ಚಿರತೆ ಬಂತು ಚಿರತೆ… ನೀರಾವರಿ, ಅರಣ್ಯ ಇಲಾಖೆ ಅಧಿಕಾರಿಗಳ ಚಿಂತೆ… ತಿಂಗಳಿAದ ಕೆಆರ್‌ಎಸ್ ಬೃಂದಾವನ ಬಂದ್
ಮೈಸೂರು

ಚಿರತೆ ಬಂತು ಚಿರತೆ… ನೀರಾವರಿ, ಅರಣ್ಯ ಇಲಾಖೆ ಅಧಿಕಾರಿಗಳ ಚಿಂತೆ… ತಿಂಗಳಿAದ ಕೆಆರ್‌ಎಸ್ ಬೃಂದಾವನ ಬಂದ್

November 27, 2022

ಸರ್ಕಾರದ ಬೊಕ್ಕಸಕ್ಕೆ ಕೋಟಿ ನಷ್ಟ, ವ್ಯಾಪಾರಿಗಳ ಬದುಕಿಗೆ ಕಲ್ಲು ಬಿತ್ತು

ಬೋನಿಟ್ಟು ಚಿರತೆ ಬರಮಾಡಿಕೊಳ್ಳಲು ಕಾದಿರುವ ಅಧಿಕಾರಿ ವರ್ಗ

ಚಿರತೆ ಹಿಡಿಯುವ ಬದಲು ಕಂಡ ಕಂಡ ಬೀದಿ ನಾಯಿ ಹಿಡಿಯುತ್ತಿರುವ ಅರಣ್ಯ ಅಧಿಕಾರಿಗಳು; ಸಾರ್ವಜನಿಕರ ಆಕ್ರೋಶ

ಪರಿಣಾಮಕಾರಿ ಕ್ರಮ ಕೈಗೊಳ್ಳುವಲ್ಲಿ ಕಾವೇರಿ ನೀರಾವರಿ ನಿಗಮ, ಅರಣ್ಯ ಇಲಾಖೆ ಅಧಿಕಾರಿಗಳ ವಿಫಲ

ಶ್ರೀರಂಗಪಟ್ಟಣ, ನ. ೨೬ (ವಿನಯ್ ಕಾರೇಕುರ)- ಅರಮನೆ ನಗರಿ ಮೈಸೂರಿಗೆ ಭೇಟಿ ನೀಡುವ ದೇಶ-ವಿದೇಶದ ಪ್ರವಾಸಿಗರು ಶ್ರೀರಂಗಪಟ್ಟಣ ತಾಲೂಕಿ ನಲ್ಲಿರುವ ಕೆಆರ್‌ಎಸ್ ಬೃಂದಾವನಕ್ಕೆ ಭೇಟಿ ನೀಡು ವುದು ಸರ್ವೇ ಸಾಮಾನ್ಯ. ವಿಪರ್ಯಾಸವೆಂದರೆ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿ ನಿಂದಲೂ ಕೆಆರ್‌ಎಸ್ ಬೃಂದಾವನ ಗಾರ್ಡನ್‌ಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.

