ಹೊರರಾಜ್ಯ ಪ್ರಯಾಣಿಕರಿಗೆ ಜಿಆರ್‍ಎಸ್ ಫ್ಯಾಂಟಸಿ ಪಾರ್ಕ್ ವಾಹನÀ ನಿಲುಗಡೆ ಪ್ರದೇಶದಲ್ಲಿ ತಪಾಸಣೆ
ಮೈಸೂರು

ಹೊರರಾಜ್ಯ ಪ್ರಯಾಣಿಕರಿಗೆ ಜಿಆರ್‍ಎಸ್ ಫ್ಯಾಂಟಸಿ ಪಾರ್ಕ್ ವಾಹನÀ ನಿಲುಗಡೆ ಪ್ರದೇಶದಲ್ಲಿ ತಪಾಸಣೆ

May 30, 2020

ಮೈಸೂರು, ಮೇ 29- ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರದ ನಿರ್ದೇಶನದಂತೆ ಅಂತರರಾಜ್ಯ ಮತ್ತು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಮೈಸೂರಿಗೆ ಆಗಮಿ ಸುವ ಪ್ರಯಾಣಿಕರಿಗೆ ಮೇಟಗಳ್ಳಿಯಲ್ಲಿರುವ ಜಿ.ಆರ್.ಎಸ್. ಫ್ಯಾಂಟಸಿ ಪಾರ್ಕ್‍ನಲ್ಲಿರುವ ವಾಹನ ನಿಲುಗಡೆ ಪ್ರದೇಶದಲ್ಲಿ ತಾತ್ಕಾಲಿಕವಾಗಿ ತಪಾಸಣಾ ಕೇಂದ್ರವನ್ನು ತೆರೆಯ ಲಾಗಿದೆ. ಯಾವುದೇ ಪ್ರಯಾಣಿಕರಿಗೆ ಜಿ.ಆರ್.ಎಸ್ ಫ್ಯಾಂಟಸಿ ಪಾರ್ಕ್‍ನ ಒಳಗಡೆಯ ಆವರಣಕ್ಕೆ ಪ್ರವೇಶ ಇರುವುದಿಲ್ಲ. ಹಾಗೂ ಸಂಶಯಾಸ್ಪದ ವ್ಯಕ್ತಿಗಳನ್ನು ಸದರಿ ಆವರಣದಲ್ಲಿ ಇರಿಸಲು ಯಾವುದೇ ಅವಕಾಶ ನೀಡಿಲ್ಲ. ಅಲ್ಲದೆ ಸದರಿ ಕೇಂದ್ರವನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಅಥವಾ ಕಂಟೈನ್‍ಮೆಂಟ್ ಜೋನ್ ಆಗಿ ಬಳಕೆ ಮಾಡಿಲ್ಲ ವೆಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿರುತ್ತಾರೆ.

Translate »