ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ: ಪರೀಕ್ಷೆಗೆ ಮುಗಿಬಿದ್ದ ಜನa
ಮೈಸೂರು

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ: ಪರೀಕ್ಷೆಗೆ ಮುಗಿಬಿದ್ದ ಜನa

January 13, 2022

ಮೈಸೂರು, ಜ.12(ಎಂಟಿವೈ)- ಕಳೆದ ಕೆಲವು ದಿನಗಳಿಂದ ಮೈಸೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗು ತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಮುಂದೆ ಬರುತ್ತಿ ರುವವರ ಸಂಖ್ಯೆ ದಿಢೀರ್ ಹೆಚ್ಚಾಗಿದೆ.

ಕಳೆದ ತಿಂಗಳು ಕೋವಿಡ್ ಪರೀಕ್ಷೆ ಮಾಡಿಸಿ ಕೊಳ್ಳಿ ಎಂದು ಆರೋಗ್ಯ ಇಲಾಖೆ ಮನವಿ ಮಾಡುತ್ತಿದ್ದರೂ ಸ್ವ್ಯಾಬ್ ಪರೀಕ್ಷೆ ಮಾಡಿ ಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಜನರು ಈಗ ಸ್ವಯಂ ಪ್ರೇರಣೆಯಿಂದ ಕೊರೊನಾ ಪರೀಕ್ಷೆಗೆ ಬರುತ್ತಿರುವುದರಿಂದ ಕೊರೊನಾ ಸೋಂಕಿನ ಅಪಾಯದಿಂದ ಜನರನ್ನು ರಕ್ಷಿಸಲು ಸಾಧ್ಯವಾಗುತ್ತಿದೆ.

ಶೀತ ಗಾಳಿ, ಮಂಜಿನ ವಾತಾವರಣ, ಸುಗ್ಗಿಕಾಲದ ಹಿನ್ನೆಲೆಯಲ್ಲಿ ವಾತಾವರಣ ದಲ್ಲಿ ಒಕ್ಕಣೆಯ ಧೂಳು ಸೇರಿರುವುದರಿಂದ ಕೆಲವರ ಆರೋಗ್ಯದ ಮೇಲೆ ದುಷ್ಪರಿ ಣಾಮ ಬೀರಿದೆ. ಸಣ್ಣ ಪ್ರಮಾಣದ ಜ್ವರ, ಮೈ-ಕೈ ನೋವು, ಶೀತ, ಗಂಟಲು ಕೆರೆತ ದಂತಹ ಸಮಸ್ಯೆಗೆ ತುತ್ತಾಗಿದ್ದಾರೆ. ಇದರಿಂದ ಕೊರೊನಾ ಸೋಂಕು ಹರಡುವಿಕೆ ಆತಂಕ ದಿಂದ ಕೋವಿಡ್ ಪರೀಕ್ಷೆ ಮಾಡಿಸಿ ಕೊಳ್ಳಲು ಮುಂದೆ ಬರುತ್ತಿದ್ದಾರೆ. ಈ ಅನಾರೋಗ್ಯ ಲಕ್ಷಣವುಳ್ಳವರಲ್ಲೇ ಪಾಸಿಟಿವ್ ಬರುತ್ತಿರು ವುದು ಜಿಲ್ಲಾಡಳಿತದ ತಲೆ ಕೆಡಿಸಿದೆ.

ಪುರಭವನದಲ್ಲಿ: ಮೈಸೂರಿನ ಪುರಭವನ ಕಟ್ಟಡದಲ್ಲಿ ಕೋವಿಡ್ ಟೆಸ್ಟ್ ಮುಂದವರೆ ಸಲಾಗಿದೆ. ಕಳೆದ ಒಂದು ವಾರದಿಂದ ಶಬರಿಮಲೆ ಯಾತ್ರಿಕರು ಮಾತ್ರ ಕೋವಿಡ್ ಟೆಸ್ಟ್ ಮಾಡಿಸುತ್ತಿದ್ದರು. ಇಂದು ಎಲ್ಲಾ ವರ್ಗದ ಜನರು, ವಿದ್ಯಾರ್ಥಿಗಳು, ಖಾಸಗಿ ಹಾಗೂ ಸರ್ಕಾರಿ ನೌಕರರು ಕೋವಿಡ್ ಟೆಸ್ಟ್ ಮಾಡಿಕೊಳ್ಳಲು ಪುರ ಭವನಕ್ಕೆ ಬಂದಿದ್ದರು. ಆರ್‍ಟಿ-ಪಿಸಿಆರ್ ಹಾಗೂ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಿ ಆರೋಗ್ಯದ ಬಗ್ಗೆ ಕಾಳಜಿವಹಿಸು ವಂತೆ ಕೋವಿಡ್ ಟೆಸ್ಟ್ ಮಾಡುತ್ತಿದ್ದ ಸಿಬ್ಬಂದಿ ಸಲಹೆ ನೀಡುತ್ತಿದ್ದರು.

