ನೂರಾರು ವಿದ್ಯಾರ್ಥಿಗಳಿಗೆ ಜ್ಞಾನಪೀಠ ಪುರಸ್ಕøತ ಸಾಹಿತಿ  ಡಾ.ಯು.ಆರ್.ಅನಂತಮೂರ್ತಿ ಬದುಕು-ಬರಹ ಪರಿಚಯ
ಮೈಸೂರು

ನೂರಾರು ವಿದ್ಯಾರ್ಥಿಗಳಿಗೆ ಜ್ಞಾನಪೀಠ ಪುರಸ್ಕøತ ಸಾಹಿತಿ  ಡಾ.ಯು.ಆರ್.ಅನಂತಮೂರ್ತಿ ಬದುಕು-ಬರಹ ಪರಿಚಯ

June 10, 2018

ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಶ್ರೀ ಕಾವೇರಿ ಪ್ರಥಮ ದರ್ಜೆ ಕಾಲೇಜಿನ ಸಭಾಂ ಗಣದಲ್ಲಿ ಶನಿವಾರ ನಡೆದ ‘ಅನಂತ ಸ್ಮರಣೆ’ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ 30ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ಶಾಲೆಗಳ ನೂರಾರು ವಿದ್ಯಾರ್ಥಿ ಗಳು ಪಾಲ್ಗೊಂಡು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತ ಮೂರ್ತಿ ಅವರ ಜೀವನ ಹಾಗೂ ಸಾಧನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಡಾ.ಯು.ಆರ್.ಅನಂತಮೂರ್ತಿ ಸಾಹಿ ತ್ಯಾಸಕ್ತರ ಬಳಗ ಆಯೋಜಿಸಿದ್ದ ‘ಅನಂತ ಸ್ಮರಣೆ’ ವಿಶೇಷ ಉಪನ್ಯಾಸ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಡಾ.ಯು.ಆರ್. ಅನಂತಮೂರ್ತಿ ಅವರ ಒಡನಾಡಿಗಳು ಅನಂತಮೂರ್ತಿ ಅವರೊಂದಿಗೆ ಒಡನಾಟ ವನ್ನು ವಿವರಿಸುವುದರೊಂದಿಗೆ ಅವರ ವ್ಯಕ್ತಿತ್ವವನ್ನು ಬಣ್ಣಿಸಿದರು.

ಕಾರ್ಯಕ್ರಮವನ್ನು ಡಾ.ಯು.ಆರ್.ಅನಂತ ಮೂರ್ತಿ ಅವರ ಪತ್ನಿ ಎಸ್ತರ್ ಅನಂತ ಮೂರ್ತಿ ಅವರು ಯು.ಆರ್.ಅನಂತ ಮೂರ್ತಿ ಅವರ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, 60 ವರ್ಷಗಳ ಕಾಲ ನಾನು ಅನಂತ ಮೂರ್ತಿ ಅವರೊಂದಿಗೆ ಒಡನಾಟ ಇಟ್ಟು ಕೊಂಡಿದ್ದಲ್ಲದೆ, ಸಂಸಾರ ನಡೆಸಿದ್ದೆ. ಇಂದಿನ ಪೀಳಿಗೆ ಟಿವಿ ವೀಕ್ಷಣೆ ಮಾಡುವುದನ್ನು ಬಿಟ್ಟು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳ ಬೇಕು. ನಮ್ಮ ನಾಡಿನಲ್ಲಿ ಅನೇಕ ಮಂದಿ ಸಾಹಿತ್ಯಲೋಕದ ದಿಗ್ಗಜರು ಇದ್ದಾರೆ. ಸಾಹಿತ್ಯಲೋಕದಲ್ಲಿ ಅವರ ಸಾಧನೆಯ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳುವುದಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದ ಅವರು, ಪ್ರಸ್ತುತ ವಿದ್ಯಾರ್ಥಿ ಸಮೂಹ ಯು.ಆರ್.ಅನಂತಮೂರ್ತಿ ಅವರ ಜೀವನ, ಸಾಹಿತ್ಯ ಹಾಗೂ ಸಾಧನೆಗಳ ಬಗ್ಗೆ ತಿಳಿದು ಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಇಚ್ಛಿಸು ತ್ತಿರುವುದನ್ನು ಕಂಡರೆ ಸಂತೋಷವಾಗು ತ್ತದೆ. ಇಂತಹ ಕಾರ್ಯಕ್ರಮಗಳನ್ನು ನಿರಂ ತರವಾಗಿ ಆಯೋಜಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಕೋರಿದರು.
ಹಿರಿಯ ಸಂಶೋಧಕರಾದ ಪ್ರೊ.ಟಿ. ಆರ್.ಎಸ್.ಶರ್ಮಾ ಮಾತನಾಡಿ, ವೈಚಾ ರಿಕ ನೆಲೆಗೆ ಆಚಾರವೇ ಸಮಸ್ಯೆ ಎನ್ನುತ್ತಿ ದ್ದರು ಅನಂತಮೂರ್ತಿ. ಆಚಾರ ಮತ್ತು ವಿಚಾರ ದಲ್ಲಿ ಯಾವತ್ತೂ ಹಣಾಹಣ ಇರುತ್ತದೆ. ವೈಚಾರಿಕತೆ ಮತ್ತು ಆಚಾರ ಎರಡರ ಮಧ್ಯ ದಲ್ಲಿದ್ದ ಅನಂತಮೂರ್ತಿ ವೈಚಾರಿಕ ನೆಲೆಯ ಕಡೆ ವಾಲುತ್ತಿದ್ದರು ಎಂದು ತಿಳಿಸಿದರು.

