ಶಾಲಾ ಮಕ್ಕಳ ಹೊರೆ ನಿವಾರಣೆಗೆ `ಸಂಭ್ರಮ ಶನಿವಾರ’
ಮೈಸೂರು

ಶಾಲಾ ಮಕ್ಕಳ ಹೊರೆ ನಿವಾರಣೆಗೆ `ಸಂಭ್ರಮ ಶನಿವಾರ’

March 6, 2020

ಬೆಂಗಳೂರು, ಮಾ.5(ಕೆಎಂಶಿ)- ಶಾಲಾ ಮಕ್ಕಳ ಪಠ್ಯವನ್ನು ಹೊರೆಯಾಗಿಸದೇ ಉಲ್ಲಾಸದಿಂದ ಕಲಿ ಯುವಂತೆ ಮಾಡುವ ಉದ್ದೇಶದಿಂದ ತಿಂಗಳಿನ ಎರಡು ಶನಿವಾರಗಳನ್ನು ಬ್ಯಾಗ್ ರಹಿತ ದಿನಗಳೆಂದು ಪರಿ ಗಣಿಸಿ, ಸಂಭ್ರಮ ಶನಿವಾರ ಎಂದು ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ವಿಧಾನಸಭೆಯಲ್ಲಿ ಮಂಡನೆಯಾದ ಮುಂಗಡ ಪತ್ರ ದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಪ್ರಸ್ತಾವನೆ ಇಟ್ಟಿರುವುದಲ್ಲದೆ, ಆ ದಿನಗಳಂದು ಮಕ್ಕಳಿಗೆ ಚಟುವಟಿಕೆ ಗಳ ಮೂಲಕ ದೇಶದ ಉತ್ತಮ ನಾಗರಿಕರಾಗಲು ಅವಶ್ಯವಿರುವ ವಿಷಯಗಳ ಬಗ್ಗೆ ಅರಿವು ಮೂಡಿಸ ಲಾಗುವುದು. ಮಕ್ಕಳ ಜೊತೆಗೆ ಶಿಕ್ಷಕರ ಮೇಲಿನ ಹೊರೆ ಯನ್ನು ತಗ್ಗಿಸುವ ಉದ್ದೇಶದಿಂದ ಮತ್ತು ಶಿಕ್ಷಣದ ಗುಣ ಮಟ್ಟವನ್ನು ಹೆಚ್ಚಿಸುವ ಕಾರಣಕ್ಕಾಗಿ ಶಿಕ್ಷಕರು ಇನ್ನು ಮುಂದೆ ಹೆಚ್ಚಿನ ಸೌಲಭ್ಯಗಳಿಗಾಗಿ ತರಗತಿಯಿಂದ ಹೊರಗುಳಿದು, ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಅವರಿಗೆ ಎಲ್ಲಾ ಸೇವಾ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ಒದಗಿ ಸಲು ನಿರ್ಧರಿಸಿ, ಈ ಉದ್ದೇಶಕ್ಕಾಗಿ ‘ಶಿಕ್ಷಕ ಮಿತ್ರ’ ಎಂಬ ಮೊಬೈಲ್ ಆಪ್ ಅಭಿವೃದ್ಧಿಗೊಳಿಸುವುದಾಗಿ ಪ್ರಕಟಿಸಿದ್ದಾರೆ.

