ವಾರಾಂತ್ಯ, ನೈಟ್ ಕಫ್ರ್ಯೂ ಹಿಂಪಡೆಯಲು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ
News

ವಾರಾಂತ್ಯ, ನೈಟ್ ಕಫ್ರ್ಯೂ ಹಿಂಪಡೆಯಲು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ

January 19, 2022

ಬೆಂಗಳೂರು, ಜ.18 (ಕೆಎಂಶಿ)- ಕೋವಿಡ್ ಸೋಂಕು ಹತ್ತಿಕ್ಕಲು ವಾರಾಂತ್ಯ ಕಫ್ರ್ಯೂ ಹಾಗೂ ನೈಟ್ ಕಫ್ರ್ಯೂ ಜಾರಿಗೊಳಿಸಿರುವುದನ್ನು ತಕ್ಷಣದಿಂದಲೇ ಹಿಂದಕ್ಕೆ ಪಡೆಯ ಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕಫ್ರ್ಯೂಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿ ಪಕ್ಷದಲ್ಲೇ ಗೊಂದಲವಿದೆ. ಕಫ್ರ್ಯೂನಿಂದ ಸೋಂಕು ಇಳಿಕೆಯಾಗುತ್ತಿದೆ ಎನ್ನುವುದರಲ್ಲಿ ಯಾವುದೇ ಆಧಾರಗಳಿಲ್ಲ. ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣವೇ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಬೇಕು, ಒಂದು ವೇಳೆ ವಾರಾಂತ್ಯ ಕಫ್ರ್ಯೂ ಮುಂದುವರೆಸಿದ್ದೇ ಆದಲ್ಲಿ, ಅದರಿಂದ ಸಂಕಷ್ಟಕ್ಕೆ ಸಿಲುಕುವ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಕೋವಿಡ್ ನಿಯಮಾವಳಿಗಳನ್ನು ರಾಜಕಾರಣಿಗಳು ಮತ್ತು ಸಂಘಟನೆಗಳೇ ಉಲ್ಲಂ ಘನೆ ಮಾಡುತ್ತಿವೆ. ಇವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಭೆ ಸಮಾರಂಭ, ಜಾತ್ರೆಗಳನ್ನು ನಿಷೇಧ ಮಾಡಿದರೂ, ಅವು ಎಂದಿನಂತೆ ನಡೆ ಯುತ್ತಿವೆ. ಕೆಲವು ಜಾತ್ರೆಗಳಲ್ಲಿ 40 ರಿಂದ 50 ಸಾವಿರ ಜನ ಸೇರುತ್ತಿದ್ದಾರೆ. ಒಂದೆಡೆ ವಾರಾಂತ್ಯ ಕಫ್ರ್ಯೂ ಜಾರಿಗೊಳಿಸಿ, ಮತ್ತೊಂದೆಡೆ ಜನದಟ್ಟಣೆ ಸೇರಲು ನೀವೇ ಅನುಕೂಲ ಮಾಡಿದರೆ, ಸೋಂಕು ಎಲ್ಲಿಂದ ತಡೆಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಕೇಂದ್ರ ಸಚಿವರೇ ಕಫ್ರ್ಯೂಗೆ ವಿರೋಧ ಮಾಡಿದ್ದಾರೆ. ಯಾರದೋ ಒತ್ತಡಕ್ಕೆ ಮಣಿದು, ನೀವು ಜನಸಾಮಾನ್ಯರ ವಿರೋಧಿ ನೀತಿಗಳನ್ನು ಅನುಸರಿಸಬೇಡಿ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. 2ನೇ ಅಲೆಯಲ್ಲಿ ಸಾಕಷ್ಟು ಸಂಕಷ್ಟಗಳು ಎದುರಾದವು. ಆದರೆ 3ನೇ ಅಲೆ ವೇಳೆಗೆ ಜನರಿಗೆ ದೊಡ್ಡ ಪ್ರಮಾಣದಲ್ಲಿ ಲಸಿಕೆ ದೊರೆತಿದೆ. ಅದರಿಂದ ಈ ಬಾರಿ 2ನೇ ಅಲೆಯ ಸಂಕಷ್ಟದ ಸನ್ನಿವೇಶ ಎದುರಾಗಿಲ್ಲ ಎಂಬುದನ್ನು ತಿಳಿಸಿದ್ದಾರೆ.

Translate »