ರಾಜ್ಯದಲ್ಲಿ ಬುಧವಾರ ಬರೋಬ್ಬರಿ 3176 ಮಂದಿಗೆ ಸೋಂಕು
ಮೈಸೂರು

ರಾಜ್ಯದಲ್ಲಿ ಬುಧವಾರ ಬರೋಬ್ಬರಿ 3176 ಮಂದಿಗೆ ಸೋಂಕು

July 16, 2020

ಬೆಂಗಳೂರು, ಜು.15-ರಾಜ್ಯದಲ್ಲಿ ಬುಧವಾರ ಕೊರೊನಾ ರಣಕೇಕೆ ಹಾಕಿದೆ. ಇಂದು ದಾಖಲೆಯ 3176 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 47,253ಕ್ಕೆ ಏರಿಕೆಯಾಗಿದೆ. 87 ಮಂದಿ ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ 928 ಮಂದಿ ಮೃತಪಟ್ಟಂತಾಗಿದೆ.

ಇಂದು 1076 ಮಂದಿ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದು, ಒಟ್ಟಾರೆ 18,466 ಮಂದಿ ಗುಣಮುಖರಾದಂತಾಗಿದೆ. ರಾಜ್ಯದ 27,853 ಸಕ್ರಿಯ ಸೋಂಕಿತರ ಪೈಕಿ 597 ಮಂದಿ ಆರೋಗ್ಯ ಸ್ಥಿತಿ ಗಂಭೀರ ವಾಗಿದ್ದು, ಅವರೆಲ್ಲರನ್ನೂ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ 1975 ಮಂದಿಗೆ ಬುಧವಾರ ಸೋಂಕು ತಗುಲಿದ್ದು, ರಾಜಧಾನಿಯಲ್ಲಿ ಸೋಂಕಿ ತರ ಸಂಖ್ಯೆ 22,944ಕ್ಕೆ ಏರಿಕೆಯಾಗಿದೆ. ಧಾರವಾಡ 139, ಬಳ್ಳಾರಿ 136, ಮೈಸೂರು 99,
ವಿಜಯಪುರ 80, ದಕ್ಷಿಣ ಕನ್ನಡ 76, ಕಲಬುರಗಿ 67, ಉಡುಪಿ 52, ಯಾದಗಿರಿ 49, ಉತ್ತರ ಕನ್ನಡ 48, ಬೆಳಗಾವಿ 41, ಗದಗ 39, ಬೀದರ್ ಮತ್ತು ದಾವಣಗೆರೆ ತಲಾ 35, ಬಾಗಲಕೋಟೆ 34, ಚಿಕ್ಕಬಳ್ಳಾಪುರ 32, ಮಂಡ್ಯ 31, ಶಿವಮೊಗ್ಗ 29, ರಾಯಚೂರು 26, ಹಾಸನ 25, ತುಮಕೂರು 24, ಚಾಮರಾಜನಗರ 17, ಕೋಲಾರ 15, ಕೊಪ್ಪಳ 14, ಚಿಕ್ಕಮಗಳೂರು 13, ಚಿತ್ರದುರ್ಗ 12, ಬೆಂಗಳೂರು ಗ್ರಾಮಾಂತರ 10, ಕೊಡಗು 8, ಹಾವೇರಿ 6, ರಾಮನಗರದಲ್ಲಿ 3 ಪ್ರಕರಣಗಳು ದಾಖಲಾಗಿವೆ. ಸೋಂಕಿತರ ಪ್ರಥಮ ಸಂಪರ್ಕದ 50,241 ಮತ್ತು ದ್ವಿತೀಯ ಸಂಪರ್ಕದ 44,837 ಸೇರಿದಂತೆ 95,078 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

Translate »