ಶಾಸಕರುಗಳಿಂದ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿರುವ 3 ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿ ಸಲು ಅವರ ಪ್ರದೇಶಾಭಿವೃದ್ಧಿ ಯೋಜನೆಯಡಿ ಕ್ರಮ ಕೈಗೊಳ್ಳ ಲಾಗುವುದು. ಪ್ರಸಕ್ತ ಸಾಲಿನಲ್ಲಿ 400 ಸರ್ಕಾರಿ ಉರ್ದು ಶಾಲೆಗಳಲ್ಲಿ ಉರ್ದು ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗುವುದು. ನಗರದ ಐತಿಹಾಸಿಕ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜನ್ನು ಐ.ಐ.ಟಿ ಮಾದರಿಯಲ್ಲಿ ಸ್ವಾಯತ್ತತೆ ಗೊಳಿಸಿ, ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ 10 ಕೋಟಿ ರೂ. ಮೀಸಲಿಟ್ಟಿದ್ದಾರೆ. ವಿಶ್ವವಿದ್ಯಾಲಯ ಮತ್ತು ಕಾಲೇಜು ಗಳ ಆಡಳಿತ ವ್ಯವಸ್ಥೆಯನ್ನು ತಂತ್ರಜ್ಞಾನದ ನೆರವಿನಿಂದ ಸಮರ್ಥವಾಗಿ ನಿರ್ವಹಿಸಲು ಒಂದು ಶಾಶ್ವತ ವ್ಯವಸ್ಥೆಯನ್ನು ತರಲಾಗುವುದು. ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಯಡಿ ತಲಾ 5 ಕೋಟಿ ರೂ. ವೆಚ್ಚದಲ್ಲಿ ಜಿಯೋಸ್ಪೇಶಿ ಯಲ್ ತಂತ್ರಜ್ಞಾನ ಕೇಂದ್ರ ಸ್ಥಾಪಿಸಲಾಗುವುದು ಎಂದಿದ್ದಾರೆ.

ಮಕ್ಕಳಿಗಾಗಿ ಪ್ರತ್ಯೇಕ ಬಜೆಟ್: 18 ವರ್ಷದೊಳಗಿನ ಮಕ್ಕಳಿಗೆ 36340 ಕೋಟಿ ರೂ.ಗಳ 279 ಕಾರ್ಯಕ್ರಮ
ಬೆಂಗಳೂರು, ಮಾ.5(ಕೆಎಂಶಿ)- ಇದೇ ಪ್ರಥಮ ಬಾರಿಗೆ ಮಕ್ಕಳಿಗಾಗಿ ಪ್ರತ್ಯೇಕ ಆಯವ್ಯಯ ಮಂಡಿಸಿದ್ದಾರೆ. 18 ವರ್ಷದ ಕೆಳಗಿರುವ ಎಲ್ಲ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆ ಗಳನ್ನು ಕ್ರೋಢೀಕರಿಸಿ, ಪ್ರಕಟಿಸಲಾಗಿದ್ದು, ಇದರಿಂದ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ 36340 ಕೋಟಿ ರೂ.ಗಳ 279 ಕಾರ್ಯ ಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ. ಇದರಿಂದ ರಾಜ್ಯದಲ್ಲಿನ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತಮ್ಮ ಸರ್ಕಾರದ ಬದ್ಧತೆ ಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರಾದರೂ, ಅದರ ಪೂರ್ಣ ವಿವರ ನೀಡಿಲ್ಲ. ಬಾಲಮಂದಿರದಿಂದ 20 ವರ್ಷ ತುಂಬಿದ ನಂತರ ಬಿಡುಗಡೆ ಹೊಂದುವವರಿಗೆ ಉದ್ಯೋಗ ಪ್ರಾರಂಭಿಸಲು ಹಾಗೂ ಅವರ ಮುಂದಿನ ಜೀವನೋಪಾಯಕ್ಕೆ ‘ಉಪಕಾರ ಯೋಜನೆ’ ಜಾರಿಗೆ ತಂದಿದ್ದು, ಇದರಡಿ, ತಿಂಗಳಿಗೆ 5 ಸಾವಿರ ರೂ.ಗಳಂತೆ ಗರಿಷ್ಠ 3 ವರ್ಷಗಳವರೆಗೆ ಆರ್ಥಿಕ ನೆರವು ನೀಡುವುದಾಗಿ ಹೇಳಿದ್ದಾರೆ.

Translate »