ಬೆಂಗಳೂರು, ನ.3(ಕೆಎಂಶಿ)- ಲವ್ ಜಿಹಾದ್ ಮಟ್ಟ ಹಾಕಲು, ಮದುವೆಗಾಗಿ ಮತಾಂ ತರ ನಡೆಸುವುದನ್ನು ತಡೆಯಲು ರಾಜ್ಯದಲ್ಲಿ ಕಾನೂನು ತರಲಾಗು ವುದು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕøತಿ, ಪ್ರವಾ ಸೋದ್ಯಮ ಸಚಿವ ಸಿ.ಟಿ.ರವಿ ಪ್ರಕಟಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿ ರುವ ಅವರು, ಮದುವೆಯಾಗುವ ಉದ್ದೇಶ ದಿಂದ ಮತಾಂತರವಾಗುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿರುವ ಅವರು, ಜಿಹಾದಿ ಶಕ್ತಿಗಳು ನಮ್ಮ ಸಹೋದರಿಯರ ಘನತೆ ಗೌರವ ಹರಣ ಮಾಡುವುದನ್ನು ಸುಮ್ಮನೆ ನೋಡುತ್ತಾ ಕೂರಲು ಸಾಧ್ಯವಿಲ್ಲ ಎಂದಿ ದ್ದಾರೆ. ಯಾರೇ ಇರಲಿ, ಮತಾಂತರದಂತಹ ಕೃತ್ಯದಲ್ಲಿ ತೊಡಗಿದರೆ, ಅಂತಹವರು ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೊಡಗು, ಕರಾವಳಿ ತೀರ ಪ್ರದೇಶಗಳು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಜಿಹಾದಿಗಳು ಹಿಂದೂ ಸಮುದಾಯದ ಹುಡುಗಿಯರನ್ನು ಮತಾಂತರ ಮಾಡಿಸಿ, ಮದುವೆಯಾಗುತ್ತಿದ್ದರು. ಇದು ಭಾರಿ ವಿವಾ ದಕ್ಕೆ ಎಡೆಮಾಡಿತ್ತು. ಇದರಿಂದ ಕೆಲವೆಡೆ ಗುಂಪು ಹಾಗೂ ಕೋಮು ಘರ್ಷಣೆಗಳು ನಡೆದಿದ್ದವು. ಅಷ್ಟೇ ಅಲ್ಲ ಕೆಲವು ಕುಟುಂಬ ಗಳು ಆತ್ಮಹತ್ಯೆಗೂ ಶರಣಾಗಿದ್ದವು. ಇದನ್ನು ಮನಗಂಡೇ ರಾಜ್ಯ ಸರ್ಕಾರ ಕಠಿಣ ಕಾನೂನು ತರಲು ಮುಂದಾಗಿದೆ. ಉತ್ತರ ಪ್ರದೇಶ, ಹರಿಯಾಣ, ಮಧ್ಯ ಪ್ರದೇಶ ನಂತರ ಇದೀಗ ಕರ್ನಾಟಕ ಸರ್ಕಾರ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜÁರಿಗೆ ತರಲು ಹೊರಟಿದೆ. ಮುಸ್ಲಿಂ ಪುರುಷರು ಹಿಂದೂ ಹುಡುಗಿಯರಿಗೆ ಆಮಿಷವೊಡ್ಡಿ ತಮ್ಮ ಜಾತಿಯ ವಿಚಾರವನ್ನು ರಹಸ್ಯವಾಗಿಟ್ಟು ಲವ್ ಜಿಹಾದ್ ಮಾಡಿಕೊಂಡಿರುವ ಘಟನೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಠಿಣ ಕಾನೂನು ರಚಿಸುವುದಕ್ಕೆ ಸರ್ಕಾರ ಮುಂದಾಗಿದೆ.
ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಮುಂದಾಗಿರುವ ಬಿಜೆಪಿ ಆಡಳಿ ತದ 4ನೇ ರಾಜ್ಯವಾಗಿ ಕರ್ನಾಟಕ ಹೊರ ಹೊಮ್ಮಲಿದೆ. ಪ್ರೀತಿ ಹೆಸರಿನಲ್ಲಿ ಜಿಹಾದ್ ನಡೆಯಬಾರದು. ಇಂತಹ ಪದ್ಧತಿಯನ್ನು ತಡೆಯಲು ಕಾನೂನು
ರೂಪಿಸಲಾಗುವುದು ಎಂದಿದ್ದಾರೆ. ತಮ್ಮ ನಿಜವಾದ ಹೆಸರು ಮತ್ತು ಗುರುತು ಮರೆಮಾಚಿ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಗೌರವ ಮತ್ತು ಘನತೆಯೊಂದಿಗೆ ಆಟವಾಡುವವರಿಗೆ ಇದು ಎಚ್ಚರಿಕೆ ಪಾಠವಾಗಲಿದೆ. ಅವರು ತಮ್ಮನ್ನು ತಿದ್ದಿಕೊಳ್ಳದೇ ಹೋದರೆ, ಲವ್ ಜಿಹಾದ್ನಲ್ಲಿ ಭಾಗಿಯಾಗಿರುವವರ ಚಿತ್ರಗಳ ಪೆÇಸ್ಟರ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ವಿವಾಹದ ಏಕೈಕ ಉದ್ದೇಶಕ್ಕಾಗಿ ಮಾಡಲಾಗುವ ಮತಾಂತರ ಮಾನ್ಯವಲ್ಲ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಆಧಾರವಾಗಿಟ್ಟುಕೊಂಡು ಸರ್ಕಾರ ನೂತನ ಕಾಯ್ದೆ ರೂಪಿಸಲಿದೆ. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಕಾನೂನು ಮಂಡಿಸಿ, ಸದನದ ಅನುಮತಿ ಪಡೆದುಕೊಳ್ಳಲಾಗುವುದು.
ಅತ್ತೆ-ಸೊಸೆ, ತಾಯಿ-ಮಗಳಂತೆ ಚೆನ್ನಾಗಿರಲಿ
ಚಿಕ್ಕಮಗಳೂರು, ನ. 3- ಕಾಂಗ್ರೆಸ್ಸಿನಂತಹ ಜನರನ್ನು ನೀವು ಎಲ್ಲೂ ನೋಡಿರಲು ಸಾಧ್ಯವಿಲ್ಲ. ಏಕೆಂದರೆ ಅವರು ಚುನಾವಣೆಯಲ್ಲಿ ಗೆದ್ದರೆ ಜನಾದೇಶ ಅಂತಾರೆ, ಸೋತರೆ ಇವಿಎಂ ಮೇಲೆ ಆರೋಪಿಸುತ್ತಾರೆ. ಈ ರೀತಿಯ ಜನರನ್ನು ನೀವೆಲ್ಲೂ ನೋಡಲು ಆಗುವುದಿಲ್ಲ ಎಂದು ಸಚಿವ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಎಐಟಿ ಕಾಲೇಜು ಬಳಿ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿನಿಲಯದ ಶಂಕುಸ್ಥಾಪನೆ ಬಳಿಕ ಮಾತನಾಡಿದ ಅವರು, ಆರ್.ಆರ್.ನಗರ ದಲ್ಲಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಹಾಗೂ ಶಿರಾದಲ್ಲಿ 10 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಕಾಂಗ್ರೆಸ್ ಸೋಲು ಗ್ಯಾರಂಟಿಯಿಂದ ಇವಿಎಂ ಮೇಲೆ ಆರೋಪಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇವಿಎಂಗೆ ಇಂಟರ್ನೆಟ್ ಕನೆಕ್ಷನ್ ಇರುವುದಿಲ್ಲ. ಅವರು ಈ ಆರೋಪಗಳಿಗೆ ಸಾಕ್ಷಿ ಕೂಡ ನೀಡಿಲ್ಲ. ಈ ರೀತಿಯ ಆರೋಪ ಮಾಡಿ ದಾಗ ಚುನಾವಣಾ ಆಯೋಗ ನೀಡಿದ ನೋಟಿಸ್ಗೆ ಉತ್ತರಿಸಲಾಗದೆ ತಡಪಡಿಸಿದ್ದಾರೆ. ನ್ಯಾಯಾಲಯದ ತೀರ್ಪ ಬಂದರೆ ನ್ಯಾಯಾಧೀಶರನ್ನೇ ಅನುಮಾನಿ ಸೋದು, ಚುನಾವಣೆಯಲ್ಲಿ ಸೋತರೆ ಇವಿಎಂ ಮೇಲೆ ಗೂಬೆ ಕೂರಿಸೋದು, ಕಾಂಗ್ರೆಸ್ಸಿ ನವರಿಗೆ ಇದೊಂದು ಕೆಟ್ಟ ಖಾಯಿಲೆ. 2018ರ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯ ಪ್ರದೇಶದಲ್ಲಿ ಗೆದ್ದಾಗ ಯಾವುದು ಕೆಲಸ ಮಾಡಿತ್ತು. ಇದೇ ಇವಿಎಂನಲ್ಲಿ ತಾನೇ ಗೆದ್ದದ್ದು ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಡಿ.ಕೆ.ರವಿ ತಾಯಿ, ಸೊಸೆಯನ್ನು ಗೆಲ್ಲಿಸುವಂತೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಟಿ.ರವಿ, ಅತ್ತೆ ಸೊಸೆ, ತಾಯಿ ಮಗಳಂತೆ ಇರಲಿ. ಅತ್ತೆ-ಸೊಸೆ ಜಗಳವಾಡಲಿ ಎಂದು ನಾವು ಹೇಳೂ ಇಲ್ಲ, ಬಯಸಿದ್ದೂ ಇಲ್ಲ. ಚುನಾವಣೆ ಮುಗಿದ ಮೇಲೂ ಚೆನ್ನಾಗಿರಲಿ. ಮುಖವನ್ನೇ ನೋಡುವುದಿಲ್ಲ ಎಂದವರು ನೋಡುವಂತಾಗಿ ರೋದು ಸಂತೋಷದ ಸಂಗತಿ ಎಂದಿದ್ದಾರೆ. ನಾವು ನಮ್ಮ ಪಕ್ಷ ಗೆಲ್ಲಬೇಕು ಎಂದು ಬಯಸುತ್ತೇವೆ. ನಮ್ಮ ತಾತ್ವಿಕ ಹೋರಾಟ ಕಾಂಗ್ರೆಸ್-ಜೆಡಿಎಸ್ ವಿರುದ್ಧ ಎಂದು ತಿಳಿಸಿದರು.