ಒಗ್ಗಟ್ಟಿನಿಂದ ಕೊರೊನಾಕ್ಕೆ ಕಡಿವಾಣ ಹಾಕೋಣ
ಮೈಸೂರು

ಒಗ್ಗಟ್ಟಿನಿಂದ ಕೊರೊನಾಕ್ಕೆ ಕಡಿವಾಣ ಹಾಕೋಣ

April 29, 2021

ಎಚ್.ಡಿ.ಕೋಟೆ, ಏ. 28(ಮಂಜು)-ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಒಗ್ಗಟ್ಟಿ ನಿಂದ ಕೈಜೋಡಿಸೋಣ ಎಂದು ಶಾಸಕ ಅನಿಲ್ ಚಿಕ್ಕಮಾದು ಕರೆ ನೀಡಿದ್ದಾರೆ.

ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ವಾರ್ಡಿನ ಎಲ್ಲಾ ಸದಸ್ಯರು ಅವರವರ ವಾರ್ಡಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಕಟಿಬದ್ಧರಾಗಿರಬೇಕು ಎಂದರು.

ಪೆÇಲೀಸ್ ಇಲಾಖೆಯವರು ಕೊರೊನಾ ಪಾಸಿಟಿವ್ ಆದ ವ್ಯಕ್ತಿಗಳು ಸುಖಾಸುಮ್ಮನೆ ಪಟ್ಟಣದಲ್ಲಿ ಓಡಾಡು ತ್ತಿದ್ದಾರೆ ಎಂದು ಸಾರ್ವಜನಿಕರು ದೂರು ರುವ ಹಿನ್ನೆಲೆಯಲ್ಲಿ, ಅಂತಹವರನ್ನು ತಡೆದು ತಿಳಿ ಹೇಳಬೇಕು. ಅನಗತ್ಯವಾಗಿ ವಾಹನಗಳು ಸಂಚರಿಸುವುದು ಹಾಗೂ ಅಲ್ಲಲ್ಲಿ ಗುಂಪು ಸೇರುವುದು, ಮಾಸ್ಕ್ ಇಲ್ಲದೆ ಓಡಾಡುತ್ತಿರುವುದರ ಬಗ್ಗೆ ಹೆಚ್ಚಿನ ಗಮನಹರಿಸಿ ಎಂದರು.

ಜನತಾ ಕಫ್ರ್ಯೂವನ್ನು ಸಾರ್ವಜನಿಕರು ಪಾಲಿಸಬೇಕು. ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಪುರಸಭೆ, ಪೆÇಲೀಸ್ ಇಲಾಖೆ ಕೊರೊನಾ ನಿಯಂ ತ್ರಿಸಲು ಹೆಚ್ಚಿನ ಜವಾಬ್ದಾರಿ ನಿರ್ವಹಿ ಸಬೇಕು ಎಂದರು. ಕೊರೊನಾ ಸೋಂಕಿ ತರಿಗೆ ಪಟ್ಟಣದಲ್ಲಿರುವ ಖಾಸಗಿ ಆಸ್ಪತ್ರೆ ಗಳಾದ ಸೆಂಟ್ ಮೇರಿಸ್, ವಿವೇಕಾನಂದ, ಆಸ್ಪತ್ರೆಯಲ್ಲಿ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಲು ತಿಳಿಸಿದರು.
ಎಚ್.ಡಿ.ಕೋಟೆ ಹಾಗೂ ಸರಗೂರು ಪಟ್ಟಣ್ಣ ವ್ಯಾಪ್ತಿಯಲ್ಲಿ ಸ್ಯಾನಿಟೈಸ್ ಮಾಡಿ ಸ್ವಚ್ಛÀತೆ ಕಾಪಾಡುವುದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ತಾಲೂಕಿನಲ್ಲಿ ವೈದ್ಯಕೀಯ ತರಬೇತಿ ಪಡೆದವರು ಕೊರೊನಾ ಸಂದ ರ್ಭದಲ್ಲಿ ಕೆಲಸ ಮಾಡಲು ಬಂದವರಿಗೆ, ಗೌರವಧನ ಕೊಡಿಸುವ ಭರವಸೆ ನೀಡಿದರು.

ತಾಲೂಕಿನಲ್ಲಿ ಕೊರೊನಾಕ್ಕೆ ಸಂಬಂದಿ üಸಿದಂತೆ ತಾಲೂಕು ಕಚೇರಿಯಲ್ಲಿ ಸಹಾಯವಾಣಿ ದೂರವಾಣಿ: 08228 255325 ತೆರೆಯಲಾಗಿದ್ದು, ಸಾರ್ವ ಜನಿಕರು ಸದುಪಯೋಗ ಪಡೆದು ಕೊಳ್ಳಿ ಎಂದು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಪುರಸಭಾ ಅಧ್ಯಕ್ಷೆ ಸರೋಜಮ್ಮ, ಉಪಾಧ್ಯಕ್ಷೆ ಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಸಿ.ನರಸಿಂಹ ಮೂರ್ತಿ, ತಾಪಂ ಸದಸ್ಯರಾದ ಮಿಲ್ ನಾಗರಾಜು, ರಾಜು, ಆಸಿಫ್, ಪ್ರೇಮ್ ಸಾಗರ್, ಸುಹಾಸಿನಿ, ಶಾಂತಮ್ಮ, ನಾಗಮ್ಮ, ಕವಿತಾ, ಎಪಿಎಂಸಿ ಅಧ್ಯಕ್ಷ ಜವರನಾಯಕ, ತಹಸೀ ಲ್ದಾರ್ ನರಗುಂದ, ಪುರಸಭೆ ಮುಖ್ಯಾಧಿ ಕಾರಿ ವಿಜಯಕುಮಾರ್, ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್, ಡಾ.ಹೆಲ್ಡಾ, ಭಾಸ್ಕರ್,ಇನ್ನು ಮುಂತಾದವರಿದ್ದರು.

Translate »