ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷರಾಗಿ ಕೋಡಿಹಳ್ಳಿ ಚಂದ್ರಶೇಖರ್ ಆಯ್ಕೆ
ಮೈಸೂರು

ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷರಾಗಿ ಕೋಡಿಹಳ್ಳಿ ಚಂದ್ರಶೇಖರ್ ಆಯ್ಕೆ

December 13, 2020

ಬೆಂಗಳೂರು, ಡಿ.12- ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ರಾಗಿ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸಾರಿಗೆ ನೌಕರರು ಅಧಿ ಕೃತವಾಗಿ ಆಯ್ಕೆ ಮಾಡಿದ್ದಾರೆ. ಒಮ್ಮತದ ಮೂಲಕ ಸಾರಿಗೆ ನೌಕರರು ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದು, ಸಾರಿಗೆ ಸಚಿವ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಪತ್ರ ರವಾನಿಸಲು ನೌಕರರು ಮುಂದಾಗಿದ್ದಾರೆ. ಏನೇ ಚರ್ಚೆ ನಡೆಸಿದರು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮಾತುಕತೆ ನಡೆಸುವಂತೆ ಅಧಿಕೃತ ಘೋಷಣಾ ಪತ್ರದಲ್ಲಿ ನೌಕರರು ಉಲ್ಲೇಖಿಸಿದ್ದಾರೆ. ಇನ್ನು ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರು ಮಾತ ನಾಡಿ, ನಮ್ಮ ಒಕ್ಕೂಟದ ಗೌರವ ಅಧ್ಯಕ್ಷರನ್ನಾಗಿ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ನೇಮಕ ಮಾಡಿದ್ದೇವೆ. ನಮ್ಮ ಹೋರಾಟದ ಮುಂದಾಳತ್ವ ವಹಿಸುತ್ತಿರೋದು ಅವರೇ. ಮತುಕತೆಗೆ ಕರೆಯುವುದಾದರೆ ಸರ್ಕಾರ ಅವರನ್ನೇ ಕರೆಯಲಿ ಎಂದು ಹೇಳಿದ್ದಾರೆ.

 

Translate »