ಗಂಗಾಮತಸ್ಥರನ್ನು ಎಸ್‍ಟಿಗೆ ಸೇರಿಸಲು ಒತ್ತಾಯ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಮೈಸೂರು

ಗಂಗಾಮತಸ್ಥರನ್ನು ಎಸ್‍ಟಿಗೆ ಸೇರಿಸಲು ಒತ್ತಾಯ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ

January 13, 2021

ಮೈಸೂರು, ಜ.12(ಎಂಟಿವೈ)-ಗಂಗಾಮತಸ್ಥರನ್ನು ಮುಂದಿನ 6 ತಿಂಗಳೊಳಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ಮುಂಬರುವ ಎಲ್ಲಾ ಚುನಾವಣೆಗಳನ್ನೂ ಬಹಿಷ್ಕರಿಸಲಾಗುವುದು ಎಂದು ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷೆ ಪ್ರೊ.ಹೆಚ್.ಎಂ. ವಸಂತಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆ ಸಿದ ಅವರು, ಗಂಗಾಮತಸ್ಥರನ್ನು ಎಸ್‍ಟಿಗೆ ಸೇರಿಸುವಂತೆ 40 ವರ್ಷಗಳಿಂದಲೂ ಮನವಿ ಮಾಡುತ್ತಿದ್ದೇವೆ. ಆದರೆ, ರಾಜಕೀಯ ದುರುದ್ದೇಶದಿಂದ ನಿರ್ಲಕ್ಷಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಚಿವರು ಹಾಗೂ ಬಿಜೆಪಿಯ ಇತರೆ ನಾಯಕರುಗಳು, ಗಂಗಾಮತ ಸಮುದಾಯವನ್ನು ಎಸ್‍ಟಿಗೆ ಸೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಭರವಸೆ ಈಡೇರಿಸಿಲ್ಲ. ಸಮುದಾಯ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಸಲು, ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದರು. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಗಂಗಾಮತ ಸಮುದಾಯವು ಪರಿಶಿಷ್ಟ ಪಂಗಡಕ್ಕೆ ಸೇರುವ ಎಲ್ಲ ಅರ್ಹತೆ ಗಳನ್ನೂ ಹೊಂದಿದೆ. ಸಮುದಾಯವನ್ನು ಮೊಗವೀರ, ಕಬ್ಬಲಿಗ ಮತ್ತಿತರ 39 ಪರ್ಯಾಯ ಪದಗಳಿಂದಲೂ ಕರೆಯಲಾಗುತ್ತದೆ. ಸದ್ಯ ಕಡತವು ಕೇಂದ್ರದ ರಿಜಿಸ್ಟ್ರಾರ್ ಜನರಲ್ ಬಳಿ ಉಳಿದು ಕೊಂಡಿದೆ. ಕೇಂದ್ರ ಸರ್ಕಾರ ಶೀಘ್ರ ಕ್ರಮ ಕೈಗೊಂಡು ಸಮುದಾಯ ವನ್ನು 6 ತಿಂಗಳೊಳಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸಲೇಬೇಕು. ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿ ದರು. ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ನಿರ್ದೇಶಕ ನಾಗೇಂದ್ರ, ಚಿಕ್ಕಲಿಂಗಸ್ವಾಮಿ, ವೆಂಕಟಯ್ಯ ಗೋಷ್ಠಿಯಲ್ಲಿದ್ದರು.

 

 

Translate »