ಲಕ್ಷ ವೃಕ್ಷ ಅಭಿಯಾನ; ಹಸಿರು ಮೈಸೂರು   ಫಾರಂನಿಂದ 15 ಸಾವಿರ ಗಿಡ ವಿತರಣೆ
ಮೈಸೂರು

ಲಕ್ಷ ವೃಕ್ಷ ಅಭಿಯಾನ; ಹಸಿರು ಮೈಸೂರು  ಫಾರಂನಿಂದ 15 ಸಾವಿರ ಗಿಡ ವಿತರಣೆ

June 4, 2020

ಮೈಸೂರು, ಜೂ.3(ಎಂಟಿವೈ)- `ಲಕ್ಷ ವೃಕ್ಷ’ ಅಭಿಯಾನದಲ್ಲಿ ವಿವಿಧೆಡೆ ಗಿಡ ನೆಡಲು ಹಸಿರು ಮೈಸೂರು ಫಾರಂನಿಂದ 15 ಸಾವಿರ ಗಿಡ ವಿತರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ.

ಹಸಿರು ಮೈಸೂರು ಫಾರಂನಲ್ಲಿ ಬುಧ ವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮೈಸೂ ರನ್ನು `ಹಸಿರು ನಗರ’ವಾಗಿಸುವ ನಿಟ್ಟಿನಲ್ಲಿ ಕಳೆದ ವರ್ಷ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಪರಿಸರ ಪ್ರೇಮಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರ ಸಭೆ ನಡೆಸ ಲಾಗಿತ್ತು. ಎಲ್ಲರ ಅಭಿಪ್ರಾಯದ ಮೇರೆಗೆ ಲಕ್ಷ ವೃಕ್ಷ ಅಭಿಯಾನಕ್ಕೆ ನಿರ್ಧರಿಸಲಾಗಿತ್ತು. ಕಳೆದ ವರ್ಷ ಸಾವಿರಾರು ಗಿಡ ನೆಡಲಾಗಿತ್ತು. ಅಭಿಯಾನದ 2ನೇ ವರ್ಷದ ಕಾರ್ಯ ಕ್ರಮದಲ್ಲಿ 15 ಸಾವಿರ ಗಿಡ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮುಂದಿನ ಪೀಳಿಗೆಗೆ ಸ್ವಚ್ಛ ವಾತಾವರಣ ಕೊಡುಗೆ ನೀಡುವ ನಿಟ್ಟಿನಲ್ಲಿ ಪರಿಸರ ಸಂರ ಕ್ಷಣೆ ಮಾಡುವ ಹೊಣೆ ಎಲ್ಲರ ಮೇಲಿದೆ. ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣದಿಂದ ಮರಗಳ ಹನನ ಹೆಚ್ಚಾಗುತ್ತಿದೆ. ಇದರಿಂದ ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗದಂತಹ ಸ್ಥಿತಿ ಸೃಷ್ಟಿಯಾಗಿದೆ. ಇದನ್ನು ಮನಗಂಡು ವಿವಿಧ ಸಂಸ್ಥೆಗಳ ಸಹಕಾರ ಪಡೆದು ಮೈಸೂರಲ್ಲಿ ಹಂತ ಹಂತ ವಾಗಿ ಲಕ್ಷ ಗಿಡ ನೆಟ್ಟು ಪೋಷಿಸುವ ಅಭಿ ಯಾನ ಕೈಗೊಳ್ಳಲಾಗಿದೆ. ಈ ಕಾರ್ಯ ಕ್ರಮದ ಉದ್ದೇಶವನ್ನು ಎಲ್ಲರಿಗೂ ತಿಳಿ ಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಪತ್ರ ಕರ್ತರ ಸಂಘ ಹಸಿರು ಫಾರಂನೊಂದಿಗೆ ಕೈಜೋಡಿಸಿದೆ. ನೆಟ್ಟ ಗಿಡವನ್ನು 3 ವರ್ಷ ಪೋಷಿಸುವ ಜವಾಬ್ದಾರಿ ಗಿಡ ಪಡೆದವ ರಿಂದ ನಿರ್ವಹಿಸುವ ನಿಟ್ಟಿನಲ್ಲಿ ಶ್ರೀ ಧರ್ಮ ಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಪತಂಜಲಿ ಸಂಸ್ಥೆ ನೆರವಾಗುತ್ತಿವೆ ಎಂದರು.

