ಉನ್ನತ ಶಿಕ್ಷಣ ಸಚಿವರಿಗೆ ಮರಿತಿಬ್ಬೇಗೌಡರ ಆಗ್ರಹ
ಮೈಸೂರು, ಜು.21(ಎಸ್‍ಬಿಡಿ)- ಪದವಿ ತರಗತಿಗಳಿಗೆ ಪ್ರವೇಶಾವಕಾಶ ಕಲ್ಪಿಸಿ ರುವುದು ಸ್ವಾಗತಾರ್ಹವಾಗಿದ್ದು, ಆನ್‍ಲೈನ್ ಮೂಲಕವೂ ಅರ್ಜಿ ಹಾಕಲು ಅನುವು ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ.
ಕೊರೊನಾ ಪರಿಣಾಮ ಶೈಕ್ಷಣಿಕ ಕ್ಷೇತ್ರದಲ್ಲಿ ಗೊಂದಲ ಉಂಟಾ ಗಿದೆ. ಆದಾಗ್ಯೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪದವಿ ತರ ಗತಿಗಳಿಗೆ ಪ್ರವೇಶಾತಿ ಪಡೆಯಲು ಅವಕಾಶ ನೀಡಿರುವ ಕಾಲೇಜು ಶಿಕ್ಷಣ ಇಲಾಖೆಯ ಕ್ರಮ ಸ್ವಾಗತಾರ್ಹ. ಆದರೆ ಸದ್ಯದ ಪರಿಸ್ಥಿತಿ ಯಲ್ಲಿ ತಾವು ಇಚ್ಛಿಸಿದ ಕಾಲೇಜಿಗೆ ಅರ್ಜಿ ಹಾಕುವುದು ಕಷ್ಟಸಾಧ್ಯ ಎಂಬಂತಾಗಿದೆ. ಉದಾಹರಣೆಗೆ ಮೈಸೂರಿನ ಮಹಾರಾಜ, ಯುವರಾಜ, ಮಹಾರಾಣಿ ಕಾಲೇಜಿನಲ್ಲಿ ಓದಬೇಕೆಂಬ ಆಸೆಯುಳ್ಳ ವಿದ್ಯಾರ್ಥಿಗಳು ರಾಜ್ಯದ ವಿವಿಧೆಡೆ ಇದ್ದಾರೆ. ಆದರೆ ನೇರವಾಗಿ ಬಂದು ಅರ್ಜಿ ಸಲ್ಲಿಸಲು ಆಗುವುದಿಲ್ಲ. ಹಾಗಾಗಿ ಆನ್‍ಲೈನ್ ಮೂಲಕವೂ ಅರ್ಜಿ ಹಾಕಿ ಪ್ರವೇಶಾತಿ ಪಡೆಯಲು ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮರಿತಿಬ್ಬೇಗೌಡರು, ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.