ಬಿಜೆಪಿ ಸದಾ ಶೋಷಿತ ವರ್ಗ ವಿರೋಧಿ ಬರೀ ಮಾತಿನಲ್ಲಿ ಮಾತ್ರ ದಲಿತರ ಪರ ಎನ್ನುತ್ತಿದೆ: ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಸರ್ಕಾರ ಬರಿದಾಗಿದೆ
ಮೈಸೂರು

ಬಿಜೆಪಿ ಸದಾ ಶೋಷಿತ ವರ್ಗ ವಿರೋಧಿ ಬರೀ ಮಾತಿನಲ್ಲಿ ಮಾತ್ರ ದಲಿತರ ಪರ ಎನ್ನುತ್ತಿದೆ: ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಸರ್ಕಾರ ಬರಿದಾಗಿದೆ

December 12, 2021

ನಾನು ಸಿಎಂ ಆಗಿದ್ದಾಗ ವರ್ಷಕ್ಕೆ ೩ ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೆ. ಬಿಜೆಪಿ ಸರ್ಕಾರ ಇದುವರೆಗೂ ಒಂದೇ ಒಂದು ಮನೆಯನ್ನೂ ಕಟ್ಟಿಸಿಕೊಟ್ಟಿಲ್ಲ. ನಾನು ೩ ವರ್ಷದಲ್ಲಿ ೧೫ ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೆ. ಕಾಂಗ್ರೆಸ್ ಮಾತ್ರ ಬಡವರ ಪರ. ನಾನು ೭ ಕೆಜಿ ಅಕ್ಕಿ ಕೊಡುತ್ತಿದ್ದೆ. ಅದಕ್ಕಾಗಿ ನಾನು ನನ್ನಪ್ಪನ ಮನೆಯ ದುಡ್ಡು ಖರ್ಚು ಮಾಡಲಿಲ್ಲ. ಜನರು ತೆರಿಗೆ ರೂಪದಲ್ಲಿ ನೀಡಿದ ದುಡ್ಡನ್ನೇ ಜನರ ಒಳಿತಿಗಾಗಿ ಖರ್ಚು ಮಾಡಿದ್ದೆ. ಕೆರೆಯ ನೀರು ಕೆರೆಗೆ ಚೆಲ್ಲುವಂತೆ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ಶೂ ಭಾಗ್ಯ ಸೇರಿದಂತೆ ಹಲವು ಕಾರ್ಯಕ್ರಮ ಜಾರಿಗೊಳಿಸಿದೆ. ಆದರೆ ಅದೆಲ್ಲವನ್ನೂ ಬಿಜೆಪಿ ಸರ್ಕಾರ ಮುಂದುವರೆಸದೆ ಬಡವರ ಬಗ್ಗೆ ತನಗಿರುವ ತಾತ್ಸಾರ ಮನೋಭಾವವನ್ನು ತೋರ್ಪಡಿಸಿದೆ ಎಂದು ಕಿಡಿಕಾರಿದರು.

ಜೆಡಿಎಸ್ ೩-೪ ಜಿಲ್ಲೆಗೆ ಮಾತ್ರ ಸೀಮಿತ
ಜೆಡಿಎಸ್ ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಆದರೂ ೨೦೨೩ ರಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಅಂತಾರೆ. ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ ೫೯ ಸೀಟು ಗೆದ್ದಿತ್ತು. ನನ್ನನ್ನು ಪಕ್ಷದಿಂದ ಹೊರಹಾಕಿದ ಮೇಲೆ ಅವರ ಸೀಟುಗಳ ನಿರಂತರವಾಗಿ ಕೆಳಗಿಳಿತಾ ಇದೆ. ಇವರು ಅಧಿಕಾರಕ್ಕೆ ಬರ್ತಾರ? ಎಂದು ಪ್ರಶ್ನಿಸಿದ ಅವರು, ಜೆಡಿಎಸ್‌ಗೆ ಯಾವುದೇ ಸಿದ್ಧಾಂತವಿಲ್ಲ. ಯಾರ ಜೊತೆಯಾದರೂ ಮೈತ್ರಿ, ಒಳ ಒಪ್ಪಂದ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.

ಅರ್ಧಂಬರ್ಧ ಓದಿದವರದ್ದೇ ಸಮಸ್ಯೆ ಸಿದ್ಧರಾಮಯ್ಯ ಭಾಷಣದ ವೇಳೆ ಅಂಬೇಡ್ಕರ್ ಬಗ್ಗೆ ಮಾಹಿತಿಯೊಂದನ್ನು ನೀಡಲು ಕಾರ್ಯಕರ್ತನೊಬ್ಬ ಪ್ರಯತ್ನಿಸಿದ. ಇದಕ್ಕೆ ಅಸಮಾದಾನಗೊಂಡ ಸಿದ್ದರಾಮಯ್ಯ `ಹೇಯ್ ಸುಮ್ನೆ ಕೂತ್ಕಳಯ್ಯ. ಏನ್ ಬೆಳಿಗ್ಗೆನೆ ಕುಡಿದಿದ್ಯಾ, ಅಂಬೇಡ್ಕರ್ ಬಗ್ಗೆ ತಿಳಿದುಕೊಂಡಿದ್ಯಾ? ಬುಕ್ ಓದಿದ್ಯಾ? ಸಂವಿಧಾನದ ಬಗ್ಗೆ ತಿಳ್ಕೋ. ಓದಲು ಬರದಿದ್ದವರು ಬೇರೆಯವರಿಂದ ಸಂವಿಧಾನದ ಬಗ್ಗೆ ತಿಳಿದುಕೊಳ್ಳಲಿ. ಓದಲು ಬರುವವರು ಸಂವಿಧಾನದ ಬಗ್ಗೆ ಚಿಕ್ಕ ಚಿಕ್ಕ ಪುಸ್ತಕಗಳಿವೆ. ಅದನ್ನು ಖರೀದಿಸಿ ಓದಿಕೊಳ್ಳಿ ಎಂದು ಸಲಹೆ ನೀಡಿದರು.

ಮೈಸೂರು, ಡಿ.೧೧(ಎಂಟಿವೈ)- ಶೋಷಿತ ವರ್ಗದ ವಿರೋಧಿಯಾದ ಬಿಜೆಪಿ ಬಾಯಿ ಮಾತಿನಲ್ಲಿ ಮಾತ್ರ ದಲಿತರ ಪರ ಎಂದು ಹೇಳಿಕೊಳ್ಳುತ್ತಿದ್ದು, ಭೂತದ ಬಾಯಲ್ಲಿ ಉಪದೇಶ ಕೇಳಿದಂತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ನಡೆದ ಕಾಂಗ್ರೆಸ್ ಸದಸ್ಯತ್ವ ನೋಂದಣ ಅಭಿಯಾನದಲ್ಲಿ ಮಾತನಾಡಿದ ಅವರು, ಒಂದು ದಿನವಾದರೂ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಾಯಕರು ಅಸ್ಪೃಶ್ಯತೆ ವಿರುದ್ಧ ಮಾತನಾಡಿಲ್ಲ. ಆದರೆ ಸುಳ್ಳು ಭರವಸೆ ನೀಡುವ ಮೂಲಕ ಶೋಷಿತ ಸಮುದಾಯದ ಬೆಂಬಲ ಪಡೆಯಲು ಹವಣ ಸುತ್ತಿದ್ದಾರೆ ಎಂದರು.
ಮೀಸಲಾತಿ ಸೌಲಭ್ಯ ಜಾರಿಗೊಳಿಸಿದ್ದೇ ಕಾಂಗ್ರೆಸ್: ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಮೀಸ ಲಾತಿ ಸೌಲಭ್ಯ ನೀಡಿದ್ದರಿಂದ ಇಂದು ಶೋಷಿತ ಸಮುದಾಯದವರು ವಿವಿಧ ಕ್ಷೇತ್ರ ಪ್ರತಿನಿಧಿಸಲು ಸಾಧ್ಯವಾಗಿದೆ. ಈ ಹಿಂದೆ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಮಾತ್ರ ಮೀಸಲಾತಿ ವ್ಯವಸ್ಥೆಯಿತ್ತು. ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇರಲಿಲ್ಲ. ಅದನ್ನು ಗಮನಿಸಿದ ಕಾಂಗ್ರೆಸ್, ಅಧ್ಯಕ್ಷ ಸ್ಥಾನದಲ್ಲೂ ಶೋಷಿತ ಸಮು ದಾಯದವರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ನಿರ್ಧರಿಸಿತ್ತು. ಮಾಜಿ ಪ್ರದಾನಿ ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ ೭೩ ಮತ್ತು ೭೪ನೇ ತಿದ್ದುಪಡಿ ತಂದು ಅಧ್ಯಕ್ಷ ಸ್ಥಾನಕ್ಕೂ ಮೀಸಲಾತಿ ಸೌಲಭ್ಯ ಕಲ್ಪಿಸಿದರು. ಆದರೆ ಈ ಮೀಸಲಾತಿ ಸೌಲಭ್ಯವೇ ಅಸಂವಿಧಾನಿಕ ಎಂದು ಮೀಸಲಾತಿ ರದ್ದು ಮಾಡು ವಂತೆ ಬಿಜೆಪಿ ಕಾನೂನು ಹೋರಾಟ ಮಾಡಿತ್ತು ಎಂದು ಹೇಳಿದರು.

