ಎಲ್ಲರಿಗೂ ಪ್ರಿಯವಾಗುತ್ತಿವೆ ಫ್ರೀಲ್ಯಾನ್ಸಿ ಕಥೆಗಳು…!
ಮೈಸೂರು

ಎಲ್ಲರಿಗೂ ಪ್ರಿಯವಾಗುತ್ತಿವೆ ಫ್ರೀಲ್ಯಾನ್ಸಿ ಕಥೆಗಳು…!

August 10, 2020

ಮೈಸೂರು, ಆ.9(ಎಂಕೆ)- ಎಲ್ಲರಿಗೂ ಪ್ರಿಯ ವಾಗುತ್ತಿವೆ ಫ್ರೀಲ್ಯಾನ್ಸಿ ಕಥೆಗಳು…! ಇಲ್ಲಿ ಕಥೆಗಳನ್ನು ಓದುವಂತಿಲ್ಲ, ಆಲಿಸುವುದು, ಅರಿತುಕೊಳ್ಳುವುದು.

ಕೊರೊನಾ ಭಯದಲ್ಲಿರುವ ಮನಸ್ಸುಗಳಿಗೆ ಆನ್‍ಲೈನ್ (ಯೂಟ್ಯೂಬ್) ಮೂಲಕ ಕಥೆ ಹೇಳಿ, ಮುದ ನೀಡುವ ವಿಶಿಷ್ಟ ಪ್ರಯತ್ನವನ್ನು ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ನಿರಂಜನ ವಾನಳ್ಳಿ ಹಮ್ಮಿಕೊಂಡಿದ್ದಾರೆ.

ಇವತ್ತಿನ ಸುದ್ದಿ ನಾಳೆ ಹಳೆಯದಾಗಬಹುದು. ಆದರೆ ನುಡಿಚಿತ್ರ ಲೇಖನ ಯಾವ ಕಾಲಘಟ್ಟದಲ್ಲೂ ಓದಿಸಿ ಕೊಳ್ಳುವ ಆಸಕ್ತಿದಾಯಕ ವಿಚಾರಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿರುತ್ತದೆ. ಇಂಥ ನುಡಿಚಿತ್ರ ಲೇಖನ ಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಿರಂಜನ ವಾನಳ್ಳಿ, ತಾವು ಬರೆದ ನುಡಿಚಿತ್ರಗಳಿಗೆ ಡಿಜಿಟಲ್ ವೇದಿಕೆಯಲ್ಲಿ ಕಥೆ ಹೇಳುವ ರೂಪ ಕೊಟ್ಟಿದ್ದಾರೆ.

30 ವರ್ಷಗಳ ಹಿಂದೆ ಬರೆದ ಲೇಖನಗಳನ್ನು ಇಂದಿನ ತಲೆಮಾರಿಗೆ ಪರಿಚಯಿಸುವ, ಆಸಕ್ತಿ ಮತ್ತು ಪ್ರೋತ್ಸಾಹ ದಾಯಕವಾದ, ಸಮಾಜಕ್ಕೆ ಮಾದರಿಯಾಗುವ ಲೇಖನ ಗಳನ್ನು `ಸೆಂಟರ್ ಫಾರ್ ಕಲ್ಚರಲ್ ಕಮ್ಯೂನಿಕೇಷನ್ ಆ್ಯಂಡ್ ಕ್ರಿಯೇಟಿವಿಟಿ’ ಚಾನಲ್ ಮೂಲಕ ಇಂದಿನ ತಲೆಮಾರಿಗೆ ಪರಿಚಯಿಸುವ ಸರಣಿ ಇದಾಗಿದೆ.

ಹವ್ಯಾಸಿ ಬರಹಗಾರರಾಗಿ 700ಕ್ಕೂ ಹೆಚ್ಚು ನುಡಿಚಿತ್ರ ಲೇಖನಗಳನ್ನು ಬರೆದಿರುವ ಪ್ರೊ.ನಿರಂಜನ ವಾನಳ್ಳಿ, ‘ಎಂಕನ ಮಕ್ಕಳು ಶಾಲೆ ಸೇರಿದ್ದು’, ‘ಎಂಕನ ಮಕ್ಕಳು ಶಾಲೆ ಬಿಟ್ಟಿದ್ದು’, ‘ಪ್ರಥಮ ಚುಂಬನಂ’, ‘ಬಂದೆಯಾ ಭಗವಂತ?’, ‘ಮಾಜಿ ಕಳ್ಳನ ಮಜಾ ಜೀವನ’, ‘ಅಭೇದ್ಯ ಕಾಡಿನೊಳಗೆ ಅನಾಮಿಕ ಜಲಪಾತ’, ‘ಕಾಡೊಳಗೆ ಕಳೆದಾಗ’, ‘ಕುದುರ್ಗೋಡು ವೃತ್ತಾಂತ’, ‘ಕುಂದಾಪುರದ ಕಾಗದ’, ‘ನಮ್ಮಗೊಳಗೊಬ್ಬ ನಿಜ ಹರ್ಷ’, ‘ಅತಿ ವಿಶಿಷ್ಟ ಗೋಖಲೆ ಅಜ್ಜ’, ‘ಗಂಗಾ ಕೈ ಸುಟ್ಟುಕೊಂಡಾಗ’, ‘ಹಕ್ಕಿ-ಪಕ್ಷಿಗಳ ಆಸ್ಪತ್ರೆ’, ‘ಐಗಳ ಕುರುವೆ’, ‘ಒಂದು ಸ್ಮೈಲಿನ ಕ್ರಾಂತಿ’ ಹೆಸರಿನ 15 ಸರಣಿ ಕಥೆ ಹೇಳಿದ್ದಾರೆ.

ಲಾಕ್‍ಡೌನ್ ಆರಂಭವಾದಾಗ ವಾರಕ್ಕೊಮ್ಮೆ ಒಂದೊಂದು ಕಥೆ ಹೇಳುತ್ತಿದ್ದೆ. ಫ್ರೀಲ್ಯಾನ್ಸಿಯ ಕಥಾ ಸರಣಿ ದೇಶ-ವಿದೇಶದಲ್ಲಿನ ಕನ್ನಡಿಗರ ಮೆಚ್ಚುಗೆಗೂ ಪಾತ್ರ ವಾಗಿದೆ. ಇಲ್ಲಿಯವರೆಗೆ 15ನೇ ಸರಣಿ ಮುಗಿದಿದ್ದು, ನಿರಂ ತರವಾಗಿ ಸಾಗಲಿದೆ. ಫ್ರೀಲ್ಯಾನ್ಸಿಯ ಕಥೆ ಸರಣಿ ಯಶಸ್ಸಿನ ಹಿಂದೆ ಶಿಷ್ಯ, ಇವೆಂಟೋದ ಶ್ರೀವತ್ಸ ಮತ್ತು ಮಗಳು ಸಿರಿ ಇದ್ದಾರೆ. ವಿಡಿಯೋ ಚಿತ್ರೀಕರಿಸಿ ಎಡಿಟ್ ಮಾಡಿ ಅಪೆÇ್ಲೀಡ್ ಮಾಡಲು ಇವರು ಸಹಾಯ ಮಾಡುತ್ತಿದ್ದಾರೆ ಎಂದು ಪೆÇ್ರ.ನಿರಂಜನ ವಾನಳ್ಳಿ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »