ಹಿಂದಿ ದಿನ ವಿರುದ್ಧ ಕನ್ನಡಪರ ಸಂಘಟನೆಗಳ ಪ್ರತಿಭಟನೆ
ಮೈಸೂರು

ಹಿಂದಿ ದಿನ ವಿರುದ್ಧ ಕನ್ನಡಪರ ಸಂಘಟನೆಗಳ ಪ್ರತಿಭಟನೆ

September 15, 2021

ಮೈಸೂರು, ಸೆ.14(ಪಿಎಂ)- ಹಿಂದಿ ಭಾಷೆ ಹೇರಿಕೆ ಮತ್ತು ಹಿಂದಿ ದಿವಸ ಆಚ ರಣೆ ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಮಂಗಳವಾರ ಮೈಸೂ ರಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದವು.

ಕರವೇ: ಮೈಸೂರಿನ ನೆಹರು ವೃತ್ತ ದಲ್ಲಿನ ಎಸ್‍ಬಿಐ ಬ್ಯಾಂಕ್ ಅಶೋಕ ರಸ್ತೆ ಶಾಖೆ ಎದುರು `ಕರ್ನಾಟಕ ರಕ್ಷಣಾ ವೇದಿಕೆ (ಕರವೇ)’ ಪ್ರತಿಭಟನೆ ನಡೆಸಿತು.

ದೇಶದಲ್ಲಿ ಕೇವಲ ಹಿಂದಿ ಭಾಷೆ ವೈಭ ವೀಕರಿಸಿ, ಉಳಿದ ಭಾಷೆಗಳನ್ನು ಕಡೆಗಣಿಸ ಲಾಗುತ್ತಿದೆ. ಹಿಂದಿ ದಿವಸ, ಹಿಂದಿ ಸಪ್ತಾಹ ದಂತಹ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು. ಭಾರತವು ಬಹು ಭಾಷೆ, ಸಂಸ್ಕøತಿ ಮತ್ತು ಧರ್ಮ ಹೊಂದಿದ್ದು, ಈ ಬಹುತ್ವ ಉಳಿದರಷ್ಟೇ ಒಕ್ಕೂಟ ವ್ಯವಸ್ಥೆ ಉಳಿ ಯಲು ಸಾಧ್ಯ. ಒಕ್ಕೂಟ ವ್ಯವಸ್ಥೆಯ ಮೂಲ ಮಂತ್ರವನ್ನೇ ಕಡೆಗಣಿಸುವುದು ಸರಿಯಲ್ಲ. ದೇಶದ ಎಲ್ಲಾ ಭಾಷೆಗಳು ಜೀವಂತವಾಗಿ ಉಳಿದು ಬೆಳೆಯಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಕರವೇ ಜಿಲ್ಲಾಧ್ಯಕ್ಷ ಪ್ರವೀಣ್‍ಕುಮಾರ್ ಸೇರಿದಂತೆ ಇತರರಿದ್ದರು.

ಕನ್ನಡಾಂಬೆ ರಕ್ಷಣಾ ವೇದಿಕೆ: ಹಿಂದಿ ದಿವಸ ಆಚರಣೆ ಕೈಬಿಡಬೇಕೆಂದು ಆಗ್ರಹಿಸಿ `ಕನ್ನಡಾಂಬೆ ರಕ್ಷಣಾ ವೇದಿಕೆ’ ವತಿಯಿಂದ ಮೈಸೂರಿನ ಗಾಂಧಿಚೌಕದಲ್ಲಿ ಪ್ರತಿಭಟನೆ ನಡೆಸಲಾಯಿತು. ಕನ್ನಡಿಗರ ತೆರಿಗೆ ಹಣ ದಲ್ಲಿ ನಡೆಸಲಾಗುವ ಹಿಂದಿ ದಿವಸ ಆಚರಣೆ ಕನ್ನಡಿಗರಿಗೆ ಬೇಕಾಗಿಲ್ಲ. ಹಲವು ಭಾಷೆ ಗಳನ್ನು ಒಳಗೊಂಡಿರುವ ಭಾರತದಲ್ಲಿ ಹಿಂದಿ ಭಾಷೆಯೂ ಒಂದು. ಅದಕ್ಕೆ ವಿಶೇಷ ಮಹತ್ವ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆ ರಾಜ್ಯಾ ಧ್ಯಕ್ಷ ರಾಜಶೇಖರ್ ಸೇರಿದಂತೆ ಮತ್ತಿತ ರರು ಪ್ರತಿಭಟನೆಯಲ್ಲಿದ್ದರು.

 

ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ: ಹಿಂದಿ ದಿವಸ ಆಚರಣೆ ವಿರೋಧಿಸಿ ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ವತಿಯಿಂದ ಮೈಸೂರಿನ ಗಾಂಧಿಚೌಕದಲ್ಲಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಲಾಯಿತು. 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಮೇಲೆ ಹಿಂದಿ ಭಾಷೆ ಹೇರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆ ರಾಜ್ಯಾಧ್ಯಕ್ಷ ಗಿರೀಶ್ ಶಿವಾರ್ಚಕ ಮತ್ತಿತರರು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಕರ್ನಾಟಕ ಜನ ಸೈನ್ಯ: ಹಿಂದಿ ದಿವಸ್ ಆಚರಣೆ ಕೈಬಿಡಲು ಒತ್ತಾಯಿಸಿ ಕರ್ನಾ ಟಕ ಜನ ಸೈನ್ಯದಿಂದ ಮೈಸೂರಿನ ರೈಲ್ವೆ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಲಾ ಯಿತು. ರಾಜ್ಯದ ಎಲ್ಲಾ ರೈಲ್ವೆ ನಿಲ್ದಾಣ ಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು. ಜಾಗೃತಿ ಸಂದೇಶ ಫಲಕಗಳಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

 

ರೈಲ್ವೆ ಮುಂಗಡ ಟಿಕೆಟ್ ಅರ್ಜಿಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ರೈಲ್ವೆ ನಿಲ್ದಾಣದ ಸ್ವಾಗತ ಫಲಕಗಳಲ್ಲಿ ತ್ರಿಭಾಷಾ ನೀತಿ ಕೈಬಿಟ್ಟು ಕನ್ನಡ ಮತ್ತು ಆಂಗ್ಲ ಭಾಷೆ ಗಳನ್ನು ಮಾತ್ರ ಬಳಸಬೇಕು. ರೈಲ್ವೆಯ ಪ್ರಮುಖ ಹುದ್ದೆಗಳಿಗೆ ಕನ್ನಡಿಗರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ಸೈನ್ಯದ ಜಿಲ್ಲಾಧ್ಯಕ್ಷ ಪರಮೇಶ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Translate »