ಕಳೆದ ವರ್ಷದ ಭಾರೀ ಮಳೆ, ನೆರೆ ಹಾವಳಿ ಕರಾಳ ಛಾಯೆ
ಕೊಡಗು

ಕಳೆದ ವರ್ಷದ ಭಾರೀ ಮಳೆ, ನೆರೆ ಹಾವಳಿ ಕರಾಳ ಛಾಯೆ

April 24, 2019
  • ಈ ಬಾರಿ ಅಗತ್ಯ ಮುನ್ನೆಚ್ಚರಿಕಾ ಕ್ರಮಕ್ಕೆ ಸಾರ್ವಜನಿಕರ ಮನವಿ
  • ಅಪರ ಜಿಲ್ಲಾಧಿಕಾರಿಗೆ ಮಳೆಗಾಲದ ಎಚ್ಚರಿಕಾ ಮಾಹಿತಿ ನೀಡಿದ ನಾಗರಿಕರು

ಮಡಿಕೇರಿ: ಕಳೆದ ವರ್ಷ ಸುರಿದ ಮಹಾಮಳೆಯ ಮಾರಣಹೋಮ ಮಾಸುವ ಮುನ್ನವೇ ಮತ್ತೊಂದು ಮಳೆಗಾಲ ಸಮೀ ಪಿಸಿದೆ. ಮುಂಗಾರು ಆರಂಭಕ್ಕೆ ಇನ್ನು ಒಂದು ತಿಂಗಳಷ್ಟೇ ಬಾಕಿ ಉಳಿದಿದ್ದು, ಬೆಟ್ಟ, ಗುಡ್ಡಗಳಿಂದ ಆವೃತವಾಗಿರುವ ಮಡಿಕೇರಿ ನಗರದಲ್ಲಿ ಆತಂಕದ ವಾತಾ ವರಣ ಮನೆ ಮಾಡಿದೆ.

ಈ ಬಾರಿಯೂ ಅತೀ ಮಳೆಯಾಗಿ ಅನಾಹುತಗಳು ಸಂಭವಿಸಬಹುದೆನ್ನುವ ಭಯವನ್ನು ವ್ಯಕ್ತಪಡಿಸಿರುವ ಸಾರ್ವಜನಿಕರು, ತಕ್ಷಣ ಜಿಲ್ಲಾಡಳಿತ ಹಾಗೂ ನಗರ ಸಭೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲಾ ಡಳಿತ ಭವನದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಶಿವರಾಜ್ ಅವರನ್ನು ಭೇಟಿಯಾದ ರಾಜಕೀಯ ಮುಖಂಡರು ಹಾಗೂ ಸಾರ್ವಜನಿಕರು ನಗರದಲ್ಲಿನ ಜಟಿಲ ಸಮಸ್ಯೆಗಳು ಮತ್ತು ಮಳೆಗಾಲದಲ್ಲಿ ಅಪಾ ಯಕ್ಕೆ ಸಿಲುಕುವ ಬಡಾವಣೆಗಳ ಬಗ್ಗೆ ಮಾಹಿತಿ ನೀಡಿದರು.
ಡಿಎಆರ್ ವಸತಿ ಗೃಹ ಹಾಗೂ ರೈಫಲ್ ರೇಂಜ್ ವ್ಯಾಪ್ತಿಯಲ್ಲಿ ಕೊಳಚೆ ನೀರು ಹರಿಯುವ ತೋಡಿನಲ್ಲಿ ಹೂಳು ತುಂಬಿ, ಕಾಡುಗಿಡಗಳು ಬೆಳೆದುಕೊಂಡಿವೆ. ಸರಾಗವಾಗಿ ನೀರು ಹರಿಯದೆ ದುರ್ವಾಸನೆ ವ್ಯಾಪಿಸಿದೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಇದೇ ಭಾಗದ ಬ್ಲಾಕ್ ನಂ. 14ರ ಪದೇಶದಲ್ಲಿ ತೋಡುಗಳು ತುಂಬಿ ಅದರ ಅಕ್ಕಪಕ್ಕದ ಜಾಗದಲ್ಲಿ ಭೂ ಕುಸಿತ ಗಳು ಉಂಟಾಗಿತ್ತು. ಆದರೆ ಮತ್ತೊಂದು ಮಳೆಗಾಲ ಸಮೀಪಿಸಿದರೂ ಹೂಳು ತೆಗೆ ಯುವ ಕಾರ್ಯವನ್ನು ಕೈಗೊಂಡಿಲ್ಲ. ಇದ ರಿಂದ ಕೊಳಚೆ ನೀರು ಹರಿಯದೆ ನಿಂತಲ್ಲೇ ನಿಂತಿದೆ. ಅಲ್ಲದೆ ಈ ಬಾರಿ ಮಳೆಯ ನೀರು ಹರಿಯಲು ಸಾಧ್ಯವೇ ಇಲ್ಲ ಎನ್ನುವ ಪರಿ ಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ತೋಡಿನ ತ್ಯಾಜ್ಯ ತೆಗೆದು ಕಾಡುಗಿಡಗಳನ್ನು ಕಡಿದು ಶುಚಿಗೊಳಿಸದಿದ್ದಲ್ಲಿ ಮಳೆಗಾಲದಲ್ಲಿ ಅಪಾಯ ಕಾದಿದೆ ಎಂದು ಪ್ರಮುಖರು ಎಡಿಸಿ ಬಳಿ ಆತಂಕ ವ್ಯಕ್ತಪಡಿಸಿದರು.