ಹಲವರಿಗೆ ಪಾಸಿಟಿವ್: ಕೋವಿಡ್ ಟೆಸ್ಟ್ ಮಾಡಿಸಲು ಬಂದಿದ್ದ ಹಲವರಲ್ಲಿ ಪಾಸಿಟಿವ್ ಇರುವುದು ರ್ಯಾಪಿಡ್ ಆಂಟಿ ಜೆನ್ ಟೆಸ್ಟ್‍ನಲ್ಲಿ ಪಾಸಿಟಿವ್ ಬಂದಿರುವುದು ದೃಢಪಟ್ಟಿತು. ಆದರೂ ಆರ್‍ಟಿಪಿಸಿಆರ್ ಪರೀಕ್ಷಾ ವರದಿ ಸಂಜೆಯೊಳಗೆ ಬರುತ್ತದೆ. ಆ ವರದಿಯನ್ನು ಸಮೀಪದ ಆಸ್ಪತ್ರೆ ಕೊಂಡೊಯ್ದು ಚಿಕಿತ್ಸೆ ಪಡೆದುಕೊಳ್ಳು ವಂತೆ ಸಿಬ್ಬಂದಿ ಸಲಹೆ ನೀಡಿದರು.

ಪಾಸಿಟಿವ್ ಬಂದವರೂ ಓಡಾಡು ತ್ತಿದ್ದರು: ಆಂಟಿಜೆನ್ ಟೆಸ್ಟ್ ಮಾಡಿಸಿ ಕೊಂಡವರಲ್ಲಿ ಕೆಲವರಿಗೆ ಪಾಸಿಟಿವ್ ಬಂದವರಿದ್ದರೂ, ಸಿಬ್ಬಂದಿ ಎಚ್ಚರ ವಹಿಸಿ ಮನೆಗೆ ಹೋಗಿ ಜನರ ಸಂಪರ್ಕದಿಂದ ದೂರವಿರುವಂತೆ ಸಲಹೆ ನೀಡುತ್ತಿದ್ದರು. ಆದರೆ, ಪಾಸಿಟಿವ್ ಬಂದ ಕೆಲವರು ಪುರಭವನದ ಸುತ್ತಮುತ್ತಲೇ ಓಡಾಡುವ ಮೂಲಕ ತಮ್ಮ ಸಾಮಾಜಿಕ ಜವಾ ಬ್ದಾರಿಯನ್ನು ಮರೆತಂತೆ ವರ್ತಿಸುತ್ತಿದ್ದರು. ಅಲ್ಲದೆ, ಮಾಸ್ಕ್ ಹಾಕದೆ ರಸ್ತೆಯಲ್ಲೇ ಉಗುಳುವ ಮೂಲಕ ಸೋಂಕು ಇತರ ರಿಗೂ ಹರಡುವಂತೆ ಉದ್ಧಟತನ ಪ್ರದ ರ್ಶಿಸುತ್ತಿದ್ದದ್ದು ಕಂಡು ಬಂದಿತು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ: ಕೋವಿಡ್ ಪರೀಕ್ಷೆಯನ್ನು ಪುರಭವನದ ಕಟ್ಟಡ, ಕೆ.ಆರ್.ಆಸ್ಪತ್ರೆ, ಜಿಲ್ಲಾಸ್ಪತ್ರೆ ಸೇರಿ ದಂತೆ ವಿವಿಧೆಡೆಯಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ತಾಲೂಕು ಕೇಂದ್ರ, ಹೋಬಳಿ ಕೇಂದ್ರ ಗಳಲ್ಲಿ ಡಿಹೆಚ್‍ಓ ಡಾ.ಕೆ.ಹೆಚ್.ಪ್ರಸಾದ್, ಆರ್‍ಸಿಹೆಚ್‍ಓ ಡಾ.ಎಂ.ಎಸ್.ಜಯಂತ್, ಡಿಎಸ್‍ಓ ಡಾ.ಟಿ.ಶಿವಪ್ರಸಾದ್, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಧಿಕಾರಿ ಡಾ.ಎಸ್.ಚಿದಂಬರ ಮಾರ್ಗ ದರ್ಶನದಲ್ಲಿ ಕೋವಿಡ್ ಟೆಸ್ಟ್ ನಡೆಸಲಾಗು ತ್ತಿದ್ದರೆ, ಮೈಸೂರು ನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ಡಾ. ಡಿ.ಜಿ.ನಾಗರಾಜ್ ನೇತೃತ್ವದಲ್ಲಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಕಳೆದ ಒಂದು ವಾರದ ಹಿಂದೆ ಜಿಲ್ಲೆಯಲ್ಲಿ ಕೇವಲ 2 ಸಾವಿರ ಮಂದಿಗಷ್ಟೇ ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ ಒಂದು ವಾರ ದಿಂದ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳು ತ್ತಿರುವವರ ಸಂಖ್ಯೆ 7 ಸಾವಿರಕ್ಕಿಂತ ಹೆಚ್ಚಾಗಿದೆ.

Translate »