ಆರ್‌ಎಸ್‌ಎಸ್ ವಿರೋಧಿ: ನಾನು ಯಾವಾ ಗಲೂ ಆರ್‌ಎಸ್‌ಎಸ್ ವಿರೋಧಿ. ಆರ್‌ಎಸ್‌ಎಸ್ ನವರು ಜಾತಿವಾದಿಗಳು. ಅವರು ಧರ್ಮದ ಆಧಾರ ಮೇಲೆ ರಾಜಕಾರಣ ಮಾಡುತ್ತಾರೆ. ಹಿಂದುತ್ವದ ಪ್ರತಿಪಾದನೆಯೊಂದಿಗೆ ಆರ್‌ಎಸ್‌ಎಸ್ ಎಂದಾದರೂ ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದೆಯೇ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಧರ್ಮ ನಿರಪೇಕ್ಷಿತ ವಾದ ನಂಬಿಕೆ ಹೊಂದಿದೆ. ಭಾರತೀಯ ಕಾಂಗ್ರೆಸ್ ಪಕ್ಷ ಜಾತ್ಯತೀತದ ನಂಬಿಕೆಯಿಟ್ಟುಕೊAಡಿದೆ ಎಂದು ಅವರು ಹೇಳಿದರು.
ಅಂಬೇಡ್ಕರ್ ಯಾಕೆ ಬೌದ್ಧ ಧರ್ಮ ಸ್ವೀಕರಿಸಿದರು: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೊನೆಯಲ್ಲಿ ಹಿಂದು ಧರ್ಮದಲ್ಲಿ ಉಳಿದಿದ್ರಾ? ಅಸ್ಪೃಶ್ಯತೆ ಸೇರಿದಂತೆ ಹಿಂದೂ ಧರ್ಮದಲ್ಲಿದ್ದ ನ್ಯೂನತೆಯನ್ನು ಸರಿಪಡಿಸಲು ನಾನು ಬಹಳ ಪ್ರಯತ್ನ ಪಟ್ಟೆ. ಆದರೂ ಅದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಹುಟ್ಟುವಾಗ ಹಿಂದು ಧರ್ಮದಲ್ಲಿ ಹುಟ್ಟಿದ್ದೇನೆ. ಸಾಯುವಾಗ ಹಿಂದು ಧರ್ಮದಲ್ಲಿ ಇರಲಾರೆ ಎಂದು ಬೌದ್ಧ ಧರ್ಮಕ್ಕೆ ಹೋದರು. ಅವರು ಸಂವಿಧಾನ ಬರೆದುಕೊಡದಿದ್ದರೆ ಇಂದು ಶೋಷಿತರ ಸ್ಥಿತಿಗತಿ ಇನ್ನಷ್ಟು ದುಸ್ಥಿತಿಗೆ ದೂಡಲ್ಪಡುತ್ತಿತ್ತು. ಅವಕಾಶದಿಂದ ವಂಚಿತರಾಗಿರು ವವರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸಿದರು. ಕೇವಲ ಪರಿಶಿಷ್ಟ ಜಾತಿ, ಪಂಗಡಕ್ಕೆ ಮಾತ್ರ ಸೀಮಿತ ವಲ್ಲ. ಅದಕ್ಕಾಗಿ ಅವರನ್ನು ಮಹಾನಾಯಕ ಎನ್ನುತ್ತಾರೆ ಎಂದು ತಿಳಿಸಿದರು.

Translate »