ಮೋದಿ ಸಾಧನೆ ಮನೆ ಮನೆಗೂ ಮುಟ್ಟಲಿ
ಚಾಮರಾಜನಗರ

ಮೋದಿ ಸಾಧನೆ ಮನೆ ಮನೆಗೂ ಮುಟ್ಟಲಿ

June 7, 2020

ಚಾಮರಾಜನಗರ, ಜೂ.6(ಎಸ್‍ಎಸ್)- ಕೇಂದ್ರ ದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ 2ನೇ ಅವಧಿಯ ಮೊದಲ ವರ್ಷದ ಸಾಧನೆಯನ್ನು ಜಿಲ್ಲೆಯ ಮನೆ ಮನೆಗೂ ತಿಳಿಸಲಾಗುವುದು ಎಂದು ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನಕುಮಾರ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, `ಮೋದಿ ಸರ್ಕಾರ-2, ಒಂದು ವರ್ಷ’ ಎಂಬ ಶೀರ್ಷಿಕೆಯ ಕರಪತ್ರವನ್ನು ಜಿಲ್ಲೆಯ ಎಲ್ಲಾ ಮನೆಗಳಿಗೆ ಹಂಚಲಾಗುವುದು ಎಂದರು.

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 2ನೇ ಅವಧಿಗೆ ಆಯ್ಕೆಯಾಗಿ ಒಂದು ವರ್ಷ ಪೂರೈಸಿ ದ್ದಾರೆ. ಮೊದಲ ಅವಧಿಯ 5 ವರ್ಷದ ಸಾಧನೆ ಯನ್ನು ಜನರು ಮೆಚ್ಚಿ ಮೋದಿ ಅವರನ್ನು ಪ್ರಚಂಡ ಬಹುಮತದಿಂದ 2ನೇ ಬಾರಿಗೆ ಆಯ್ಕೆ ಮಾಡಿ ದ್ದಾರೆ. ಮೋದಿ ಅವರು ಸಮರ್ಥ ಆಡಳಿತ ನಡೆಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವ ಲತ್ತುಗಳು ದೊರೆಯುವಂತೆ ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.

ಆರ್ಟಿಕಲ್ 370 ರದ್ಧತಿ, ಪೌರತ್ವ ತಿದ್ದುಪಡಿ ವಿಧೇ ಯೆಕ 2019, ರಾಮಮಮಂದಿರ ನಿರ್ಮಾಣಕ್ಕೆ ಓಂಕಾರ, ತ್ರಿವಳಿ ತಲಾಖ್, ಕರ್ತಾರ್‍ಪುರ್ ಕಾರಿಡಾರ್ ಯೋಜನೆ, ಬ್ರೂ-ರಿಯಾಂಗ್ ಒಪ್ಪಂದ, ಮೊದಲ ಸೇನಾ ಮುಖ್ಯಸ್ಥರ ನೇಮಕ, ಅಪಾಚೆÉ ಕೊಂಬ್ಯಾಟ್ ಹೆಲಿಕಾಪ್ಟರ್, ರಾಫೆಲ್ ಏರ್‍ಕ್ರಾಪ್ಟ್ ಭಾರತದಿಂದ ಸ್ವೀಕರಿಸಿದ ಐತಿಹಾಸಿಕ ನಿರ್ಧಾರಗಳನ್ನು ಮೋದಿ ಕೈಗೊಳ್ಳುವ ಮೂಲಕ ಸಮರ್ಥ ಆಡಳಿತ ನಡೆಸುತ್ತಿದ್ದಾರೆ ಎಂದರು.

ಜಿಜೆಪಿ ಜಿಲ್ಲಾಧ್ಯಕ್ಷ ಆರ್.ಸುಂದರ್ ಮಾತನಾಡಿ, ಆಯುಷ್ಮಾನ್ ಭಾರತ ಯೋಜನೆಯಡಿ 1 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅಟಲ್ ಪೆನ್ಷನ್ ಯೋಜನೆಯಡಿ ಕಳಡದ 5 ವರ್ಷ ಗಳಿಂದ 2.23 ಕೋಟಿ ಜನರ ನೋಂದಣಿ ಸೇರಿ ದಂತೆ ಮತ್ತಿತರ ಮಹತ್ತರ ಸಾಧನೆಯನ್ನು ಕೇಂದ್ರ ಸರ್ಕಾರ ಮಾಡಿದ್ದು, ಇದನ್ನು ಪ್ರತಿ ನಾಗರಿಕರಿಗೂ ತಲುಪಿಸಬೇಕು ಎಂದು ಪಕ್ಷ ಸೂಚಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಸಿ.ಗುರುಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್ ಇತರರಿದ್ದರು.