ಹೀಗಾಗಿ ಕೆಆರ್‌ಎಸ್‌ಗೆ ಪ್ರತಿನಿತ್ಯ ಆಗಮಿಸುತ್ತಿರುವ ಸಾವಿರಾರು ಪ್ರವಾಸಿಗರು ನಿರಾಸೆಯಿಂದ ಹಿಂತಿರುಗು ವಂತಾಗಿದೆ. ಕಾವೇರಿ ನೀರಾವರಿ ನಿಗಮ ನಿರ್ವಹಣೆ ಯಲ್ಲಿರುವ ಕೆಆರ್‌ಎಸ್‌ನಲ್ಲಿ ಪ್ರತ್ಯಕ್ಷವಾದ ಚಿರತೆಯನ್ನು ಸೆರೆ ಹಿಡಿಯಲು ಕಾವೇರಿ ನೀರಾವರಿ ನಿಗಮದ ಅಧಿ ಕಾರಿಗಳಾಗಲೀ, ಅರಣ್ಯ ಇಲಾಖೆ ಅಧಿಕಾರಿಗಳಾಗಲೀ ಪ್ರಾಮಾಣ ಕ ಪ್ರಯತ್ನ ಮಾಡುತ್ತಿಲ್ಲ ಎಂಬ ಆರೋಪ ಗಳು ಕೇಳಿಬರುತ್ತಿವೆ. ಕೆಆರ್‌ಎಸ್‌ನ ಕೆಲವೆಡೆ ಬೋನ್ ಇಟ್ಟಿರುವುದನ್ನು ಹೊರತುಪಡಿಸಿದರೆ ಚಿರತೆ ಸೆರೆ ಹಿಡಿ ಯಲು ಬೇರೆ ಯಾವುದೇ
ಗಂಭೀರ ಪ್ರಯತ್ನ ನಡೆದಿಲ್ಲ. ಪ್ರವಾಸಿಗರ ನಿರ್ಬಂಧದಿAದಾಗಿ ಕಾವೇರಿ ನೀರಾವರಿ ನಿಗಮಕ್ಕೆ ಒಂದು ಕೋಟಿಗೂ ಹೆಚ್ಚು ಆದಾಯ ನಷ್ಟವಾಗಿದೆ ಎಂದು ಹೇಳಲಾಗಿದೆ.

ಚಿರತೆ ಬದಲು ಬೀದಿ ನಾಯಿ ಸೆರೆ: ಚಿರತೆ ಸೆರೆ ಹಿಡಿಯಬೇಕಾದ ಅರಣ್ಯ ಇಲಾಖೆ ಸಿಬ್ಬಂದಿ ಕೆಆರ್‌ಎಸ್ ಸುತ್ತಮುತ್ತಲಿನ ಬೀದಿನಾಯಿಗಳನ್ನು ಸೆರೆ ಹಿಡಿಯುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈವರೆಗೂ ೨೦ಕ್ಕೂ ಹೆಚ್ಚು ಬೀದಿ ನಾಯಿಗಳ ಸೆರೆ ಹಿಡಿದು ಬೇರೆಡೆಗೆ ಸಾಗಿಸಲಾಗಿದೆ ಎಂದು ಸ್ಥಳೀಯರು ಅಪಹಾಸ್ಯ ಮಾಡಿದ್ದಾರೆ. ಚಿರತೆಗಳಿಗೆ ನಾಯಿಗಳು ಪ್ರಿಯವಾದ ಆಹಾರವಾಗಿದ್ದು, ಚಿರತೆ ಸೆರೆ ಹಿಡಿಯಲು ಅಳವಡಿಸಿರುವ ಬೋನ್‌ಗಳಲ್ಲಿ ಅಧಿಕಾರಿಗಳು ನಾಯಿಗಳನ್ನು ಕಟ್ಟಿಹಾಕಿದ್ದಾರೆ. ಆದರೆ, ಚಿರತೆ ಈವರೆವಿಗೂ ಬೋನ್‌ಗೆ ಬಿದ್ದಿಲ್ಲ. ಕೆಆರ್‌ಎಸ್ ಸುತ್ತಮುತ್ತ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿರುವುದ ರಿಂದ ಚಿರತೆ ಅದನ್ನು ಬೇಟೆಯಾಡುತ್ತಿದೆಯೇ ಹೊರತು, ಬೋನ್‌ನಲ್ಲಿರುವ ನಾಯಿಯತ್ತ ಸುಳಿಯುತ್ತಲೇ ಇಲ್ಲ. ಹೀಗಾಗಿ ಕೆಆರ್‌ಎಸ್ ಸುತ್ತಮುತ್ತ ಬೀದಿ ನಾಯಿಗಳು ಇಲ್ಲದಿದ್ದರೆ ಆಹಾರಕ್ಕಾಗಿ ಚಿರತೆ ಬೋನ್‌ನಲ್ಲಿ ಕಟ್ಟಿಹಾಕಿರುವ ನಾಯಿ ಬೇಟೆಗೆ ಬಂದು ಬೋನ್‌ನಲ್ಲಿ ಸಿಲುಕಿಕೊಳ್ಳುತ್ತದೆ ಎಂದು ಕಾವೇರಿ ನೀರಾವರಿ ನಿಗಮ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಲೇ ಬೀದಿ ನಾಯಿಗಳ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

