ಡೋಂಗಿ ಬಾಬಾನಿಂದ ಪತ್ನಿ ದೂರ: ಮನನೊಂದು ಪತಿ ಆತ್ಮಹತ್ಯೆ
ಮೈಸೂರು

ಡೋಂಗಿ ಬಾಬಾನಿಂದ ಪತ್ನಿ ದೂರ: ಮನನೊಂದು ಪತಿ ಆತ್ಮಹತ್ಯೆ

April 30, 2022

ಗುಂಡ್ಲುಪೇಟೆ, ಏ.೨೯(ಸೋಮ್‌ಜಿ)- ಮೈಸೂರಿನ ಡೋಂಗಿ ಬಾಬಾ ಮತ್ತು ಆತನ ಇಬ್ಬರು ಸಹಚರರು ಪತ್ನಿಯನ್ನು ತನ್ನಿಂದ ದೂರ ಮಾಡಿದ್ದಾರೆ ಎಂದು ಡೆತ್‌ನೋಟ್ ಬರೆದಿಟ್ಟು ವ್ಯಕ್ತಿ ಯೋರ್ವ ನೇಣ ಗೆ ಶರಣಾದ ಘಟನೆ ಗುಂಡ್ಲುಪೇಟೆ ಪಟ್ಟಣದ ಅಮೀರ್ ಜಾನ್ ರಸ್ತೆಯಿಂದ ವರದಿಯಾಗಿದೆ.

ಅಲ್ಲಿನ ನಿವಾಸಿ ಮಹಮ್ಮದ್ ಅಪ್ಘಾನ್(೩೫) ಎಂಬಾತನೇ ಡೆತ್‌ನೋಟ್ ಬರೆದಿಟ್ಟು ನೇಣ ಗೆ ಶರಣಾದವನಾಗಿದ್ದು, ಈತ ಸುಮಾರು ೧೦ ವರ್ಷದ ಹಿಂದೆ ಮೈಸೂರಿನ ಯುವತಿಯನ್ನು ವಿವಾಹವಾಗಿದ್ದು, ಈ ದಂಪತಿಗೆ ೮ ವರ್ಷದ ಮಗನಿದ್ದಾನೆ.

ಮೈಸೂರಿನಲ್ಲಿರುವ ಈತನ ಮಾವನ ಮನೆಯಲ್ಲಿ ಬಾಡಿಗೆಗಿದ್ದ ಡೋಂಗಿ ಬಾಬಾ ಖರ‍್ರಂ ಪಾಷಾ ಎಂಬಾತನ ಬಳಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಈ ದಂಪತಿ ಆಗಿಂದಾಗ್ಗೆ ಹೋಗುತ್ತಿದ್ದರು ಎಂದು ಹೇಳಲಾಗಿದೆ. ಕಳೆದ ಒಂದು ತಿಂಗಳಿAದ ತವರು ಮನೆಯಲ್ಲೇ ಇರುವ ಈತನ ಪತ್ನಿ ಎಷ್ಟೇ ಕರೆದರೂ ಗಂಡನ ಮನೆಗೆ ಬಂದಿಲ್ಲ ಎಂದು ಹೇಳಲಾಗಿದೆ. ಡೋಂಗಿ ಬಾಬಾ ಖರ‍್ರಂ ಪಾಷಾ ತನ್ನ ಪತ್ನಿಯ ತಲೆ ಕೆಡಿಸಿ ತನ್ನಿಂದ ದೂರ ಮಾಡಿದ್ದಾನೆ. ಅದಕ್ಕೆ ಆತನ ಸಹಚರರಾದ ಮಹಮ್ಮದ್ ಹಕೀಂ ಮತ್ತು ಅಯೂಬ್ ಷರೀಫ್ ಸಹಕರಿಸಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಅಪ್ಘಾನ್ ಬರೆದಿದ್ದು, ತನ್ನ ಸಮಾಜದ ಮುಖಂಡರು ತನ್ನ ಸಾವಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾನೆ. ಆತ್ಮಹತ್ಯೆಗೆ ಶರಣಾದ ಅಪ್ಘಾನ್‌ನ ತಂದೆ ನೀಡಿದ ದೂರಿನ ಮೇರೆಗೆ ಡೊಂಗಿಬಾಬಾ ಖರ‍್ರಂ ಪಾಷಾ ಅಲಿಯಾಸ್ ಅಬ್ದುಲ್ ರೆಹಮಾನ್, ಆತನ ಸಹಚರರಾದ ಮಹಮ್ಮದ್ ಹಕೀಂ ಮತ್ತು ಅಯೂಬ್ ಷರೀಫ್ ವಿರುದ್ಧ ಗುಂಡ್ಲುಪೇಟೆ ಪಟ್ಟಣ ಠಾಣೆ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Translate »