ರಾಜ್ಯ ಸಾರಿಗೆ ಸಂಸ್ಥೆ ನೌಕರರ ಹೋರಾಟಕ್ಕೆ ಕೋಡಿಹಳ್ಳಿ ನೇತೃತ್ವ: ಕುರುಬೂರು ಆತಂಕ
ಮೈಸೂರು

ರಾಜ್ಯ ಸಾರಿಗೆ ಸಂಸ್ಥೆ ನೌಕರರ ಹೋರಾಟಕ್ಕೆ ಕೋಡಿಹಳ್ಳಿ ನೇತೃತ್ವ: ಕುರುಬೂರು ಆತಂಕ

April 8, 2021

ಮೈಸೂರು, ಏ.7(ಎಸ್‍ಪಿಎನ್)- ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕೆಎಸ್‍ಆರ್‍ಟಿಸಿ ನೌಕರರು ನಡೆಸುತ್ತಿರುವ ಹೋರಾಟ ಮುಂದಿನ ದಿನಗಳಲ್ಲಿ ಅವರಿಗೆ ಮಾರಕವಾಗುವ ಲಕ್ಷಣ ಗೋಚರಿಸುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆತಂಕ ವ್ಯಕ್ತಪಡಿಸಿದರು.

ಮೈಸೂರಿನ ಗನ್‍ಹೌಸ್ ಬಳಿಯ ವಿಶ್ವಮಾನವ ಕುವೆಂಪು ಪಾರ್ಕ್ ನಲ್ಲಿ ಬುಧವಾರ ಮೈಸೂರು ತಾಲೂಕು ರೈತ ಕಬ್ಬು ಬೆಳೆಗಾರರ ಸಭೆ ಯಲ್ಲಿ ಮಾತನಾಡಿದ ಅವರು, ಕೋಡಿಹಳ್ಳಿ ಈವರೆಗೂ ರೈತ ಹೋರಾಟಗಳಲ್ಲಿದ್ದವರು. ಈಗ ಕೆಎಸ್‍ಆರ್‍ಟಿಸಿ ನೌಕರರ ಪರವಾಗಿ ಹೋರಾಟ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ರೈತರು, ಬಡ ವರು, ಕೂಲಿ ಕಾರ್ಮಿಕರಿಗೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
`ಹಸಿರು ಶಾಲು’ ರೈತ ಸಂಘ ಟನೆಗಳ ಸಂಕೇತ. ಈ ಶಾಲು ಬಳಸಿ ಕೋಡಿಹಳ್ಳಿ ಚಂದ್ರಶೇಖರ್ ಕಾರ್ಮಿಕರ ಹೋರಾಟ ನಡೆಸಿ ರುವುದು ಅಕ್ಷಮ್ಯ. ಒಂದೊಂದು ಹೋರಾಟಕ್ಕೂ ಬೇರೆ ಬೇರೆ ಸಾಮಾಜಿಕ ಗುಣ-ಲಕ್ಷಣಗಳಿವೆ. ಅದನ್ನು ತಿಳಿಯದೇ ಚಂದ್ರ ಶೇಖರ್ ಹೋರಾಟದ ನೇತೃತ್ವ ವಹಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಕಾರ್ಮಿಕರ ಹೋರಾಟಕ್ಕೆ ನಮ್ಮ ನೈತಿಕ ಬೆಂಬಲವಿದೆ. ಆದರೆ, ಆ ಸಂಸ್ಥೆಯನ್ನು ಮುಚ್ಚುವ ಹಂತಕ್ಕೆ ಹೋರಾಟ ಮಾಡಬಾರದು. ಒಮ್ಮೆ ರಾಜ್ಯ ಸರ್ಕಾರ ಇವೆಲ್ಲಾ ಹೋರಾಟ ಗಳಿಂದ ಬೇಸತ್ತು ಬೇರೆಯದ್ದೇ ತೀರ್ಮಾನ ತೆಗೆದುಕೊಂಡರೆ ಇದನ್ನೇ ನಂಬಿರುವ 1.30 ಲಕ್ಷ ಕಾರ್ಮಿಕರ ಕುಟುಂಬಗಳಿಗೆ ಉತ್ತರದಾಯಿ ಯಾರು? ಎಂದು ಪ್ರಶ್ನಿಸಿದರು.

Translate »