 

ಬೃಂದಾವನದಲ್ಲೇ ೧೫ ಅಡಿ ಎತ್ತರದ ಬೇಲಿ ನಿರ್ಮಾಣ ಐಡಿಯಾ…
ಬೃಂದಾವನ ಗಾರ್ಡನ್‌ಗೆ ಪ್ರವಾಸಿಗರ ಪ್ರವೇಶ ನಿರ್ಬಂಧದಿAದಾಗಿ ಪ್ರವಾಸಿಗರ ವ್ಯಾಪಾರವನ್ನೇ ನಂಬಿಕೊAಡಿರುವ ನೂರಾರು ಮಂದಿ ಪರದಾಡು ವಂತಾಗಿದೆ. ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಬೃಂದಾವನ ಗಾರ್ಡನ್‌ಗೆ ಪ್ರವೇಶ ನಿರ್ಬಂಧಿಸಿರು ವುದರಿಂದ ವ್ಯಾಪಾರವಿಲ್ಲದೆ ಕೈಕಟ್ಟಿ ಕುಳಿತುಕೊಳ್ಳು ವಂತಾಗಿದೆ. ಜೀವನೋಪಾಯಕ್ಕಾಗಿ ಇದನ್ನೇ ನಂಬಿ ಕೊಂಡಿರುವ ನಾವು, ಸಾಲಕ್ಕೆ ಸಿಲುಕುವಂತಾಗಿದೆ ಎಂದು ವ್ಯಾಪಾರಸ್ಥರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಮತ್ತೊAದೆಡೆ ಬೃಂದಾವನ ಸುತ್ತ ಅರಣ್ಯ ಪ್ರದೇಶಕ್ಕೆ ಬೇಲಿ ನಿರ್ಮಿಸಿದರೆ ಚಿರತೆ ಅದನ್ನು ದಾಟಿ ಬೃಂದಾ ವನ ಗಾರ್ಡನ್‌ಗೆ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಬೃಂದಾವನ ಸುತ್ತ ೩ರಿಂದ ೪ ಕಿಲೋಮೀಟರ್ ಉದ್ದಕ್ಕೆ ೧೫ ಅಡಿ ಎತ್ತರದ ಬೇಲಿ ನಿರ್ಮಿಸಬೇಕೆಂಬ ಪ್ರಸ್ತಾವನೆಯನ್ನು ತಮ್ಮ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ಹೆಸರೇಳಲು ಇಚ್ಛಿಸದ ಅಧಿ ಕಾರಿಯೊಬ್ಬರು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಆದರೆ, ಚಿರತೆ ೧೫ ಅಡಿ ಎತ್ತರದ ಬೇಲಿಯನ್ನು ಅನಾಯಾಸವಾಗಿ ಹಾರಬಲ್ಲದು ಎಂದು ವನ್ಯ ಜೀವಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಜಗದ್ವಿಖ್ಯಾತ ಬೃಂದಾವನ ‘ಘನತೆಗೆ ಧಕ್ಕೆ’!

