ಅಧಿಕಾರಿಗಳೊಂದಿಗೆ ಮನೆ ಬಾಗಿಲಿಗೆ ಬಂದ ಜಿಟಿಡಿ ಮನವಿಗೆ ನಿವಾಸಿಗಳ ಭಾರೀ ಸ್ಪಂದನೆ: ಹಲವರಿಂದ ಸ್ವಯಂ ತೆರಿಗೆ ಪಾವತಿ
ಮೈಸೂರು

ಅಧಿಕಾರಿಗಳೊಂದಿಗೆ ಮನೆ ಬಾಗಿಲಿಗೆ ಬಂದ ಜಿಟಿಡಿ ಮನವಿಗೆ ನಿವಾಸಿಗಳ ಭಾರೀ ಸ್ಪಂದನೆ: ಹಲವರಿಂದ ಸ್ವಯಂ ತೆರಿಗೆ ಪಾವತಿ

October 4, 2020

ಮೈಸೂರು, ಅ.3 (ಆರ್‍ಕೆ)- ಕೊರೊನಾ ಸೋಂಕು ಹರಡುವ ಭೀತಿಯಿಂದ ಜನರು ಆಸ್ತಿ ತೆರಿಗೆ ಪಾವತಿಸಲು ಮೈಸೂರು ಮಹಾ ನಗರ ಪಾಲಿಕೆಯ ವಲಯ ಕಚೇರಿ ಕೌಂಟರ್‍ಗಳಿಗೆ ತೆರಳಲು ಹಿಂದೇಟು ಹಾಕುತ್ತಿರುವ ಕಾರಣ ಅವರ ಅನುಕೂಲ ಕ್ಕಾಗಿ ಇದೀಗ ಅಧಿಕಾರಿಗಳೇ ಜನರ ಬಳಿಗೆ ಹೋಗಿ ತೆರಿಗೆ ವಸೂಲಿ ಮಾಡುವ ವಿನೂತನ ಪ್ರಯೋಗ ಆರಂಭಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-3ರ ವ್ಯಾಪ್ತಿಯಲ್ಲಿ ಬರುವ ರಾಮಕೃಷ್ಣನಗರದ ಸಾಲುಮರದ ತಿಮ್ಮಕ್ಕ ಪಾರ್ಕ್‍ನಲ್ಲಿ ಇಂದಿನಿಂದ `ಪಾಲಿಕೆ ನಡೆ-ಜನತೆಯ ಕಡೆ’ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಆಸ್ತಿ ತೆರಿಗೆ ಹಣ ಪಾವತಿಸಿಕೊಳ್ಳುವ ಬ್ಯಾಂಕ್ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಅಭಿ ಯಾನವನ್ನು ಉದ್ಘಾಟಿಸಿದ್ದಾರೆ. ನಂತರ ಮಾತ ನಾಡಿದ ಅವರು, ಕುಡಿಯುವ ನೀರು, ಸ್ವಚ್ಛತಾ ಕಾರ್ಯ, ರಸ್ತೆ ನಿರ್ವಹಣೆ ಸೇರಿದಂತೆ ಮೈಸೂರು ನಗರದಾದ್ಯಂತ ಅಗತ್ಯ ಮೂಲ ಸೌಲಭ್ಯವನ್ನು ನಾಗರಿಕರಿಗೆ ಒದಗಿಸಲು ಪಾಲಿಕೆಗೆ ಆರ್ಥಿಕ ಸಂಪನ್ಮೂಲ ಕ್ರೋಢೀ ಕರಣದ ಅಗತ್ಯವಿದೆ. ಅದಕ್ಕಾಗಿ ಆಸ್ತಿ ತೆರಿಗೆ, ನೀರು, ಉದ್ದಿಮೆ ರಹದಾರಿ ಶುಲ್ಕದಂತಹ ಬಾಬ್ತುಗಳಿಂದ ಹಣ ಕ್ರೋಢೀಕರಿಸುವ ಸಲುವಾಗಿ ಮೈಸೂರು ಮಹಾನಗರ ಪಾಲಿಕೆಯು ಇದೀಗ ತೆರಿಗೆ ಸಂಗ್ರಹಿಸುವ ವಿನೂತನ ಅಭಿಯಾನ ಆರಂಭಿಸಿದೆ ಎಂದರು.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜನರು ಪಾಲಿಕೆ ವಲಯ ಕಚೇರಿ ಕೌಂಟರ್‍ಗಳಿಗೆ ತೆರಳಲು ಹಿಂಜರಿಯುತ್ತಿ ರುವುದರಿಂದ ಅದನ್ನು ಅರಿತು ಅಧಿಕಾರಿ ಗಳು ಇದೀಗ ಜನರ ಮನೆ ಬಾಗಿಲಿಗೆ ಬಂದು ಆಸ್ತಿ ತೆರಿಗೆ ಸಂಗ್ರಹಿಸುವ `ಪಾಲಿಕೆ ನಡೆ-ಜನತೆಯ ಕಡೆ’ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ. ಸಾರ್ವಜನಿಕರು ಈ ಅವಕಾಶ ವನ್ನು ಬಳಸಿಕೊಂಡು ತಮ್ಮ ಆಸ್ತಿಗೆ ಸಂಬಂ ಧಿಸಿದ ತೆರಿಗೆಯನ್ನು ಪಾವತಿಸುವ ಮೂಲಕ ಪಾಲಿಕೆ ಮತ್ತಷ್ಟು ಪರಿಣಾಮಕಾರಿಯಾಗಿ ಸೌಲಭ್ಯ ಒದಗಿಸಲು ಸಹಕಾರ ನೀಡಬೇ ಕೆಂದು ಜಿ.ಟಿ.ದೇವೇಗೌಡರು ಇದೇ ಸಂದರ್ಭ ಮನವಿ ಮಾಡಿದರು.

