆ ಬಗ್ಗೆ ಮಾಹಿತಿ ನೀಡಬಹುದು ಎಂದು ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಮತ್ತೆ ನಿರಾಸೆಯುಂಟಾಗಿದೆ.

ಕಲೆ ಸಂಬಂಧಿಸದ ಅಧಿಕಾರಿಗಳನ್ನು ಪ್ರಭಾರ ಡೀನ್ ಆಗಿ ನೇಮಕ ಮಾಡಲಾಗುತ್ತಿದೆ. ಇದರಿಂದ ಕಾಲೇಜಿಗೆ ಮೂಲಭೂತ ಸೌಲಭ್ಯ ಲಭ್ಯವಿಲ್ಲ. ವಿದ್ಯಾರ್ಥಿಗಳ ಬವಣೆ ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಚಿವರ ಭೇಟಿಯಿಂದ ವಿದ್ಯಾರ್ಥಿಗಳಲ್ಲಿ ಹಲವು ನಿರೀಕ್ಷೆ ಹುಟ್ಟು ಹಾಕಿತ್ತು. ಆದರೆ ಸಚಿವರು, ವಿದ್ಯಾರ್ಥಿಗಳ ಕಲಾಕೃತಿ ವೀಕ್ಷಿಸಿ ವಾಪಸ್ಸಾದರು.

ಕಾವಾ ವಿದ್ಯಾರ್ಥಿಗಳು ಸಚಿವರಿಗೆ ಮನವಿ ಸಲ್ಲಿಸಿ, ಖಾಯಂ ಡೀನ್ ನೇಮಕ ಮಾಡಬೇಕು. ಉಪನ್ಯಾಸಕರು, ರೀಡರ್ ಮತ್ತು ಬ್ಯಾಕ್‍ಲಾಗ್ ಹುದ್ದೆಗಳನ್ನು ಹಲವು ವರ್ಷ ಗಳಿಂದ ತುಂಬಿಲ್ಲ. ಅದನ್ನು ಶೀಘ್ರವಾಗಿ ಭರ್ತಿ ಮಾಡ ಬೇಕೆಂದು ಮನವಿ ಮಾಡಲಾಯಿತು. ಹಲವು ವರ್ಷ ಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸು ವವರು ತಮ್ಮನ್ನು ಖಾಯಂಗೊಳಿಸುವಂತೆ ಮನವಿ ಮಾಡಿದರು. ನೇಮಕ ಪ್ರಕ್ರಿಯೆ ಮಾಡಲಾಗುವುದು ಎಂಬಂತೆ ಸಚಿವರು ತಲೆಯಾಡಿಸಿ ಹೊರಟರು.

ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ರಾಗಿದ್ದ ಅರವಿಂದ ಲಿಂಬಾವಳಿ ಸಹ ಇದೇ ರೀತಿ ಭೇಟಿ ನೀಡಿ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. 6 ತಿಂಗಳ ಬಳಿಕ ಮತ್ತೋರ್ವ ಸಚಿವರು ಭೇಟಿ ನೀಡಿ ದ್ದಾರೆ. ಇವರಾದರೂ ನಮ್ಮ ಸಮಸ್ಯೆ ಬಗೆಹರಿಸುತ್ತಾರೋ, ಇಲ್ಲವೋ ಎಂದು ವಿದ್ಯಾರ್ಥಿಗಳು ನಿರಾಸೆ ವ್ಯಕ್ತಪಡಿಸಿದರು.

ಇದೇ ವೇಳೆ ಕಾಲೇಜಿನ ಶೈಕ್ಷಣಿಕ ಸಂಯೋಜಕ ವಿಜಯ ರಾವ್, ಕಾವಾಗೆ ಕಲೆ ಹಿನ್ನೆಲೆವುಳ್ಳ ಶಾಶ್ವತ ಡೀನ್ ನೇಮಕ ಮಾಡಿಕೊಳ್ಳಬೇಕು ಹಾಗೂ ಖಾಲಿ ಇರುವ ಬೋಧಕ ವರ್ಗ ನೇಮಿಸಬೇಕೆಂದು ಸರಕಾರ ದೊಂದಿಗೆ ಪತ್ರ ವ್ಯವಹಾರವನ್ನು ಸಂಬಂಧಿತ ಅಧಿಕಾರಿ ಗಳು ನಡೆಸುತ್ತಿದ್ದಾರೆ. ಅರವಿಂದ ಲಿಂಬಾವಳಿ ಅವರು ಭೇಟಿ ನೀಡಿದಾಗಲೂ ಈ ಸಮಸ್ಯೆಯನ್ನು ಅವರ ಗಮ ನಕ್ಕೆ ತಂದಿದ್ದೇವೆ. ಈಗಿನ ಸಚಿವರ ಗಮನಕ್ಕೂ ತಂದಿ ದ್ದೇವೆ. ಇಲ್ಲಿನ ಸಮಸ್ಯೆಗಳು ಸರಕಾರದ ಗಮನದಲ್ಲಿದ್ದು, ಶೀಘ್ರ ಬಗೆಹರಿಯಲಿದೆ ಎಂದು ಭರವಸೆ ಇದೆ. ಕಾಲೇಜಿಗೆ ಮೂಲ ಸೌಲಭ್ಯಗಳ ಸಮಸ್ಯೆ ಇಲ್ಲ. ಡೀನ್ ಮತ್ತು ಬೋಧಕರ ನೇಮಕ ಮಾತ್ರ ಆಗಬೇಕು ಎಂದರು.

ಕಾಲೇಜಿನ ಕುಂಚ ಕಾವ್ಯ ವಿದ್ಯಾರ್ಥಿ ಸಂಘಟನೆ ಕಾರ್ಯ ದರ್ಶಿ ನಿರಂಜನ್ ಮಾತನಾಡಿ, ಕಾವಾ ಕಾಲೇಜಿನ ಸಮಸ್ಯೆಯ ಬಗ್ಗೆ ಸಚಿವರ ಗಮನಕ್ಕೆ ತರಲು ಉದ್ದೇ ಶಿಸಿದ್ದೆವು. ಕಲೆ ಹಿನ್ನೆಲೆವುಳ್ಳವರನ್ನು ಡೀನ್ ಆಗಿ ನೇಮಕ ಮಾಡಬೇಕು. ಇದರಿಂದ ಸಂಸ್ಥೆ ಏಳಿಗೆಗೆ ನೆರವಾಗುತ್ತದೆ. ಮೇಟಿ ಇದ್ದರೆ ನಮ್ಮ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದರು. ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ವೀರಣ್ಣ ಅರ್ಕಶಾಲಿ, ಕಾವಾ ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಬಿಜೆಪಿ ಮುಖಂಡ ಅರುಣ್‍ಕುಮಾರ್, ಪ್ರದೀಪ್ ಸೇರಿದಂತೆ ಉಪಸ್ಥಿತರಿದ್ದರು.

Translate »