ಗೃಹ ಬಳಕೆ ಗ್ಯಾಸ್ 50 ರೂ.,ವಾಣಿಜ್ಯ 360 ರೂ. ಹೆಚ್ಚಳ
ಮೈಸೂರು

ಗೃಹ ಬಳಕೆ ಗ್ಯಾಸ್ 50 ರೂ.,ವಾಣಿಜ್ಯ 360 ರೂ. ಹೆಚ್ಚಳ

March 2, 2023

ಮೈಸೂರು, ಮಾ.1(ಆರ್‍ಕೆ)-ಪೆಟ್ರೋಲಿಯಂ ಮತ್ತು ತೈಲ ಮಾರು ಕಟ್ಟೆ ಕಂಪನಿ (ಔಒಅ)ಗಳು ತಕ್ಷಣವೇ ಜಾರಿಗೆ ಬರುವಂತೆ ಎಲ್‍ಪಿಜಿ (ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್) ಬೆಲೆಯನ್ನು ಹೆಚ್ಚಿಸಿವೆ. 2022ರ ಜುಲೈ ತಿಂಗಳಲ್ಲಿ ಎಲ್‍ಪಿಜಿ ದರ ಏರಿಕೆಯಾಗಿತ್ತು. ಅದ ರಂತೆ 14.2 ಕೆ.ಜಿ. ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ದರ 1,057.50 ರೂ.ನಿಂದ ಈಗ 1,107.50 ರೂ.ಗಳಿಗೆ ಹಾಗೂ 19 ಕೆ.ಜಿ.ಯ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬೆಲೆ 360 ರೂ. ಏರಿಕೆಯಾಗಿದ್ದು, ಇದ ರೊಂದಿಗೆ 1810ರೂ. ಇದ್ದ ಈ ಸಿಲಿಂಡರ್ ದರ ಈಗ 2,170ರೂ.ಗೆ ಹೆಚ್ಚಳವಾಗಿದೆ.

2022ರ ಜನವರಿ 1ರಂದು ವಾಣಿಜ್ಯ ಸಿಲಿಂಡರ್ ದರವನ್ನು 25 ರೂ. ಹೆಚ್ಚಿಸ ಲಾಗಿತ್ತು. ಅದರೊಂದಿಗೆ ಈ ವರ್ಷ 2 ತಿಂಗಳೊಳಗಾಗಿ 2 ಬಾರಿ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾದಂತಾಗಿದ್ದು, ಹೋಟೆಲ್, ರೆಸಾರ್ಟ್ ಸೇರಿದಂತೆ ಆತಿಥ್ಯ ಉದ್ಯಮಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದಂತಾಗಿದೆ. ಪೆಟ್ರೋಲಿಯಂ ಉತ್ಪನ್ನ ಗಳು ದಿನೇ ದಿನೆ ಹೆಚ್ಚಾಗುತ್ತಿರುವುದ ರಿಂದ ಜನಸಾಮಾನ್ಯರು ಪರದಾಡು ವಂತಾಗಿದ್ದು, ಜನಜೀವನ ಮತ್ತಷ್ಟು ದುಸ್ತರವಾಗಿದೆ. ಈಗಾಗಲೇ ಅಗತ್ಯ ವಸ್ತು ಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡವರು, ಮಧ್ಯಮ ವರ್ಗದ ಜನರಿಗೆ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಾರತದಲ್ಲಿ ಐPಉ ಬೆಲೆಯನ್ನು ಸರ್ಕಾರಿ-ಚಾಲಿತ ತೈಲ ಕಂಪನಿಗಳು ಮಾಸಿಕ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಮತ್ತು ಬದಲಾವಣೆಗೆ ಒಳಪಟ್ಟಿರುತ್ತದೆ. 2014 ರಲ್ಲಿ 19 ಕೆಜಿ ತೂಕದ ಪ್ರತಿ ಸಿಲಿಂಡರ್‍ಗೆ 350 ರೂಪಾಯಿಗಳಷ್ಟು ಹೆಚ್ಚಿಸಿದ ನಂತರ ಇದು ಎರಡನೇ ಅತಿದೊಡ್ಡ ಒಂದೇ ಬಾರಿ ಬೆಲೆ ಏರಿಕೆಯಾಗಿದೆ. ಜೂನ್ 2022 ರಿಂದ ಮೊದಲ ಬಾರಿಗೆ ವಾಣಿಜ್ಯ ಎಲ್‍ಪಿಜಿ ಪ್ರತಿ ಸಿಲಿಂಡರ್ ಬೆಲೆ ಹೆಚ್ಚಳವಾಗುತ್ತಿದೆ.

ತೂಕದ ಆಧಾರದ ಮೇಲೆ ಪರಿಷ್ಕೃತ ಬೆಲೆಗಳು: 19-ಕೆಜಿ ವಾಣಿಜ್ಯ ಬಳಕೆ ಎಲ್‍ಪಿಜಿ ಸಿಲಿಂಡರ್ ಶೇಕಡಾ 19.8 ರಷ್ಟು ಏರಿಕೆ, 14.2-ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆ ಶೇಕಡಾ 4.7 ರಷ್ಟು ಏರಿಕೆಯಾಗಿದೆ ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸ: ಸ್ಥಳೀಯ ತೆರಿಗೆಗಳಿಂದಾಗಿ ದೇಶೀಯ ಅಡುಗೆ ಅನಿಲದ ಬೆಲೆಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬದಲಾಗುತ್ತವೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆಯನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಿಸುತ್ತಾರೆ. ಪ್ರತಿ ಕುಟುಂಬವು ಒಂದು ವರ್ಷದಲ್ಲಿ ಸಬ್ಸಿಡಿ ದರದಲ್ಲಿ ತಲಾ 14.2 ಕೆಜಿಯ 12 ಸಿಲಿಂಡರ್‍ಗಳಿಗೆ ಅರ್ಹವಾಗಿರುತ್ತಾರೆ.ಅದರಾಚೆಗೆ ಗ್ರಾಹಕರು ಎಲ್‍ಪಿಜಿ ಸಿಲಿಂಡರ್‍ಗಳ ಯಾವುದೇ ಹೆಚ್ಚುವರಿ ಖರೀದಿಗಳನ್ನು ಮಾರುಕಟ್ಟೆ ಬೆಲೆಗೆ ಖರೀದಿಸಬೇಕಾಗುತ್ತದೆ. ಪಹಲ್ (ಎಲ್‍ಪಿಜಿ ನೇರ ಲಾಭ ವರ್ಗಾವಣೆ) ಯೋಜನೆಯಡಿ, ಗ್ರಾಹಕರು ಸಬ್ಸಿಡಿ ದರದಲ್ಲಿ ಎಲ್‍ಪಿಜಿ ಸಿಲಿಂಡರ್‍ಗಳನ್ನು ಪಡೆಯುತ್ತಾರೆ. ಸಬ್ಸಿಡಿಯು ವಿದೇಶಿ ವಿನಿಮಯ ದರಗಳು, ಕಚ್ಚಾ ತೈಲ ಬೆಲೆಗಳಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.

Translate »