ಲೈಫ್ ಈಸ್ ಬ್ಯೂಟಿಫುಲ್ ಪೋಸ್ಟರ್ ಅನಾವರಣ
ಸಿನಿಮಾ

ಲೈಫ್ ಈಸ್ ಬ್ಯೂಟಿಫುಲ್ ಪೋಸ್ಟರ್ ಅನಾವರಣ

August 30, 2020

ದಿಯಾ ಚಿತ್ರದ ಮೂಲಕ ಗುರುತಿಸಿಕೊಂಡಿರುವ ನಟ ಪೃಥ್ವಿ ಅಂಬರ್ ಈಗ ಲೈಫ್ ಈಸ್ ಬ್ಯೂಟಿÀಫುಲ್ ಎಂಬ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಡಾಲಿ ಧನಂಜಯ್ ಈ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡಿ, ನಂತರ ಮಾತನಾಡುತ್ತ ಹೆಸರಿಗೆ ತಕ್ಕಂತೆ ಈ ಚಿತ್ರ ಸುಂದರವಾಗಿ ಮೂಡಿಬರಲಿ ಎಂದು ಹಾರೈಸಿದ್ದಾರೆ. ಅರುಣ್‍ಕುಮಾರ್.ಎಂ. ಮತ್ತು ಸಬು ಅಲೋಶಿಯಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇವರಿಬ್ಬರಿಗೂ ಎರಡು ದಶಕಗಳ ಕಾಲ ಸಾಕಷ್ಟು ಜಾಹೀರಾತು ಕಂಪನಿಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಈ ಚಿತ್ರದ ಪೆÇೀಸ್ಟರ್ ಕಥೆಯ ಗುಟ್ಟನ್ನು ತಿಳಿಸುತ್ತದೆ. ಖಾಲಿ ರಸ್ತೆಯಲ್ಲಿ ಸ್ಕೂಟರ್ ಸವಾರಿ ಮಾಡುವ ನಾಯಕನ ಪೆÇೀಸ್ಟರ್ ಹತ್ತು ಹಲವು ವಿಚಾರಗಳನ್ನು ಹೊತ್ತು ತಂದಿದೆ. ಜೊತೆಗೆ ಸೂರ್ಯ ಮತ್ತು ಪ್ರಕೃತಿಯೊಂದಿಗಿನ ಜೀವನದ ಸಮಾಗಮವನ್ನು ಇದು ತಿಳಿಸುತ್ತದೆ. ಆತನ ಸುಂದರ ದಿನಗಳನ್ನು ನೆನಪಿಸುವ ಹಲವು ಸಂಗತಿಗಳು ಇದರಲ್ಲಿರುವುದು ವಿಶೇಷ.

ಮಮ್ಮಿ, ದೇವಕಿಯಂಥ ಹಾರರ್, ಥ್ರಿಲ್ಲರ್ ಚಿತ್ರಗಳನ್ನು ನಿರ್ದೇಶಿಸಿದ ಲೋಹಿತ್ ಹೆಚ್. ಈಗ ಫ್ರೈಡೇ ಫಿಲಂಸ್ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದು, ಆ ಮೂಲಕ ತಮ್ಮ ಮೊದಲನೇ ಚಿತ್ರವನ್ನು ತಯಾರಿಸಲಿದ್ದಾರೆ. ಕಿಶೋರ್ ನರಸಿಂಹಯ್ಯ ಅವರು ಈ ಸಿನಿಮಾದ ಮತ್ತೊಬ್ಬ ನಿರ್ಮಾಪಕರಾಗಿದ್ದಾರೆ. ಅರೇನಾ ಅನಿಮೇಶನ್‍ನ ನಿರ್ದೇಶಕರಾಗಿರುವ ಉದ್ಯಮಿ ಕಿಶೋರ್ ನರಸಿಂಹಯ್ಯ ಅವರು ಲೋಹಿತ್. ಹೆಚ್. ಅವರ ಪಾಲುದಾರಿಕೆಯಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಸಿನಿಮಾಗಳನ್ನು ತಯಾರಿಸುವ ಗುರಿಯನ್ನು ಹೊಂದಿದ್ದಾರೆ.

Translate »