ಸ್ಥಳದಲ್ಲೇ ಬ್ಯಾಂಕ್ ಕೌಂಟರ್‍ಗಳನ್ನು ತೆರೆದಿದ್ದು, ಪಾಲಿಕೆ ಸಿಬ್ಬಂದಿ ಕಂಪ್ಯೂ ಟರ್, ದಾಖಲಾತಿಗಳೊಂದಿಗೆ ಹಾಜರಿರು ತ್ತಾರೆ. ಮಾಲೀಕರು ಹಣವನ್ನು ಬ್ಯಾಂಕ್ ಕೌಂಟರ್‍ನಲ್ಲಿ ಪಾವತಿಸಬಹುದು ಅಥವಾ ಆನ್‍ಲೈನ್ ಮೂಲಕವೂ ಪಾವತಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಪಾಲಿಕೆ ವಲಯ ಕಚೇರಿ-3ರ ವ್ಯಾಪ್ತಿಯಲ್ಲಿ 29.876 ಆಸ್ತಿಗಳಿದ್ದು ಪ್ರಸಕ್ತ ಸಾಲಿನಲ್ಲಿ 15.900 ಆಸ್ತಿಗಳಿಂದ ಒಟ್ಟು 10.25 ಕೋಟಿ ರೂ. ಹಾಗೂ 2019-20ರವರೆಗೆ 2.89 ಕೋಟಿ ರೂ. ಬಾಕಿ ಬರಬೇಕಾಗಿದೆ. ಸಾರ್ವಜನಿ ಕರು ಮುಂದೆ ಬಂದು ಸ್ವಯಂ ಪ್ರೇರಿತ ರಾಗಿ ತಮ್ಮ ಆಸ್ತಿಯ ಬಾಕಿ ತೆರಿಗೆಯನ್ನು ಪಾವತಿ ಮಾಡುವ ಮೂಲಕ ಮೈಸೂರು ನಗರದ ನಿರ್ವಹಣೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ಸಹಕಾರ ನೀಡ ಬೇಕೆಂದು ಅವರು ಮನವಿ ಮಾಡಿದರು.

ಮೈಸೂರು ಮಹಾನಗರ ಪಾಲಿಕೆ ಕೈಗೊಂಡಿರುವ ಈ ಅಭಿಯಾನ ಉತ್ತಮ ವಾಗಿದ್ದು, ಜನರಿಗೆ ಸಹಕಾರಿಯಾಗಿದೆ. ಈ ವ್ಯವಸ್ಥೆಯನ್ನು ಮೈಸೂರು ನಗರದ ಎಲ್ಲಾ ಬಡಾವಣೆಗಳಲ್ಲೂ ಜಾರಿಗೆ ತಂದು ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ಪಾಲಿಕೆಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡು ವಂತೆ ಸಲಹೆ ನೀಡಿದ ಶಾಸಕರು, ಇದರಿಂದ ಜನರು ದೂರದ ಪಾಲಿಕೆ ವಲಯ ಕಚೇರಿ ಗಳಿಗೆ ತೆರಳಿ ಸಾಲುಗಟ್ಟಿ ನಿಲ್ಲುವ ಅಥವಾ ಪ್ರತಿದಿನ ಅಲೆದಾಡುವ ಪ್ರಮೇಯ ತಪ್ಪು ತ್ತದೆ ಎಂದರು. ಪಾಲಿಕೆಯ ಈ ಕಾರ್ಯ ಕ್ರಮಕ್ಕೆ ಇಂದು ರಾಮಕೃಷ್ಣನಗರ ಸುತ್ತಮುತ್ತ ಲಿನ ನಿವಾಸಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದೆಯೂ ವಲಯ ಕಚೇರಿ-3ರ ವ್ಯಾಪ್ತಿಯಲ್ಲಿ `ಪಾಲಿಕೆ ನಡೆ-ಜನತೆಯ ಕಡೆ’ ಕಾರ್ಯಕ್ರಮವನ್ನು ಮುಂದು ವರೆಸುತ್ತೇವೆ ಎಂದು ವಲಯಾಧಿಕಾರಿ ಸತ್ಯ ಮೂರ್ತಿ ತಿಳಿಸಿದ್ದಾರೆ. ಪಾಲಿಕೆಯ ಹೆಚ್ಚು ವರಿ ಆಯುಕ್ತ ಶಶಿಕುಮಾರ್, ಕಾರ್ಪೋ ರೇಟರ್‍ಗಳಾದ ಶಿವಕುಮಾರ್, ನಿರ್ಮಲಾ, ಶರತ್ ಇನ್ನಿತರರು ಉಪಸ್ಥಿತರಿದ್ದರು.

Translate »