ಸಂಘ-ಸಂಸ್ಥೆಗಳು, ಸರ್ಕಾರಿ ಇಲಾಖೆ ಸೇರಿದಂತೆ ಗಿಡ ನೆಟ್ಟು ಕಾಪಾಡುವವರಿಗೆ ನೀಡಲೆಂದೇ ನಂಜನಗೂಡು ರಸ್ತೆಯಲ್ಲಿ ರುವ ಹಸಿರು ಮೈಸೂರು ಫಾರಂನಲ್ಲಿ ಸ್ವಂತ ಖರ್ಚಿನಿಂದ ಸಾವಿರಾರು ಗಿಡಗಳನ್ನು ಬೆಳೆಸಿದ್ದೇನೆ. ಯಾರೇ ಬಂದರೂ ಗಿಡ ವನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ, ಅವರು ಗಿಡಗಳನ್ನು 3 ವರ್ಷ ತಪ್ಪದೇ ಪೋಷಣೆ ಮಾಡುವುದಾಗಿ ವಚನ ನೀಡ ಬೇಕು. ಈ ನಡುವೆ ಮೈಸೂರಿನ ಕೆಲ ಶಿಕ್ಷಣ ಸಂಸ್ಥೆ, ಸರ್ಕಾರಿ ಕಚೇರಿಗಳ ಆವರಣದಲ್ಲಿ ವನೋತ್ಸವಕ್ಕಾಗಿ ಗಿಡ ಪಡೆಯಲು ಸಿದ್ಧರಾಗಿ ದ್ದಾರೆ. ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಯಲ್ಲಿ ನಾಳೆಯಿಂದ ಗಿಡ ವಿತರಣೆ ಕಾರ್ಯ ಕ್ರಮ ಆರಂಭಿಸುವುದಾಗಿ ತಿಳಿಸಿದರು.

ಮಾಜಿ ಮೇಯರ್ ಬಿ.ಎಲ್.ಬೈರಪ್ಪ, ಜೆ.ಪಿ.ನಗರದ ವಿವಿಧೆಡೆ 5 ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಬೆಳೆಸಿರುವುದು ಹಲವರಿಗೆ ಪ್ರೇರಣೆಯಾಗಿದೆ. ಇದರಿಂದ ಜೆ.ಪಿ.ನಗ ರದ ಸುತ್ತಲಿನ ವಾತಾವರಣ ಹಸಿರಿಂದ ಕಂಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ದೀರ್ಘಕಾಲದ ಪ್ರಯೋಜನ ಪಡೆಯಬಹು ದಾದ ಅತ್ತಿ, ಆಲ, ಬೇವು, ಮಹಾಗನಿ, ಮತ್ತಿ, ಹೊಂಗೆ, ಅರಳಿ, ಹಲಸು ಸೇರಿದಂತೆ 15 ಬಗೆಯ ಗಿಡಗಳನ್ನು ಬೆಳೆಸಲಾಗಿದೆ. ಈಗಾ ಗಲೇ ನಮ್ಮ ಫಾರಂನಿಂದ ಮುಡಾ, ಎಪಿ ಎಂಸಿ ಹಾಗೂ ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಅವರು ತಲಾ 1 ಸಾವಿರ ಗಿಡ ಕೇಳಿ ದ್ದಾರೆ. ಗಿಡ ವಿತರಿಸಲು ಕ್ರಮ ಕೈಗೊಳ್ಳಲಾ ಗಿದೆ ಎಂದರು. ಈ ಸಂದರ್ಭ ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಇತರರು ಇದ್ದರು

 

 

Translate »