ಇದೇ ವಾರ್ಡ್‍ನ ಬಡಾವಣೆಗಳ ಚರಂಡಿ ಗಳು ಕೂಡ ಅಸಮರ್ಪಕವಾಗಿದ್ದು, ತ್ಯಾಜ್ಯ ತುಂಬಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಒಂದು ವೇಳೆ ಕಳೆದ ವರ್ಷದಷ್ಟೇ ಮಳೆ ಸುರಿದರೆ ಚರಂಡಿ ಮತ್ತು ತೋಡಿನ ನೀರು ಉಕ್ಕಿ ಹರಿದು ಸುತ್ತಮುತ್ತಲ ಮನೆಗಳು ಜಲಾವೃತಗೊಳ್ಳಲಿವೆ ಎಂದು ಸ್ಥಳೀಯ ನಿವಾಸಿಗಳು ಗಮನ ಸೆಳೆದರು.

ನಗರಸಭೆ ವ್ಯಾಪ್ತಿಯ ಸುಬ್ರಮಣ್ಯ ನಗರ, ಮುಳಿಯ ಓಂಕಾರ ಬಡಾವಣೆ, ರೈಫಲ್ ರೇಂಜ್, ಕನ್ನಿಕಾ ಬಡಾವಣೆ, ಪ್ರಕಾಶ ಬಡಾವಣೆ, ಕಾವೇರಿ ಬಡಾವಣೆ, ವಿದ್ಯಾ ನಗರ, ಐಟಿಐ ಹಿಂಭಾಗ, ಫೀ.ಮಾ. ಕಾರ್ಯಪ್ಪ ಕಾಲೇಜು ಹಿಂಭಾಗ, ಹಿಮ ವನ ಬಡಾವಣೆಗಳಲ್ಲಿ ಕಳೆದ ಮಳೆಗಾಲ ದಲ್ಲಿ ಭೂಕುಸಿತ ಉಂಟಾಗಿದೆ ಮತ್ತು ಮನೆಗಳು ಜಲಾವೃತಗೊಂಡಿವೆ. ಇದ ರಿಂದ ಹಾನಿಗೊಳಗಾದ ಮನೆÉಗಳ ಮಾಲೀ ಕರು ಮನೆಯ ಹಿಂಭಾಗ ಮತ್ತು ಮುಂಭಾಗ ತಡೆಗೋಡೆ ನಿರ್ಮಿಸಲು ಅನಾಹುತ ಸಂಭ ವಿಸಿದ ದಿನದಿಂದಲೂ ಜಿಲ್ಲಾಡಳಿತ ಹಾಗೂ ನಗರಸಭೆಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಇಲ್ಲಿಯವರೆಗೆ ಯಾರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಮಳೆಗಾಲದಲ್ಲಿ ನಗರದ ಹಳೆಯ ಬಸಪ್ಪ ಚಿತ್ರಮಂದಿರದ ಪಕ್ಕದಲ್ಲಿರುವ ಡೋಬಿಘಾಟ್‍ನಿಂದ ಗಲ್ಫ್ ಕ್ಲಬ್‍ವರೆ ಗಿನ ಪ್ರದೇಶದ ತೋಡುಗಳ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿ ನೀರು ಹರಿಯದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇಲ್ಲಿನ ಹೂಳು ಮತ್ತು ಕುಸಿದ ಮಣ್ಣನ್ನು ತೆರವು ಗೊಳಿಸುವ ಕಾರ್ಯವನ್ನು ಇಲ್ಲಿಯವರೆಗೆ ಕೈಗೊಂಡಿಲ್ಲ. ಮಳೆಗಾಲ ಮುಗಿದ ತಕ್ಷಣ ಇಲ್ಲಿ ಸಂಭವಿಸಿದ ಅನಾಹುತಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಸ್ಥಳೀಯರು ನೀಡಿದ ದೂರಿಗೂ ಸ್ಪಂದನೆ ದೊರೆತಿಲ್ಲ. ಇದೀಗ ಮಳೆಗಾಲ ಸಮೀಪಿಸುತ್ತಿದ್ದು, ನಿವಾಸಿ ಗಳಲ್ಲಿ ಆತಂಕ ಸೃಷ್ಟಿಯಾಗಿದೆ. ತೋಡು ಮತ್ತು ಚರಂಡಿಗಳನ್ನು ಆವರಿಸಿರುವ ತ್ಯಾಜ್ಯ ಹಾಗೂ ಕಾಡುಗಿಡಗಳನ್ನು ಒಂದು ತಿಂಗ ಳಲ್ಲಿ ತೆರವುಗೊಳಿಸಿ ನೀರು ಹರಿಯಲು ಸುಗಮ ವ್ಯವಸ್ಥೆ ಕಲ್ಪಿಸದೇ ಇದಲ್ಲಿ ಮಳೆ ಗಾಲದಲ್ಲಿ ಅನಾಹುತಗಳು ಎದುರಾಗು ವುದು ಖಚಿತವೆಂದು ಪ್ರಮುಖರು ಜಿಲ್ಲಾಡಳಿತವನ್ನು ಎಚ್ಚರಿಸಿದ್ದಾರೆ.