ಶ್ರೀರಂಗಪಟ್ಟಣ, ನ. ೨೬- ಕೆಆರ್‌ಎಸ್ ಬೃಂದಾವನ ಗಾರ್ಡನ್‌ನಲ್ಲಿ ಕಾಣ ಸಿ ಕೊಂಡಿರುವ ಚಿರತೆ ಸೆರೆ ಹಿಡಿ ಯುವ ವಿಚಾರದಲ್ಲಿ ಅಧಿಕಾರಿ ವರ್ಗ ಹಾಗೂ ಸರ್ಕಾರ ತೀವ್ರ ನಿರ್ಲಕ್ಷö್ಯತೆಯಿಂದಾಗಿ ಪ್ರವಾಸಿಗರಿಗೆ ನಿರಾಸೆಯಾಗುತ್ತಿರುವುದರ ಜೊತೆಗೆ ಸರ್ಕಾರದ ಬೊಕ್ಕಸಕ್ಕೂ ಭಾರೀ ನಷ್ಟ ಉಂಟಾಗು ತ್ತಿದೆ ಎಂದು ಶ್ರೀರಂಗಪ್ಪಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಸುದೀರ್ಘ ಅವಧಿಗೆ ಕೆಆರ್‌ಎಸ್ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರವಾಸಿ ಗರಲ್ಲೂ ಕೂಡ ಒಂದು ರೀತಿಯ ಭಯದ ವಾತಾ ವರಣವನ್ನೂ ಸೃಷ್ಟಿಸಲಾಗುತ್ತಿದೆ. ಇದೇ ರೀತಿ ಕೆಆರ್‌ಎಸ್‌ಗೆ ನಿರ್ಬಂಧ ಮುಂದುವರೆದರೆ ಕೆಆರ್‌ಎಸ್‌ನ ಪ್ರಸಿದ್ಧಿಗೆ ಧಕ್ಕೆ ಉಂಟಾಗುತ್ತದೆ. ಅದನ್ನು ಸರಿಪಡಿಸುವುದು ಕಷ್ಟವಾಗುತ್ತದೆ. ಸರ್ಕಾರಕ್ಕೆ ಇದರ ಅರಿವು ಇಲ್ಲದಂತೆ ಕಾಣುತ್ತದೆ. ಕೆಆರ್‌ಎಸ್‌ನ ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣ ಸಬೇಕಾಗಿದೆ ಎಂದರು. ಕಳೆದ ೩೫ ದಿನಗಳಿಂದಲೂ ಬೃಂದಾವನದ ಬಾಗಿಲು ಬಂದ್ ಮಾಡಿರುವ ವಿಚಾರ ಸಾಮಾಜಿಕ ಜಾಲ ತಾಣದಲ್ಲಿ ಸದ್ದು ಮಾಡುತ್ತಿದೆ.

ಆದರೂ ಕೂಡ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಜಿಲ್ಲೆಯವರೇ ಆದ ಶಾಸಕ ಕೆ.ಸಿ.ನಾರಾಯಣಗೌಡ ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ತಮಗೂ ಇದಕ್ಕೂ ಸಂಬAಧವೇ ಇಲ್ಲವೆಂಬAತೆ ವರ್ತಿಸುತ್ತಿರುವುದು ದೊಡ್ಡ ದುರಂತ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು. ಸಚಿವರು ಮಾತ್ರವಲ್ಲದೇ ಹಿರಿಯ ಅಧಿಕಾರಿಗಳೂ ಕೂಡ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣ ಸಿಲ್ಲ. ಕೇವಲ ತಾಲೂಕು ಮಟ್ಟದ ಅಧಿಕಾರಿಗಳು ಮಾತ್ರ ಚಿರತೆ ಸೆರೆ ಬಗ್ಗೆ ಗಮನಹರಿಸುತ್ತಿದ್ದಾರೆ. ಅದು ಪರಿಣಾಮಕಾರಿ ಯಾಗುತ್ತಿಲ್ಲ. ಕಾವೇರಿ ನೀರಾವರಿ ನಿಗಮ ಮತ್ತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸ ಬೇಕು. ತಜ್ಞರ ಸಲಹೆ ಪಡೆದು ಶೀಘ್ರದಲ್ಲೇ ಚಿರತೆ ಸೆರೆ ಹಿಡಿದು ಕೆಆರ್‌ಎಸ್ ಬೃಂದಾವನವನ್ನು ಪ್ರವಾಸಿಗರಿಗೆ ಮುಕ್ತಗೊಳಿಸಬೇಕು. ಈ ಸಂಬAಧ ತಾವು ಸೋಮವಾರ ಕೆಆರ್‌ಎಸ್‌ಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

 

Translate »