ಜೆಎಸ್‍ಎಸ್ ಕಾಲೇಜಿಗೆ ಕ್ಯೂಎಸ್‍ಐ-ಗೇಜ್‍ನಿಂದ ಸುವರ್ಣ ಶ್ರೇಣಿ ಚಿನ್ನದ ಸ್ಥಾನ
ಮೈಸೂರು

ಜೆಎಸ್‍ಎಸ್ ಕಾಲೇಜಿಗೆ ಕ್ಯೂಎಸ್‍ಐ-ಗೇಜ್‍ನಿಂದ ಸುವರ್ಣ ಶ್ರೇಣಿ ಚಿನ್ನದ ಸ್ಥಾನ

August 5, 2020

ಮೈಸೂರು, ಆ. 4- ಮೈಸೂರಿನ ಊಟಿ ರಸ್ತೆಯಲ್ಲಿ ರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿಗೆ ಕ್ಯೂಎಸ್‍ಐ-ಗೇಜ್ ಸಂಸ್ಥೆಯು ಸುವರ್ಣ ಶ್ರೇಣಿಯ ಸ್ಥಾನಮಾನವನ್ನು ನೀಡಿದೆ.

1964ರಲ್ಲಿ ಸ್ಥಾಪನೆಗೊಂಡಿರುವ ಈ ಕಾಲೇಜು ಈಗ 50 ವರ್ಷಗಳನ್ನು ಪೂರೈಸಿದ್ದು, ಸುವರ್ಣ ಮಹೋತ್ಸವವನ್ನು ಆಚ ರಿಸಿದೆ. ಕಾಲೇಜು ನ್ಯಾಕ್ ‘ಎ’ ದರ್ಜೆ ಮಾನ್ಯತೆ, ಸ್ವಾಯತ್ತ ಸ್ಥಾನ ಮತ್ತು ಅಂತಸ್ಸಮರ್ಥ ಉತ್ಕøಷ್ಟತಾ ಕಾಲೇಜು -ಈ ಮೂರು ಸ್ಥಾನಮಾನಗಳನ್ನು ಪಡೆದಿದೆ. ಯುಜಿಸಿಯಿಂದ ಕೌಶಲ್ ಕೇಂದ್ರ, ಕರ್ನಾಟಕ ಸರ್ಕಾರದಿಂದ ಬೈಸೆಪ್ ಮತ್ತು ಕೌಶಲ್ಯ ಕರ್ನಾಟಕ ಸ್ಕೀಂನ ಅಡಿಯಲ್ಲಿ ಕೌಶಲ್ಯ ತರಬೇತಿ ಕೇಂದ್ರವನ್ನು ಈ ಕಾಲೇಜು ಹೊಂದಿದೆ. ಯುಜಿಸಿಯು ದೀನ್ ದಯಾಳ್ ಉಪಾ ಧ್ಯಾಯ ಕೌಶಲ್ ಕೇಂದ್ರವನ್ನು ಮಂಜೂರು ಮಾಡಿದ್ದು, ಅದರಡಿಯಲ್ಲಿ ಅನಿಮೇಷನ್ ವಿಷಯದಲ್ಲಿ ಅಡ್ವಾನ್ಸ್‍ಡ್ ಡಿಪ್ಲೊಮಾ, ಸಾಫ್ಟ್‍ವೇರ್ ಡೆವೆಲಪ್‍ಮೆಂಟ್ ಹಾಗೂ ಫುಡ್ ಪ್ರೋಸೆಸಿಂಗ್ ಮತ್ತು ಇಂಜಿನಿಯರಿಂಗ್ ವಿಷಯ ದಲ್ಲಿ ಸ್ನಾತÀಕ ಬಿ.ವೋಕ್ ಹಾಗೂ ಸ್ನಾತಕೋತ್ತರ ಎಂ.ವೋಕ್ ಕೋರ್ಸುಗಳನ್ನು ನಡೆಸಲಾಗುತ್ತಿದೆ.

ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಉನ್ನತ್ ಭಾರತ್ ಅಭಿಯಾನ ಕಾರ್ಯ ಕ್ರಮವನ್ನು ನಡೆಸಲು ಕಾಲೇಜನ್ನು ಆಯ್ಕೆ ಮಾಡಿದೆ. ಈ ಕಾಲೇಜಿಗೆ ಪ್ರಸ್ತುತ ಕ್ಯೂಎಸ್‍ಐ-ಗೇಜ್ ಸಂಸ್ಥೆಯ ಸುವರ್ಣ ಶ್ರೇಣಿ ಸ್ಥಾನ ದೊರೆತಿದೆ. ಇಂದು ಈ ಕಾಲೇಜಿನಲ್ಲಿ 70 ಕೋರ್ಸ್‍ಗಳು ನಡೆಯುತ್ತಿವೆ. ಅದರಲ್ಲಿ 26 ಸ್ನಾತಕ, 14 ಸ್ನಾತಕೋತ್ತರ, 9 ಪಿಎಚ್.ಡಿ. ಮತ್ತು 21 ಕೌಶಲ್ಯಾಧಾರಿತ ಕೋರ್ಸುಗಳಿವೆ. ಉನ್ನತ ಅಧ್ಯಯನ ಮತ್ತು ಬೋಧನಾ ನುಭವವಿರುವ 195 ಮಂದಿ ನುರಿತ ಬೋಧಕರು ಹಾಗೂ 68 ಮಂದಿ ಬೋಧಕೇತರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ 3400 ಮಂದಿ ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ. ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ಪ್ರಾಂಶುಪಾಲರಾದ ಪ್ರೊ. ಹೆಚ್.ಸಿ.ಹೊನ್ನಪ್ಪ ಕಾಲೇಜಿನ ಈ ಸಾಧನೆಗೆ ಕಾರಣಕರ್ತ ರಾದ ಶ್ರೀಗಳ ಮಾರ್ಗದರ್ಶನವನ್ನು ಸ್ಮರಿಸಿ, ಜೆಎಸ್‍ಎಸ್ ಮಹಾವಿದ್ಯಾಪೀಠದ ಸಹಕಾರ, ಅಧ್ಯಾಪಕ ಮತ್ತು ಅಧ್ಯಾ ಪಕೇತರ ವರ್ಗದ ನಿಸ್ಪøಹ ಸೇವೆ ಹಾಗೂ ಕಾಲೇಜಿನ ಪ್ರಗತಿಗೆ ಸಹಕರಿಸುತ್ತಿರುವ ಎಲ್ಲರಿಗೂ ವಂದನೆ ತಿಳಿಸಿದ್ದಾರೆ.