ಸೆ.1ರಿಂದಲೇ ಕೆರೆಗಳಿಗೆ ನೀರು ಹರಿಸಲು ಶಾಸಕ ಸೂಚನೆ
ಮೈಸೂರು

ಸೆ.1ರಿಂದಲೇ ಕೆರೆಗಳಿಗೆ ನೀರು ಹರಿಸಲು ಶಾಸಕ ಸೂಚನೆ

August 14, 2021

ಗುಂಡ್ಲುಪೇಟೆ,ಆ.13(ಸೋಮ್.ಜಿ)-ತಾಲೂಕಿನ ಉದ್ದೇಶಿತ ಕೆರೆಗಳಿಗೆ ಸೆ.1ರಿಂದಲೇ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಸಿ.ಎಸ್.ನಿರಂಜನಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣ ದಲ್ಲಿ ಏರ್ಪಡಿಸಿದ್ದ ತ್ರೈಮಾಸಿಕ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ತಿಂಗಳ ಮೊದಲ ದಿನ ದಿಂದಲೇ ತಾಲೂಕಿನ ಉದ್ದೇಶಿತ ಕೆರೆಗಳಿಗೆ ನೀರು ತುಂಬಿಸಿಸಲು ಮುಂದಾಗುವಂತೆ ಎಂದು ಕಾವೇರಿ ನೀರಾವರಿ ನಿಗಮದ ಇಂಜಿನಿ ಯರ್ ಮಹೇಶ್ ಅವರಿಗೆ ತಿಳಿಸಿದರು.

ನದಿ ನೀರು ತುಂಬಿಸುವ ಯೋಜನೆ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್ ಮಹೇಶ್ ಸೆ.15ರಿಂದ ನೀರು ಹರಿಸುವುದಾಗಿ ಹೇಳಿ ದರು. ಇದಕ್ಕೆ ಒಪ್ಪದ ಶಾಸಕರು, ಕಳೆದ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಸೆ.1ರಿಂದಲೇ ನೀರು ಹರಿಸ ಬೇಕು. ಕಳೆದ ಬಾರಿ ನಿಮ್ಮ ಇಲಾಖೆಯು ತಾಲೂಕಿನ ಕೆರೆಗಳಿಗೆ ನೀರು ತುಂಬಿಸದೆ ರೈತರಿಗೆ ಅನ್ಯಾಯವಾಗಿದೆ. ಆದರೆ ಈ ಬಾರಿ ಮಾತ್ರ ಹುತ್ತೂರಿನಿಂದ ವಡ್ಡಗೆರೆ ಮಾರ್ಗ ವಾಗಿ ಕಲ್ಲುಕಟ್ಟೆ ಡ್ಯಾಂ, ವಿಜಯಪುರ ಹಾಗೂ ನಲ್ಲೂರು ಅಮಾನಿ ಕೆರೆಗೆ ನೀರು ಹರಿಸ ಲೇಬೇಕು ಎಂದು ತಾಕೀತಿ ಮಾಡಿದರು.
ಕೆರೆಗಳ ಏರಿ, ಅಚ್ಚುಕಟ್ಟು ಅಭಿವೃದ್ಧಿ ಹಾಗೂ ನೀರು ಹರಿಸುವ ಮಾರ್ಗದಲ್ಲಿ ಕಾಲುವೆಗಳನ್ನು ನಿರ್ಮಿಸಲು ನೀರಾವರಿ ಇಲಾಖೆಯಿಂದ ಕೋಟ್ಯಾಂತರ ರೂ. ಅನುದಾನ ತಂದಿದ್ದು, ನೀರಿನ ಪೆÇೀಲು ತಪ್ಪಿಸಬೇಕು. ಅಲ್ಲದೆ ಸರ್ಕಾರದ ಆದೇಶ ದಂತೆ ಈ ಬಾರಿ ಗಾಂಧಿಗ್ರಾಮ ಏತನೀರಾವರಿ ಯೋಜನೆಯಲ್ಲಿ ಮಳವಳ್ಳಿ ಕೆರೆ ತುಂಬಿದ ನಂತರ ನಲ್ಲೂರು ಅಮಾನಿ ಕೆರೆಗೆ ನೀರು ಹರಿಸಬೇಕು ಎಂದು ನಿದೇರ್ಶಿಸಿದರು.
ಸಕಾಲದಲ್ಲಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸದೆ ಅನುದಾನ ಹಿಂದುಗಿ ಸಿದರೆ ಆಯಾ ಇಲಾಖೆಯ ಅಧಿಕಾರಿ ಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಆಲತ್ತೂರು ಜಯರಾಂ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ ನಿಗದಿತ ಗುಣಮಟ್ಟದ ಪೈಪ್ ಬಳಸದೆ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ. ಭೂಮಿಯ ಮೇಲ್ಮಟ್ಟದಲ್ಲಿಯೇ ಪೈಪ್‍ಗಳನ್ನು ಹೂಳಲಾಗುತ್ತಿದ್ದು, ಇದರ ಮೇಲೆ ವಾಹನಗಳ ಸಂಚರಿಸಿದರೆ ಒಡೆಯುವ ಭೀತಿ ಇದೆ. ಅಲ್ಲದೆ ಯಾವುದೇ ಗ್ರಾಮ ದಲ್ಲಿಯೂ ಕಾಮಗಾರಿ ಪೂರ್ಣ ಗೊಳಿಸದೆ ಸ್ಥಗಿತಗೊಳಿಸಲಾಗಿದೆ. ಸಂಚಾರಕ್ಕೆ ಅಡ ಚಣೆಯಾಗುತ್ತಿದೆ ಎಂದು ಗಮನ ಸೆಳೆದರು.

ಶೀಘ್ರವೇ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ಕುಡಿಯುವ ನೀರು ವಿಭಾಗದ ಎಇಇ ಪಲ್ಲವಿ ಅವರಿಗೆ ಶಾಸಕರು ಸೂಚಿಸಿದರು.
ತಾಲೂಕು ಕೇರಳದ ಗಡಿಯಲ್ಲಿ ರುವು ದರಿಂದ ಆರೋಗ್ಯ ಇಲಾಖೆ ಕೊರೊನಾ ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಬೇಕು. ಗಡಿ ಯಲ್ಲಿ ಬಿಗಿ ತಪಾಸಣೆ ಮಾಡುವ ಜತೆಗೆ ತಾಲೂಕಿನ ಯಾವುದೇ ಒಬ್ಬರಿಗೆ ಸೋಂಕು ಕಂಡು ಬಂದರೆ ಅವರ ಸಂಪರ್ಕಿತರನ್ನು ಪತ್ತೆಹಚ್ಚಿ ಸೋಂಕು ವ್ಯಾಪಿಸದಂತೆ ನಿಯಂತ್ರಿ ಸಬೇಕು ಎಂದುಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ತಹಸೀಲ್ದಾರ್ ರವಿಶಂಕರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎನ್. ಮಲ್ಲೇಶ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಜಯರಾಂ ಹಾಗೂ ವಿವಿಧ ಇಲಾಖೆ ಅಧಿಕಾರಗಳಿದ್ದರು.

Translate »