ಲಾಕ್‍ಡೌನ್; ಜನತೆ ಸಂಕಷ್ಟ ಸಂಬಂಧ ಕಾಂಗ್ರೆಸ್ ಮನವಿಗೆ ಸರ್ಕಾರ ಸ್ಪಂದಿಸಿಲ್ಲ
ಮೈಸೂರು

ಲಾಕ್‍ಡೌನ್; ಜನತೆ ಸಂಕಷ್ಟ ಸಂಬಂಧ ಕಾಂಗ್ರೆಸ್ ಮನವಿಗೆ ಸರ್ಕಾರ ಸ್ಪಂದಿಸಿಲ್ಲ

April 28, 2020

ಮೈಸೂರು, ಏ.27 (ಪಿಎಂ)- ನೋವೆಲ್ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ವಿಧಿಸಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ಸೂಕ್ತ ರೀತಿಯಲ್ಲಿ ಸರ್ಕಾರ ನೆರವಾಗಬೇಕೆಂಬ ಉದ್ದೇಶ ದಿಂದ ಕಾಂಗ್ರೆಸ್ ಟಾಸ್ಕ್‍ಫೋರ್ಸ್ ಕೋವಿಡ್-19 ವತಿಯಿಂದ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಮೈಸೂರು ಜಿಲ್ಲಾ ಮತ್ತು ನಗರ ಕಾಂಗ್ರೆಸ್ ಸಮಿತಿ ಆರೋಪಿಸಿದೆ.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜನತೆಯ ಹಿತದೃಷ್ಟಿ ಯಿಂದ ಕಾಂಗ್ರೆಸ್ ಸಲ್ಲಿಸಿದ ಮನವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಲಾಕ್‍ಡೌನ್ ನಡುವೆಯೂ ದಾಸ್ತಾನು ಉಳಿದಿ ರುವ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿವೆ. ಸರ್ಕಾರ ಈ ಒತ್ತಡಕ್ಕೆ ಮಣಿಯದೇ ಜನಜೀವನ ಸಹಜ ಸ್ಥಿತಿಗೆ ಮರಳು ವವರೆಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡ ಬಾರದು ಎಂದು ಆಗ್ರಹಿಸಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಲಾಕ್ ಡೌನ್‍ನಿಂದ ಅನೇಕ ವೃತ್ತ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ಸಂಕಷ್ಟ ಅನುಭವಿಸುತ್ತಿವೆ. ಹೀಗಾಗಿ ಇವುಗಳ ನೆರವಿಗೆ ಸರ್ಕಾರ ಧಾವಿಸಬೇಕೆಂದು ಸರ್ಕಾ ರಕ್ಕೆ ಕೆಪಿಸಿಸಿ ಮನವಿ ಸಲ್ಲಿಸಲು ನಿರ್ಧರಿಸಿದೆ. ರಾಜ್ಯ ಮತ್ತು ದೇಶದಲ್ಲಿ ಲಾಕ್‍ಡೌನ್ ಯಶಸ್ವಿಯಾಗಿದ್ದರೇ ಅದರಲ್ಲಿ ಮಾಧ್ಯಮಗಳ ಪಾತ್ರವೂ ಪ್ರಮುಖ. ಪತ್ರ ಕರ್ತರ ವೇತನ ಮತ್ತು ಉದ್ಯೋಗ ಭದ್ರತೆ ಸಂಬಂಧ ನೀತಿಯೊಂದನ್ನು ಜಾರಿಗೊಳಿಸಲು ಆಗ್ರಹಿಸಿ ಮನವಿ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಕೇರಳ ಸರ್ಕಾರ 150 ಕೋಟಿ ರೂ. ಮೀಸಲಿರಿಸಿ ಪತ್ರಕರ್ತರಿಗೆ ವೇತನ ನೀಡಲು ಮುಂದಾಗಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ ನಿರ್ಧಾರ ಕೈಗೊಳ್ಳ ಬೇಕು. ಪತ್ರಿಕೋದ್ಯಮ ಅಗತ್ಯ ಸೇವೆಗಳಡಿ ಬರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪತ್ರಕರ್ತರಿಗೆ 50 ಲಕ್ಷ ರೂ. ವಿಮೆ ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮ ವಹಿಸಬೇಕು. ಕೊರೊನಾ ಸಂಬಂಧ ಪತ್ರಕರ್ತರು ಸಾವನ್ನಪ್ಪಿದ್ದರೆ 50 ಲಕ್ಷ ರೂ. ಪರಿಹಾರ ಮತ್ತು ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ನೀಡ ಬೇಕು ಎಂದು ಒತ್ತಾಯಿಸಿದರು.

ಆರೋಗ್ಯ ಇಲಾಖೆ ಅಧಿಕಾರಿ, ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗೆ 4 ತಿಂಗಳ ವೇತನ ಪಾವತಿ ಯಾಗಿಲ್ಲ ಎಂದು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಸರ್ಕಾರ ಶೀಘ್ರದಲ್ಲಿ ವೇತನ ಬಿಡುಗಡೆ ಮಾಡಬೇಕು. ಸಾಲದ ಕಂತು ಮತ್ತು ಬಡ್ಡಿ ಪಾವತಿಗೆ ಜೂನ್‍ವರೆಗೆ ಕೇಂದ್ರ ಸರ್ಕಾರ ವಿನಾಯಿತಿ ನೀಡಿದೆ. ಆದರೆ ಎಸ್‍ಎಂಎಸ್ ಮೂಲಕ ಕಂತು ಮತ್ತು ಬಡ್ಡಿ ಪಾವತಿಸಲು ಬ್ಯಾಂಕುಗಳು ಹಾಗೂ ಎಲ್‍ಐಸಿ ಗ್ರಾಹಕರ ಮೊಬೈಲ್‍ಗಳಿಗೆ ಸಂದೇಶ ಕಳುಹಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಸರ್ಕಾರ ಜನತೆಗೆ ನೀಡುವ ಉಚಿತ ಅಕ್ಕಿಯನ್ನು ಕೆಲವರು ಕೆಜಿಗೆ 50 ರೂ.ನಂತೆ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದಾರೆ. ಈ ಅಕ್ರಮದಲ್ಲಿ ಕೆಲವರು ಬಿಜೆಪಿ ಪಕ್ಷಕ್ಕೆ ಸೇರಿದವರೂ ಇದ್ದಾರೆ. ಅವರೆಲ್ಲರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ ಮಾತ ನಾಡಿ, ನಮ್ಮ ವಾರ್ಡ್‍ಗಳಲ್ಲೇ ಪೌರಕಾರ್ಮಿಕರು ತಮಗೆ ಮಾಸ್ಕ್, ಗ್ಲೌಸ್ ನೀಡಿಲ್ಲ ಎಂದು ಹೇಳು ತ್ತಿದ್ದಾರೆ. ಹೀಗಾದರೆ ಕೊರೊನಾ ಸೋಂಕು ಹರಡಲು ದಾರಿ ಮಾಡಿದಂತಲ್ಲವೇ? ಎಂದು ಪ್ರಶ್ನಿಸಿದರಲ್ಲದೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಸರಿಯಾಗಿ ಮಾಸ್ಕ್‍ಗಳನ್ನು ನೀಡಿಲ್ಲ ಎಂದು ಆರೋಪಿಸಿದರು.

ತರಕಾರಿ ಮತ್ತು ಹಣ್ಣು ಮಾರಾಟ ಸಂಬಂಧ ಕೆಲ ವರು ಒಂದು ಕೋಮಿನ ವ್ಯಾಪಾರಿಗಳನ್ನು ಗುರಿ ಯಾಗಿಸಿ ಸಾಮಾಜಿಕ ಜಾಲತಾಣದಲ್ಲಿ ಅವರಿಂದ ಖರೀದಿ ಮಾಡದಂತೆ ಪ್ರಚಾರ ಮಾಡುತ್ತಿದ್ದಾರೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪಿಎಂ ಕೇರ್ ಫಂಡ್ ಮತ್ತು ಸಿಎಂ ಕೇರ್ ಫಂಡ್‍ಗೆ ಸಾರ್ವಜನಿ ಕರು ಹಾಗೂ ವಿವಿಧ ಕಂಪನಿಗಳು ಅಪಾರ ಪ್ರಮಾಣ ದಲ್ಲಿ ದೇಣಿಗೆ ಬರುತ್ತಿದೆ. ಈ ಸಂಬಂಧ ಖರ್ಚು-ವೆಚ್ಚದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡ ಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಲಾಕ್‍ಡೌನ್ ಹಿನ್ನೆಲೆಯಲ್ಲಿ ದೇಶ ಮತ್ತು ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಶುರುವಾಗಲಿದೆ. ಹೀಗಾಗಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರ ವಿವಿಧ ಭತ್ಯೆಗಳನ್ನು ಸ್ಥಗಿತಗೊಳಿ ಸಲು ಸರ್ಕಾರ ಮುಂದಾಗಬೇಕು. ಆ ಮೂಲಕ ಈ ಆರ್ಥಿಕ ಸಂಪನ್ಮೂಲವನ್ನು ಪ್ರಸ್ತುತ ಸದ್ಬಳಕೆ ಮಾಡಿಕೊಳ್ಳಲು ಅವಕಾಶವಿದೆ ಎಂದರು.

Translate »