ಶಾಲೆ ಪುನರಾರಂಭಕ್ಕೆ ಸರ್ಕಾರದ ನಿರ್ದೇಶನದ ನಿರೀಕ್ಷೆ: ಡಿಡಿಪಿಐ
ಮೈಸೂರು

ಶಾಲೆ ಪುನರಾರಂಭಕ್ಕೆ ಸರ್ಕಾರದ ನಿರ್ದೇಶನದ ನಿರೀಕ್ಷೆ: ಡಿಡಿಪಿಐ

May 28, 2020

ಮೈಸೂರು, ಮೇ 27(ಆರ್‍ಕೆಬಿ)- ಶಾಲೆಗಳ ಪುನರಾರಂಭಕ್ಕೆ ಸರ್ಕಾರದ ಆದೇಶ ಕ್ಕಾಗಿ ಕಾಯುತ್ತಿದ್ದೇವೆ, ಯಾವುದೇ ನಿರ್ದೇಶನ ಬಂದಿಲ್ಲ ಎಂದು ಸಾರ್ವ ಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಂಡುರಂಗ ತಿಳಿಸಿದರು.

ಕೊಠಡಿಗಳನ್ನು ಸ್ವಚ್ಛಗೊಳಿಸುವುದು ಸೇರಿ ದಂತೆ ಶಾಲೆ ಪುನರಾರಂಭಕ್ಕೆ ಸಕಲ ಸಿದ್ಧತೆ ಮಾಡಿ ಕೊಳ್ಳುತ್ತಿದ್ದೇವೆ. ಮಕ್ಕಳಿಗೆ ಪಾಳಿ ಆಧಾರದಲ್ಲಿ ತರಗತಿ ನಡೆಸುವುದೇ ಅಥವಾ ಮಾಮೂಲಿಯಂತೆ ನಡೆಸುವುದೇ ಎಂಬ ಬಗ್ಗೆ ಸರ್ಕಾರ ಇನ್ನೂ ತೀರ್ಮಾನಿಸಿಲ್ಲ. ಎಲ್ಲ ವರದಿ ಬಂದ ಬಳಿಕವಷ್ಟೇ ಸರ್ಕಾರ ಯಾವ ನಿರ್ದೇಶನ ನೀಡುತ್ತದೆಯೋ ಅದರಂತೆ ನಡೆಯುತ್ತೇವೆ. ಈಗೇನಿದ್ದರೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವತ್ತ ಗಮನ ಹರಿಸಿದ್ದೇವೆ ಎಂದರು.

ಆನ್‍ಲೈನ್ ತರಗತಿ ನಡೆಸುವ ಕುರಿತ ಸ್ಪಷ್ಟತೆ ಇನ್ನೂ ಸರ್ಕಾರದಿಂದ ನಮಗೆ ಸಿಕ್ಕಿಲ್ಲ. ಸರ್ಕಾರ ಮಾಡಿರುವ ಸಮಿತಿಯ ಶಿಫಾರಸು ಮೇಲೆ ನಿಂತಿದೆ ಎಂದರು.

ಸಿಇಟಿಗೆ ಆನ್‍ಲೈನ್ ತರಗತಿ: ಜುಲೈ 30 ಮತ್ತು 31ರಂದು ಸಿಇಟಿ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳಿಗೆ ಪುನರ್ ಮನನಕ್ಕಾಗಿ ಆನ್‍ಲೈನ್ ತರಗತಿ ಮಾಡ ಲಾಗುತ್ತಿದೆ. ಪಿಯು ತರಗತಿಗಳ ಆರಂಭ ಕುರಿತು ನಮಗೆ ಮಾಹಿತಿ ಸಿಕ್ಕಿಲ್ಲ ಎಂದು ಪಿಯು ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಗೀತಾ ಅವರು ತಿಳಿಸಿದರು.

Translate »