ಮಹಾರಾಜ ಕಾಲೇಜು ಸಮೀಪದಲ್ಲಿದ್ದ ಅಯ್ಯರ್ ಹೋಟೆಲ್ ಮತ್ತು ಪ್ರಭಾ ಚಿತ್ರ ಮಂದಿರದ ಸಮೀಪದಲ್ಲಿದ್ದ ಕಾಫಿ ಹೌಸ್ ನಲ್ಲಿ ಕಿರಿಯರೊಂದಿಗೂ ಚರ್ಚಿಸಿದ್ದ ಅವರು ಭಾರತೀಯ ಸಂಸ್ಕೃತಿ ಹೇಗೆ ಬರೆಯಬೇಕು. ಯಾವ ರೀತಿ ವಿಮರ್ಶಾತ್ಮಕವಾಗಿ ನೋಡ ಬೇಕು ಎಂಬುದನ್ನು ವಿವರಿಸುತ್ತಿದ್ದರು ಎಂದ ಅವರು ಅವರೊಂದಿಗಿನ ಒಡನಾಟ ವನ್ನು ಹಂಚಿಕೊಂಡರು.
ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್, ವಿಶ್ರಾಂತ ಕುಲಪತಿ ಪ್ರೊ.ಕೆ.ಸಿ.ಬೆಳ್ಳಿಯಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ವಿಜಯ ವಾಮನ್ ಮಾತನಾಡಿದರು. ಪ್ರೊ. ಬಿ.ಎನ್.ಬಾಲಾಜಿ ಪ್ರಾಸ್ತಾವಿಕ ನುಡಿಗಳ ನ್ನಾಡಿದರೆ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಸತ್ಯನಾರಾಯಣ, ಪ್ರೊ.ಪಾಣ ನಿ, ಪ್ರೊ.ಉಮಾಪತಿ, ನಿವೃತ್ತ ಐಎಎಸ್ ಅಧಿ ಕಾರಿ ಮೊನ್ನಪ್ಪ, ಸಾಹಿತಿ ಜಿ.ಪಿ.ಬಸವ ರಾಜು, ಡಾ.ಮಲ್ಲಪ್ಪ, ಡಾ. ಲಕ್ಷ್ಮೀನಾರಾ ಯಣ, ರತಿರಾವ್, ಶ್ರೀದೇವಿ, ಪ್ರೊ.ಲತಾ ಕೆ.ಬಿದ್ದಪ್ಪ, ಭಾಗ್ಯದೇವಮ್ಮ, ಪ್ರಸಾದ್ ಇನ್ನಿ ತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »