ಮಕ್ಕಳ ಮೆದುಳನ್ನೇ ಕೇಸರಿಗೊಳಿಸುವುದು ಸರಿಯಲ್ಲ
ಮೈಸೂರು

ಮಕ್ಕಳ ಮೆದುಳನ್ನೇ ಕೇಸರಿಗೊಳಿಸುವುದು ಸರಿಯಲ್ಲ

May 28, 2022

ಮೈಸೂರು, ಮೇ ೨೭(ಆರ್‌ಕೆಬಿ)- ಬಟ್ಟೆ ಕೇಸರಿಯಾದರೆ ಹೋಗಲಿ…, ಮಕ್ಕಳ ಮೆದುಳನ್ನೇ ಕೇಸರಿಗೊಳಿಸುವುದು ಸರಿಯಲ್ಲ. ಮತ್ತೆ ಪರಿಷ್ಕರಣೆ ಆಗುವವರೆಗೆ ಈಗಿರುವ ಪಠ್ಯವನ್ನೇ ಮುಂದುವರಿಸು ವಂತೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವ ನಾಥ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮೈಸೂರು ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಇತ್ತೀಚೆಗೆ ಪರಿಷ್ಕರಿ ಸಿರುವ ವಿವಾದಿತ ಪಠ್ಯಮುದ್ರಣಕ್ಕಾಗಿ ಖರ್ಚು ಮಾಡಿರುವ ೩೮ ಕೋಟಿ ಹೋದರೂ ಪರವಾಗಿಲ್ಲ. ಆದರೆ ಆ ಪಠ್ಯವನ್ನು ವಿದ್ಯಾರ್ಥಿ ಗಳಿಗೆ ವಿತರಿಸಬಾರದು. ಮತ್ತೆ ಪರಿಷ್ಕರಣೆ ಆಗುವವರೆಗೂ ಈಗಿರುವ ಪಠ್ಯವನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಪ್ರೊ.ಬರಗೂರು ರಾಮ ಚಂದ್ರಪ್ಪ ಅವರ ನೇತೃತ್ವದಲ್ಲಿ ಪಠ್ಯ ಪರಿಷ್ಕರಣೆ ಆಗಿತ್ತು. ಆ ವೇಳೆ ಜಾತ್ಯತೀತ, ವೈಚಾರಿಕ ವಿಷಯಗಳಿದ್ದವು. ಆದರೆ ಈಗ ಒಂದೇ ಒಂದು ಪಾಠವನ್ನೂ ಮಾಡದ ರೋಹಿತ್ ಚಕ್ರವರ್ತಿ ಕೈಗೆ ಜವಾಬ್ದಾರಿ ಒಪ್ಪಿಸಿ, ಎಲ್ಲರೂ ಅಸಹ್ಯ ಪಡುವ ರೀತಿ ಪಠ್ಯ ಪರಿಷ್ಕರಿಸಲಾಗಿದೆ. ಬಟ್ಟೆಯೇನೋ ಕೇಸರಿಯಾದರೆ ಹೋಗಲಿ, ಆದರೆ ಮಕ್ಕಳ ಮೆದುಳನ್ನೇ ಕೇಸರೀಕರಣಗೊಳಿಸುವುದು ಸರಿಯಲ್ಲ. ಸಂಘ ಪರಿವಾರದ ಕೈಗೆ ಮಕ್ಕಳ ಬೋಧನೆ ಒಪ್ಪಿಸುವುದು ಸಹಾ ತಪುö್ಪ. ಹೀಗಾಗಿ ಮುಖ್ಯಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ ಜಾತ್ಯತೀತತೆಯ ಸ್ಪಂದನೆ ಇರಬೇಕಾಗಿತ್ತು. ಆದರೆ ಸಚಿವರ ಕಾರಣದಿಂದಾಗಿ ಒಂದೇ ಜಾತಿಯ ಎಂಟು ಮಂದಿ ಇದ್ದಾರೆ. ಅಲ್ಲದೆ, ರಾಜ್ಯದಲ್ಲಿ ಬಿ.ಟಿ.ಲಲಿತಾ ನಾಯಕ್ ಅವ ರಂತಹ ಅನೇಕ ಘಟಾನುಘಾಟಿಗಳಿದ್ದರೂ ನಿರ್ಲಕ್ಷಿಸಿ ಸಮಿತಿಯಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಿಲ್ಲ ಎಂದು ಟೀಕಿಸಿದರು.

ಕುವೆಂಪು, ಲಂಕೇಶ್ ಬೇಡ ಎನ್ನುತ್ತ ಆ ಚಕ್ರವರ್ತಿ ಸೂಲಿಬೆಲೆ ಬಗ್ಗೆ ಮಕ್ಕಳು ಓದುವಂತೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು. ಇದೇ ವೇಳೆ ಈಗಿನ ರೋಹಿತ್ ಚಕ್ರತೀರ್ಥ ಸಮಿತಿ ರದ್ದುಗೊಳಿಸಿ, ಹೊಸ ಪಠ್ಯಪುಸ್ತಕದ ಬದಲು ಈಗಿನ ಪಠ್ಯಪುಸ್ತಕವನ್ನೇ ಮುಂದಿನ ಪರಿಷ್ಕರಣೆವರೆಗೆ ಮುಂದುವರಿಸಬೇಕೆAದು ಆಗ್ರಹಿಸಿದರು.

 

Translate »