ಮೈಸೂರಲ್ಲಿ ಗಾನಸಿರಿ-ವೇದಾಂತ ಲಹರಿ ಭಾಗ-7 ಇಂದಿನಿಂದ ‘ಮಧ್ವ-ಪುರಂದರ ನಮನ’
ಮೈಸೂರು

ಮೈಸೂರಲ್ಲಿ ಗಾನಸಿರಿ-ವೇದಾಂತ ಲಹರಿ ಭಾಗ-7 ಇಂದಿನಿಂದ ‘ಮಧ್ವ-ಪುರಂದರ ನಮನ’

February 15, 2021

ಮೈಸೂರು, ಫೆ.14-ಅಗ್ರಹಾರದ ಸಮೀಪ ಇರುವ ಶ್ರೀಮದ್ ಉತ್ತರಾದಿ ಮಠದ ಸಭಾಂಗಣದಲ್ಲಿ ಫೆ.15ರಿಂದ 21ರವರೆಗೆ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿಯು ಉತ್ತರಾದಿ ಮಠದ ಸಹಯೋಗದೊಂದಿಗೆ ‘ಮಧ್ವ ಪುರಂದರ ನಮನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ವಿಮರ್ಶೆ, ಗಾಯನ, ಪ್ರವಚನ, ಸಂವಾದ ಹಾಗೂ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ.

ಫೆ.15ರಂದು ಸಂಜೆ 5ಕ್ಕೆ ಶ್ರೀಮದ್ ಉತ್ತರಾದಿ ಮಠದ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಪಂಡಿತ್ ವಿದ್ಯಾದೀಶಾಚಾರ್ ಗುತ್ತಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿ ದ್ದಾರೆ. ಅಂದು ಸಂಜೆ 6ರಿಂದ 8.30ರವರೆಗೆ ಬೆಂಗಳೂರಿನ ಪಂಡಿತ್ ಕಲ್ಲಾಪುರ ಪವಮಾನಾ ಚಾರ್‍ರಿಂದ ವಿಶ್ಲೇಷಣೆ ಒಳಗೊಂಡಂತೆ ಬೆಂಗಳೂರಿನ ವಿಧುಷಿ ದಿವ್ಯ ಗಿರಿಧರ್ ಹಾಗೂ ಕಲ್ಬುರ್ಗಿಯ ವಿದ್ವಾನ್ ಅನಂತರಾಜ ಮಿಸ್ತ್ರಿಯವರಿಂದ ಗಾಯನವಿದೆ. ಫೆ.16ರಂದು ಸಂಜೆ 4.30ರಿಂದ 8.30ರವರೆಗೆ ಮೈಸೂರಿನ ಪಂಡಿತ್ ಬೆ.ನಾ.ವಿಜಯೇಂದ್ರಾಚಾರ್‍ರಿಂದ ವಿಶ್ಲೇಷಣೆ ಒಳಗೊಂಡಂತೆ ಮೈಸೂರಿನ ವಿದುಷಿ ಹಂಸಿಣಿ ಹಾಗೂ ಬೆಂಗಳೂರಿನ ವಿದ್ವಾನ್ ಅತೀಶ್ ನಾಯಕ್‍ರವರಿಂದ ಸಂಗೀತ ಕಾರ್ಯಕ್ರಮವಿದೆ. ಫೆ.17ರಂದು ಚೆನ್ನೈನ ಪಂಡಿತ್ ಪ್ರವೀಣಾ ಚಾರ್ಯ ಹುನುಗುಂದರಿಂದ ವಿಶ್ಲೇಷಣೆ ಒಳಗೊಂಡಂತೆ ಬೆಂಗಳೂರಿನ ವಿದುಷಿ ಮಾನಸಾ ಕುಲಕರ್ಣಿ ಹಾಗೂ ಹಾವೇರಿಯ ವಿದ್ವಾನ್ ಆನಂದ್ ಜಮಖಂಡಿಯವರಿಂದ ಗಾಯನವಿದೆ.

ಫೆ.18ರಂದು ಮೈಸೂರಿನ ಪಂಡಿತ್ ಅನಿರುದ್ಧಾಚಾರ್ಯ ಪಾಂಡುರಂಗಿಯವರಿಂದ ವಿಶ್ಲೇಷಣೆ ಒಳಗೊಂಡಂತೆ ಮೈಸೂರಿನ ವಿದುಷಿ ಸುಮನಾ ಶ್ರೀಕಾಂತ್ ಹಾಗೂ ಮೈಸೂರಿನ ವಿದುಷಿ ರಾಜೇಶ್ ಪಡಿಯಾರ್‍ರವರಿಂದ ಸಂಗೀತ ಕಛೇರಿ ಇದೆ. ಫೆ.19ರಂದು ಕೊಪ್ಪಳದ ಪಂಡಿತ್ ಪ್ರಮೋದಾಚಾರ್ಯ ಪೂಜಾರ್‍ರಿಂದ ವಿಶ್ಲೇಷಣೆ ಒಳಗೊಂಡಂತೆ ಬೆಂಗಳೂರಿನ ವಿದುಷಿ ಚಾಂದನಿ ಗರ್ತಿಕೆರೆ ಹಾಗೂ ಬೆಂಗಳೂರಿನ ವಿದ್ವಾನ್ ಅಭಿರಾಂ ಭರತವಂಶಿಯವರಿಂದ ಗಾಯನವಿದೆ. ಫೆ.20ರಂದು ಮೈಸೂರಿನ ಪಂಡಿತ್ ಬಾದನಾರಾಯಣಾಚಾರ್ಯರಿಂದ ವಿಶ್ಲೇಷಣೆ ಒಳಗೊಂಡಂತೆ ಮೈಸೂರಿನ ವಿದುಷಿ ದೀಪಿಕಾ ಪಾಂಡುರಂಗಿ, ಬೆಂಗಳೂರಿನ ವಿದ್ವಾನ್ ಮನು ವ್ಯಾಸರಾಜ್‍ರಿಂದ ಸಂಗೀತ ಕಾರ್ಯಕ್ರಮವಿದೆ. ಫೆ.21ರಂದು ಆತನೂರಿನ ಪಂಡಿತ್ ಭೀಮಸೇನಾಚಾರ್ಯರಿಂದ ವಿಶ್ಲೇಷಣೆ ಒಳಗೊಂಡಂತೆ ಮೈಸೂರಿನ ವಿದುಷಿ ಶರಧಿ ಪಾಟೀಲ್, ಮೈಸೂರಿನ ಶ್ರೀಹರ್ಷರಿಂದ ಗಾಯನವಿರುತ್ತದೆ. ಇದೆಲ್ಲ ಕಾರ್ಯಕ್ರಮಗಳು ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ಸಾರಥ್ಯದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಡಾ.ಜಿ.ರವಿ, ಕಾರ್ಯದರ್ಶಿ ಎಸ್.ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Translate »