ಮೈಸೂರು, ಜೂ.23(ಎಂಟಿವೈ)- ಮೈಸೂರಿನ ಕ್ಯಾತ ಮಾರನಹಳ್ಳಿ ಟೆಂಟ್ ವೃತ್ತದ ಬಳಿ ಇರುವ ಬಾರ್ ಅಂಡ್ ರೆಸ್ಟೋರೆಂಟ್ ಎದುರು ಶ್ರೀ ಹುಲಿಯಮ್ಮ ದೇವರ ಟ್ರಸ್ಟ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಕ್ಯಾತ ಮಾರನಹಳ್ಳಿ, ಕೆ.ಎನ್.ಪುರ ಬಡಾವಣೆ ಮತ್ತು ಗೌಸಿಯಾ ನಗರ ನಿವಾಸಿಗಳು ಜನವಸತಿ ಪ್ರದೇಶದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ತೆರವುಗೊಳಿಸುವಂತೆ ಒತ್ತಾಯಿಸಿದರು.
ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ವೈನ್‍ಸ್ಟೋರ್ ನಿಂದ ಸ್ಥಳೀಯ ಜನರಲ್ಲಿ ಆತಂಕ ಮನೆ ಮಾಡಿದೆ. ಒಂದೆಡೆ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿದೆ. ಇಲ್ಲಿ ಬಾರ್ ಮುಂದೆ ನಿತ್ಯವೂ ನೂರಾರು ಮಂದಿ ಗುಂಪುಗೂಡಿ ಮದ್ಯ ಸೇವಿಸುತ್ತಾರೆ. ಇದರಿಂದ ಕೊರೊನಾ ಸೋಂಕು ಸ್ಥಳೀಯರಿಗೆ ಹರಡುವ ಅಪಾಯ ವಿದೆ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.
ಹಿಂದೆ ಬಡಾವಣೆಯಲ್ಲಿ ಸಾಮರಸ್ಯ ಹದಗೆಟ್ಟ ಸಂದರ್ಭ ದಲ್ಲೂ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ವೈನ್ಸ್ ಸ್ಟೋರ್ ಮುಂದೆ ಪ್ರತಿಭಟಿಸಲಾಗಿತ್ತು. ಆದರೆ ಈವರೆಗೂ ಅವನ್ನು ಬಂದ್ ಮಾಡಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಮಕ್ಕಳ ಭವಿಷ್ಯಕ್ಕಾಗಿ, ಇಲ್ಲಿನ ನಿವಾಸಿಗಳ ನೆಮ್ಮದಿಗಾಗಿ ಹೋರಾಟ ನಡೆಸುತ್ತಿ z್ದÉೀವೆ. ಬಾರ್, ವೈನ್ ಸ್ಟೋರ್ಸ್ ತೆರೆದಾಗಿನಿಂದ ಒಂದಲ್ಲಾ ಒಂದು ಸಮಸ್ಯೆ ಆಗುತ್ತಲೇ ಇದೆ. ಕುಡಿದ ಮತ್ತಿನಲ್ಲಿ ಕೊಲೆ ನಡೆದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾತಮಾರನಹಳ್ಳಿ, ಕೆ.ಎನ್.ಪುರ, ಗೌಸಿಯಾನಗರದ ನಿವಾಸಿಗಳು ಒಟ್ಟಾಗಿ ಈ ಹೋರಾಟ ನಡೆಸುತ್ತಿದ್ದು, ಬಾರ್ ಮುಚ್ಚದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ ದರು. ಮಾಜಿ ಉಪ ಮೇಯರ್ ಷಫೀ ಅಹಮದ್, ಮುಖಂಡರಾದ ಚಿಕ್ಕಯ್ಯ, ಪದ್ಮನಾಭ ಸೇರಿದಂತೆ ನೂರಾರು ಸ್ಥಳೀಯ ನಿವಾಸಿಗಳು ಪ್ರತಿಭಟನೆಯಲ್ಲಿದ್ದರು.