ಮೈಸೂರು ಮೃಗಾಲಯದಲ್ಲಿ ಜಿರಾಫೆ ಮರಿ ಜನನ
ಮೈಸೂರು

ಮೈಸೂರು ಮೃಗಾಲಯದಲ್ಲಿ ಜಿರಾಫೆ ಮರಿ ಜನನ

June 5, 2020

ಮೈಸೂರು, ಜೂ.4(ಎಂಟಿವೈ)- ಲಾಕ್ ಡೌನ್‍ನಿಂದಾಗಿ ಕಳೆದ ಎರಡೂವರೆ ತಿಂಗಳಿಂದ ಬಂದ್ ಆಗಿದ್ದ ಮೈಸೂರು ಮೃಗಾಲಯದಲ್ಲಿ ಈಗ ಸಂಭ್ರಮದ ವಾತಾವರಣ ಮನೆ ಮಾಡಿದೆ. ಜಿರಾಫೆಯೊಂದು ಗಂಡು ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿ ಆರೋಗ್ಯವಾಗಿವೆ. ಮರಿ ಅದಾಗಲೇ ಲವಲವಿಕೆಯಿಂದ ಓಡಾಡುತ್ತಿದೆ.

5 ತಿಂಗಳ ಹಿಂದಷ್ಟೇ ಖುಷಿ-ಭರತ್ ಜೋಡಿಗೆ ಗಂಡು ಮರಿ ಜನಿಸಿತ್ತು. ಇದೀಗ (ಎರಡು ದಿನಗಳ ಹಿಂದೆ) ಮೇರಿ-ಭರತ್ ಜೋಡಿಗೆ ಗಂಡು ಮರಿ ಜನಿ ಸಿದ್ದು, ಒಂದು ವಾರ ನಿಗಾದಲ್ಲಿಡ ಲಾಗಿದೆ. ಮರಿ ಆರೋಗ್ಯದಿಂದ ಕೂಡಿದೆ. ಆವರಣದಲ್ಲಿ ಲವಲವಿಕೆಯಿಂದ ಓಡಾ ಡುತ್ತಾ, ತಾಯಿಯೊಂದಿಗೆ ಆಟವಾಡುತ್ತ ಗಮನ ಸೆಳೆಯುತ್ತಿದೆ.

ಜಿರಾಫೆ ಸಂಖ್ಯೆ 8: ಇದರೊಂದಿಗೆ ಮೈಸೂರು ಮೃಗಾಲಯದಲ್ಲಿನ ಜಿರಾಫೆ ಗಳ ಸಂಖ್ಯೆ 8ಕ್ಕೇರಿದೆ. ಸದ್ಯ 4 ಗಂಡು, 4 ಹೆಣ್ಣು ಜಿರಾಫೆಗಳಿವೆ. ಅದರಲ್ಲಿ 2 ಮರಿಗಳಿದ್ದು, ಲಾಕ್‍ಡೌನ್ ನಂತರ ಪ್ರವಾಸಿ ಗರನ್ನು ಆಕರ್ಷಿಸಲಿವೆ.

ಜಿರಾಫೆ ಸಂತತಿ ಅಭಿವೃದ್ಧಿಯಲ್ಲಿ ಮೈಸೂರು ಮೃಗಾಲಯ ಗಮನಾರ್ಹ ಸಾಧನೆ ಮಾಡಿದ್ದು, ಒಡಿಸಾ ರಾಜ್ಯಕ್ಕೆ ಮತ್ತು ಬನ್ನೇರುಘಟ್ಟ ವನ್ಯಧಾಮ ಸೇರಿದಂತೆ ವಿವಿಧ ಮೃಗಾಲಯಗಳಿಗೆ ಪ್ರಾಣಿ ವಿನಿ ಮಯ ಯೋಜನೆಯಡಿ ಜಿರಾಫೆಗಳನ್ನು ನೀಡಿದ ಹೆಗ್ಗಳಿಗೆ ಪಾತ್ರವಾಗಿದೆ.

Translate »