ಯೋಗನರಸಿಂಹ ಸ್ವಾಮಿ  ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ
ಮೈಸೂರು

ಯೋಗನರಸಿಂಹ ಸ್ವಾಮಿ  ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ

November 24, 2018

ಮೈಸೂರು:  ಮೈಸೂರು ವಿಜಯನಗರದ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇ ರಿತು. ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾ ಪಕ ಪ್ರೊ. ಭಾಷ್ಯಂ ಸ್ವಾಮೀಜಿ ಅವರು ದೀಪ ಹಚ್ಚುವ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು. ದೇವ ಸ್ಥಾನದ ಆವರಣದಲ್ಲಿ ಒಪ್ಪಲಾಗಿ ಜೋಡಿಸಲಾಗಿದ್ದ ಹಣತೆಗಳನ್ನು ಯುವಕ-ಯುವತಿಯರು, ಮಹಿಳೆಯರು, ಮಕ್ಕಳು ಬೆಳಗಿಸಿ, ಹಬ್ಬದ ರೀತಿ ಆಚರಿಸಿದರು. ವಿಜಯನಗರ, ಹಿನಕಲ್ ಸುತ್ತಮುತ್ತಲಿನ ಬಡಾವಣೆಗಳಿಂದ ಆಗಮಿಸಿದ್ದ ಅಪಾರ ಭಕ್ತರು, ದೇವಸ್ಥಾನದ ಆವರಣದಲ್ಲಿ ಸಾಲಾಗಿ ಜೋಡಿಸಿದ್ದ ದೀಪಗಳನ್ನು ಬೆಳಗಿಸಿ ಭಕ್ತಿಯ ಪರಾಕಾಷ್ಟೆ ಮೆರೆದರು. ನಂತರ ದೇವಸ್ಥಾನದ ಮುಂಭಾಗದಲ್ಲಿ ಮಹಿಳೆ ಯರು ರಂಗೋಲಿ ಬಿಡಿಸಿ ದೀಪ ಬೆಳಗಿಸಿದರೆ, ಮತ್ತೆ ಕೆಲವರು ಯೋಗನರಸಿಂಹಸ್ವಾಮಿ ಸನ್ನಿದಿಯ ಮೆಟ್ಟಿಲುಗಳ ಮೇಲೂ ಹಣತೆಗಳನ್ನಿರಿಸಿ ದೀಪ ಬೆಳಗಿಸಿದರು. ನಂತರ ಲಕ್ಷ ದೀಪೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.

Translate »