ಮಳೆಗಾಲ ಆರಂಭಕ್ಕೂ ಮೊದಲು ನಗರ ದೊಳಗಿನ ಅಪಾಯಕಾರಿ ಪ್ರದೇಶಗಳನ್ನು ಸಮೀಕ್ಷೆ ಮಾಡಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ನೀರು ಹರಿ ಯಲು ಅಡ್ಡಿಯಾಗಿರುವ ತ್ಯಾಜ್ಯಗಳನ್ನು ತೆರ ವುಗೊಳಿಸಿ ಸ್ವಚ್ಛ ಪರಿಸರವನ್ನು ನಿರ್ಮಿಸಬೇಕು ಎಂದು ಎಡಿಸಿ ಬಳಿ ಮನವಿ ಮಾಡಿದರು.

ವಿವಿಧ ಬಡಾವಣೆಗಳ ನಿವಾಸಿಗಳ ಸಹಿ ಇರುವ ಮನವಿ ಪತ್ರವನ್ನು ಪ್ರಮುಖರು ಎಡಿಸಿ ಶಿವರಾಜ್ ಅವರಿಗೆ ನೀಡಿ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎಂ.ಅಯ್ಯಪ್ಪ, ನಗರ ಸಭೆಯ ಮಾಜಿ ಸದಸ್ಯ ಸುನಿಲ್ ನಂಜಪ್ಪ, ಮಡಿಕೇರಿ ನಗರ ಕಾಂಗ್ರೆಸ್ಸಿನ ಉಪಾಧ್ಯಕ್ಷÀ ಎಂ.ಸುದಯ್ ನಾಣಯ್ಯ, ನಗರ ಜಾತ್ಯ ತೀತ ಜನತಾದಳದ ಪ್ರಧಾನ ಕಾರ್ಯ ದರ್ಶಿ ಕೊಟ್ಟಕೇರಿಯನ ಅಜಿತ್ ಹಾಗೂ ಉದ್ಯಮಿ ಮತ್ತು ರೈಫಲ್ ರೇಂಜ್ ನಿವಾಸಿ ಬಿ.ಎಸ್.ಹರಿಶ್ಚಂದ್ರ ಮತ್ತಿತರ ಪ್ರಮುಖರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.

Translate »