ಮೈಸೂರು,ನ.2(ಎಂಟಿವೈ)- ಮುಖ್ಯಮಂತ್ರಿ ಆಗುವ ಅರ್ಹತೆ ನನಗೂ ಇದೆ. ಜನರಿಂದ ಆಯ್ಕೆಯಾದವರು ಅಂತಹ ಬಯಕೆ ಇಟ್ಟುಕೊಳ್ಳ ಬಾರದು ಅಂಥ ಏನಿಲ್ಲ ಎಂದು ಹೇಳುವ ಮೂಲಕ `ಉಪ ಚುನಾವಣೆ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿದ್ದಾರೆ’ ಎಂಬ ಶಾಸಕ ಜಮೀರ್ ಅಹಮದ್ ಹೇಳಿಕೆಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ. ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ಪP್ಷÀದ ವರಿಷ್ಠರ ತೀರ್ಮಾನವೇ ಹೊರತು ಜಮೀರ್ ಹೇಳಿದಂತೆ ಆಗುವುದಿಲ್ಲ. ಜಮೀರ್‍ಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತವೇ ತಿಳಿದಿಲ್ಲ. ಅವರು ಹೇಳಿದಂತೆ ಯಾವುದೂ ಆಗುವುದಿಲ್ಲ. ಮುಖ್ಯಮಂತ್ರಿ ಆಗಲು ಅಂಕಿ-ಸಂಖ್ಯೆ ಮುಖ್ಯ. ನಾಯಕನಾದವನ ಬಳಿ ಸಂಖ್ಯೆ ಇದ್ದರೆ ಮಾತ್ರ ಸಿಎಂ ಆಗ ಬಹುದು. ಇಷ್ಟಕ್ಕೂ ಸಿಎಂ ಯಾರಾಗಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದರು. ಮುಂದೆ ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದು ಸದ್ಯಕ್ಕೆ ಮುಖ್ಯವಲ್ಲ. ಬದಲಿಗೆ ಕಾಂಗ್ರೆಸ್ ಪP್ಷÀ ಅಧಿಕಾರಕ್ಕೆ ಬರಬೇಕು. ಬಿಜೆಪಿ ದುರಾಡಳಿತದಿಂದ ಜನತೆ ಬೇಸತ್ತಿz್ದÁರೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಯಾವುದೇ ಸಂಶಯವಿಲ್ಲ. ಬಂದಾಗ ಅಂಕಿ-ಸಂಖ್ಯೆಗೆ ಅನುಗುಣವಾಗಿ ಹೈಕ ಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು.